ಮಂಡ್ಯ: ಹನುಮ ಧ್ವಜ ತೆರವು ವಿವಾದ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿದೆ. ಧ್ವಜ ತೆರವು ವಿವಾದನ್ನು ಕೆರಳಿರುವ ಹಿಂದೂ ಮುಖಂಡರನ್ನು ಸಮಾಧಾನಪಡಿಸುವ ಪ್ರಯತ್ನ ಮಂಡ್ಯ ಜಿಲ್ಲಾಧಿಕಾರಿಯಿಂದ ನಡೆದಿದೆ.
ಕೆರೆಗೋಡು ಹನುಮ ಧ್ವಜ ತೆರವು ವಿವಾದ ಸಂಬಂಧ ಜಿಲ್ಲಾಧಿಕಾರಿಗಳು ಮುಖಂಡರ ಉಪಸ್ಥಿತಿಯಲ್ಲಿ ಸೋಮವಾರ ಸಂಧಾನ ಸಭೆ ನಡೆದಿದ್ದು, ಮಂಡ್ಯ ಬಂದ್ ತಾತ್ಕಾಲಿಕವಾಗಿ ಕೈಬಿಡಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ.
ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಭಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳು ಫೆಬ್ರವರಿ ೯ರಂದು ಮಂಡ್ಯ ಬಂದ್’ಗೆ ಕರೆ ಕೊಟ್ಟಿತ್ತು. ಹಿಂದೂ ಸಂಘಟನೆಗಳ ವಿರುದ್ಧ ಪ್ರಗತಿಪರ ಸಂಘಟನೆಗಳು ಫೆಬ್ರವರಿ 7ರಂದು ಬಂದ್ಗೆ ಕರೆ ಕೊಟ್ಟಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸಭೆ ಸಂಧಾನ ನಡೆಸಿದ ಜಿಲ್ಲಾಧಿಕಾರಿಗಳು ಉಭಯ ಗುಂಪುಗಳ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡೂ ಗುಂಪುಗಳ ಪ್ರಮುಖರೂ ಬಂದ್ ಕರೆಯನ್ನು ವಾಪಸ್ ಪಡೆಯಲು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.





















































