ಪಣಜಿ: ಗಾನಕೋಗಿಲೆ ಲತಾ ಮಂಗೇಶ್ಕರ್ ನಿಧನದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶೋಕ ವ್ಯಕ್ತಪಡಿಸಿದ್ದಾರೆ. ಮಾಜಿ ಸಂಸ್ಕೃತಿ ಸಚಿವರೂ ಆದ ಸಿ.ಟಿ.ರವಿ ಅವರು ಈ ಶ್ರೇಷ್ಠ ಗಾಯಕಿ ಬಗ್ಗೆ ತಮ್ಮದೇ ದಾಟಿಯಲ್ಲಿ ಗುಣಗಾನ ಮಾಡುತ್ತಾ ಅಗಲಿಕೆಯ ನೋವನ್ನು ಹಂಚಿಕೊಂಡಿದ್ದಾರೆ.
ಗೋವಾ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿರುವಾಗಲೇ ಸಿ.ಟಿ.ರವಿ ಅವರಿಗೆ ಲತಾ ಮಂಗೇಶ್ಕರ್ ಅವರು ವಿಧಿವಶರಾದ ಸುದ್ದಿ ತಲುಪಿದೆ. ಮಹಾರಾಷ್ಟ್ರ ಪ್ರದೇಶ ಬಿಜೆಪಿ ಉಸ್ತುವಾರಿ ನಾಯಕರೂ ಆಗಿರುವ ಸಿ.ಟಿ.ರವಿ ಅವರು ಲತಾ ಮಂಗೇಶ್ಕರ್ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ದುಃಖ ಹಂಚಿಕೊಂಡರು.
ಸಂಗೀತವನ್ನು ವೃತ್ತಿ-ಪ್ರವೃತ್ತಿಯಾಗಿಸಿಕೊಂಡಿದ್ದಷ್ಟೇ ಅಲ್ಲ, ಸಂಗೀತವನ್ನೇ ಬದುಕೆಂದು ಪರಿಗಣಿಸಿದವರು ಲತಾ ಮಂಗೇಶ್ಕರ್. ಅವರು ಸಿನಿಮಾ ಹಾಡುಗಳಿಗಷ್ಟೇ ಸ್ವರವಾಗಿದ್ದಲ್ಲ; ಭಕ್ತಿ ಗಾಯನದ ಮೂಲಕ ಸ್ವರದಲ್ಲೂ ದೇವರನ್ನು ತೋರಿಸಿದವರು. ಅಷ್ಟೇ ಅಲ್ಲ, ಭಕ್ತಿ ಗಾಯನದ ಮೂಲಕ ಯುವ ಜನರಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದವರು ಲತಾ ಮಂಗೇಶ್ಕರ್ ಎಂದು ಸಿ.ಟಿ.ರವಿ ಹೇಳಿಕೊಂಡಿದ್ದಾರೆ. ಸಂಗೀತ ಲೋಕವನ್ನು ಶ್ರೀಮಂತಗೊಳಿಸಿರುವ ಅವರೊಬ್ಬರು ಭಾರತ ಸಂಸ್ಕೃತಿಯ ಧೀಮಂತ ವ್ಯಕ್ತಿ ಎಂದ ರವಿ, ಲತಾ ಅಗಲಿಕೆಯಿಂದ ದೇಶತುಂಬೆಲ್ಲಾ ನೋವು ಆವರಿಸಿಕೊಂಡಿದೆ ಎಂದಿದ್ದಾರೆ.
‘ಭಾರತದ ಪಾಲಿಗೆ ‘ಗೋಲ್ಡನ್ ವಾಯ್ಸ್’ ಎಂದೇ ಗುರುತಾಗಿದ್ದ ಲತಾ ಮಂಗೇಶ್ಕರ್ ಅವರು ತಮ್ಮ ಸ್ವರ ಮಾಧುರ್ಯ ಮೂಲಕವೇ ಯುವಜನರಲ್ಲಿ ದೇಶ ಭಕ್ತಿ ತುಂಬುತ್ತಿದ್ದರು. ಅವರು ಎಲ್ಲರ ಪಾಲಿಗೂ ಜೀವಮಾನದ ನೆನಪು’ ಎಂದಿರುವ ಸಿ.ಟಿ.ರವಿ, ತಾವು ಮಾಡಿರುವ ಟ್ವೀಟ್‌ನಲ್ಲೂ ಈ ರೀತಿಯ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ಲತಾ ಮಂಗೇಶ್ಕರ್ ಅವರ ಹಾಡಿನ ತುಣುಕೊಂದನ್ನು ಹಂಚಿಕೊಂಡಿದ್ದಾರೆ.
India’s Golden Voice that gave the World some of the best songs for decades has left us for heavenly abode.
Thank You Lata Didi for giving us memories that will stay with us for a lifetime.
May You attain Sadgati 🙏#LataMangeshkar pic.twitter.com/TkhfaGJTxk
— C T Ravi 🇮🇳 ಸಿ ಟಿ ರವಿ (@CTRavi_BJP) February 6, 2022