ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಕೇಸ್‌ಗಳು ಹೆಚ್ಚುತ್ತಲೇ ಇದ್ದು, ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಒಂದೇ ದಿನ 20 ಸಾವಿರ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದ್ದು ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ.
ಈ ನಡುವೆ, ಕೆಲ ದಿನಗಳ ಹಿಂದಷ್ಟೇ ಕಠಿಣ ನಿಯಮಗಳನ್ನೊಳಗೊಂಡ ಮಾರ್ಗಸೂಚಿ ಬೊಡುಗಢ ಮಾಡಿರುವ ಸರ್ಕಾರ ಸೋಮವಾರ ಸರ್ವಪಕ್ಷ ಕರೆದಿದ್ದು ಮತ್ತಷ್ಟು ನಿಷ್ಟುರ ಕ್ರಮಗಳ ಜಾರಿಗೆ ತೀರ್ಮಾನಿಸಿದೆ.. ಸೋಂಕು ಮಿತಿಮೀರಿ ಚ್ಯಾಪಿಸುತ್ತಿರುವ ಬೆಂಗಳೂರಿನಲ್ಲಿ ಸೋಂಕಿನಿಂದಾಗಿ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಹಾಗಾಗಿ ಲಾಕ್‌ಡೌನ್ ರೀತಿಯಲ್ಲೇ ಟಫ್ ರೂಲ್ಸ್ ಜಾರಿಗೆ ಸರ್ಕಾರ ರೂಪುರೇಷೆ ಸಿದ್ದಪಡಿಸಿದೆ ಎನ್ನಲಾಗುತ್ತಿದೆ.
ಈ ಸಂಬಂಧ ಭಾನುವಾರ, ಗೃಹಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ಅನೌಪಚಾರಿಕವಾಗಿ ಪೂರ್ವಭಾವಿ ಚರ್ಚೆ ನಡೆಸಿದ್ದಾರೆ. ಬೆಂಗಳೂರಿನ ಕೋವಿಡ್ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದಲೂ ವಿವರ ಪಡೆದಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೆಲ ಬಿಗಿ ಕ್ರಮ ಕೈಗೊಳ್ಳುವುದು ಅವಶ್ಯ. ಸರ್ವಪಕ್ಷ ಸಭೆ ಬಳಿಕ ಸೋಮವಾರ ಸಂಜೆ ಎಲ್ಲವೂ ನಿರ್ಧಾರವಾಗಲಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚರ್ಚೆ ನಡೆದ ಬಳಿಕ ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ. ಎಂದು ಅವರು ಲಾಕ್‌ಡೌನ್ ರೀತಿಯ ನಿಯಮ ಜಾರಿಯ ಸುಳಿವು ನೀಡಿದ್ದಾರೆ.