ಮುಂಬಯಿ: ಹಿಂದೂ ಸಂಘಟನೆಯಾಗಿ ಗಮನಸೆಳೆದಿದ್ಸ ಶಿವಸೇನೆ, ಬದಲಾದ ಪರಿಸ್ಥಿತಿಯಲ್ಲಿ ತನ್ನ ಸೈದ್ದಾಂತಿಕ ಎದುರಾಳಿ ಪಕ್ಷ ಕಾಂಗ್ರೆಸ್ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿತ್ತು. ಇದೀಗ ಪತನದಂಚಿನಲ್ಲಿರುವ ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಮಹಾರಾಷ್ಟ್ರದ ಪ್ರಮುಖ ನಗರಗಳ ಹೆಸರನ್ನು ಬದಲಾಯಿಸಿದೆ.
ಈ ಬೆಳವಣಿಗೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಸಿ.ಟಿ.ರವಿ, ಸಿಎಂ ಉದ್ದವ್ ಠಾಕ್ರೆ ಅವರ ನಿರ್ಧಾರ ಕಂಡು ನಗು ತಡೆಯಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.
ಔರಂಗಾಬಾದ್ ನಗರದ ಹೆಸರನ್ನು ‘ಸಂಭಾರ್ಜಿನಗರ’ ಎಂದೂ, ಒಸ್ಮಾನಾಬಾದ್ ನಗರವನ್ನು ‘ಧಾರಶಿವ್’ ಎಂದು ಮರುನಾಮಕರಣ ಮಾಡುವ ತೀರ್ಮಾನವನ್ನು ಮಹಾರಾಷ್ಟ್ರ ಸಂಪುಟ ಇಂದು ಕೈಗೊಂಡಿದೆ. ಇದೇ ವೇಳೆ, ನವಿ ಮುಂಬೈ ವಿಮಾನ ನಿಲ್ದಾಣದ ಹೆಸರನ್ನು ‘ಡಿ.ಬಿ.ಪಾಟೀಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಕುರಿತಂತೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಸಿ.ಟಿ.ರವಿ, ಮಹಾ ವಸೂಲಿ ಅಘಾಡಿ ಸರ್ಕಾರದ ಈ ನಿರ್ಧಾರ ನಗು ತರಿಸಿದೆ. ಈ ನಗು ನಿಲ್ಲುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ಅಧಿಕಾರ ಹಂಚಿಕೊಂಡು ಕಳೆದ ಮೂರು ವರ್ಷಗಳಲ್ಲಿ ಜಾತ್ಯತೀತ ನಿಲುವು ತಾಳಿದ್ದ ಉದ್ದವ್ ಠಾಕ್ರೆ, ಇದೀಗ ತಮ್ಮ ಕೊನೆಯ ಸಂಪುಟ ಸಭೆಯಲ್ಲಿ ಹಿಂದುತ್ವದ ನಿರ್ದಾರ ಕೈಗೊಂಡಿದ್ದಾರೆ ಎಂದು ರವಿ ಲೇವಡಿ ಮಾಡಿದ್ದಾರೆ.
Can’t stop laughing at the decision taken by the Maha Vasooli Aghadi government to rename Aurangabad as #Sambhajinagar.
After indulging in “secular politics” for the last three years, CM Uddhav Thackeray is trying to prove his Hindutva credentials in his last cabinet meeting.
— C T Ravi 🇮🇳 ಸಿ ಟಿ ರವಿ (@CTRavi_BJP) June 29, 2022






































































