ಬೆಂಗಳೂರು: ವೇದಗಳು ಭಾರತೀಯರಿಗೆ ಮಾತ್ರವಲ್ಲ; ಸತ್ಯ ಅರಸುವ ವಿಶ್ವದ ಯಾವುದೇ ದೇಶ-ಯಾವುದೇ ಧರ್ಮದ ವ್ಯಕ್ತಿಗೂ ಅತ್ಯಂತ ಪವಿತ್ರ ಗ್ರಂಥಗಳ ಸಂಕಲನ ಎನಿಸಿವೆ” ಎಂದು ರಾಮಕೃಷ್ಣ ಮಠದ ಸ್ವಾಮಿ ವೀರೇಶಾನಂದ ಸರಸ್ವತಿ ಅಭಿಪ್ರಾಯಪಟ್ಟಿದ್ದಾರೆ.
ಜೆ.ಪಿ.ನಗರದ ಶ್ರೀ ಅರೋಬಿಂದೊ ಸಂಕೀರ್ಣದಲ್ಲಿ ಸಾಕ್ಷಿ ಟ್ರಸ್ಟ್, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಅಮೆರಿಕದ ವೇದಿಕ್ ವೆಲ್ನಸ್ ವಿಶ್ವವಿದ್ಯಾಲಯ ಇನ್ನಿತರ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ ‘ಲಿವಿಂಗ್ ವೇದ’ ಚಿಂತನ-ಮಂಥನ ಅಧಿವೇಶನವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಭಾರತೀಯ ವೇದಗಳು ಜೀವನದ ಅವಿಭಾಜ್ಯ ಅಂಗ. ಮಾನವೀಯತೆಯ ಮೇರು ಕೃತಿಗಳು; ಸನಾತನ ಧರ್ಮದ ಆಧಾರಗಳು ಹೌದು. ವಿಶೇಷವಾಗಿ ಭಾರತೀಯರು ವೇದಗಳು ತಮ್ಮ ಸಂಸ್ಕೃತಿ, ಸಂಸ್ಕಾರದ ತವರು ಮನೆಯೆಂದು ಭಾವಿಸಿದ್ದಾರೆ. ಆಧ್ಯಾತ್ಮಿಕ ಜ್ಞಾನದ ಲಾಭವನ್ನೂ ಪಡೆಯುತ್ತಿದ್ದಾರೆ. ಮುಖ್ಯವಾಗಿ ಭಾರತ ಮತ್ತು ವಿದೇಶಗಳಲ್ಲಿ ಕಳೆದ ಇನ್ನೂರು ವರ್ಷಗಳಿಂದ ವೇದಗಳನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದ್ದು, ಇಂದಿನ ದಿನಮಾನಗಳಲ್ಲಿ ಅತ್ಯಂತ ಪ್ರಸ್ತುತ ಎನಿಸಿವೆ ಎಂದರು.
ವೇದಗಳ ಜ್ಞಾನಕ್ಕೆ ಅಂತ್ಯವಿಲ್ಲ..!!
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಮಕರಂದ ಪರಾಜಪೆ ಮಾತನಾಡಿ, ಪ್ರಾಚೀನ ಭಾರತೀಯರ ಇತಿಹಾಸದ ಅತ್ಯುತ್ತುಮ ಮೂಲ ಎಂದರೆ ಅದು ವೈದಿಕ ಸಾಹಿತ್ಯ. ಇದಕ್ಕೆ ಪೂರಕವಾದ ವೇದಗಳು ಭಾರತೀಯ ಗ್ರಂಥಗಳನ್ನು ರೂಪಿಸಿದ್ದು, ವೈದಿಕ ಧರ್ಮದ ವಿಚಾರಗಳು ಮತ್ತು ಆಚರಣೆಗಳು ನಾಲ್ಕು ವೇದಗಳಿಂದ ಕ್ರೂಢೀಕರಿಸಲ್ಪಟ್ಟಿವೆ. ಇಂದಿಗೂ ವೇದಗಳು ಭಾರತೀಯರ ಆಧ್ಯಾ ಎಂದರು.