ಯಾದಗಿರಿ: ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಹಪುರ ಬಳಿ ನಡೆದಿದೆ.
ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಾಲ್ವರು ಮಕ್ಕಳೊಂದಿಗೆ ಪೋಷಕರು ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿದ್ದು, ಮೃತರನ್ನು ಭೀಮರಾಯ (45), ಪತ್ನಿ ಶಾಂತಮ್ಮ (40), ಮಕ್ಕಳಾದ ಸುಮಿತ್ರಾ (12) , ಶ್ರೀದೇವಿ (10), ಶಿವರಾಜ (7), ಲಕ್ಷ್ಮೀ (4) ಎಂದು ಗುರುತಿಸಲಾಗಿದೆ.
ರೈತ ಭೀಮರಾಯ ತನ್ನ 3 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದರು. ಕೃಷಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಪ್ರಸ್ತುತ ಸಂಕಟ ಕಾಲದಲ್ಲಿ ಸಾಲ ತೀರಿಸಲಾಗದೆ ಇಂದು ಇಡೀ ಕುಟುಂಬ ಸಾವಿಗೆ ಶರಣಾಗಿದೆ ಎನ್ನಲಾಗಿದೆ.