ಬೆಂಗಳೂರು: ಕೊರೋನಾ ಸೋಂಕುನಿಂಯಂತ್ರಣ ಸಂಬಂಧ ರಾಜ್ಯದಲ್ಲಿ ಲಾಕ್‌ಡೌನ್ ರೀತಿ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಈ ಪರಿಸ್ಥಿತಿಯಿಂದಾಗಿ ಕಾರ್ಮಿಕರು ಸಂತ್ರಸ್ತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಮೂಹಕ್ಕೆ ಆರ್ಥಿಕ ನೆರವು ಘೋಷಿಸಬೇಕೆಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.
ಈ ಸಂಬಂಧ ಕಾರ್ಮಿಕ ಸಂಘಟನೆಗಳ ಪ್ರಮುಖರ ನಿಯೋಗ ಕಾರ್ಮಿಕ ಸಚಿವ ಶ್ರೀ ಶಿವರಾಮ್ ಹೆಬ್ನಾರ್ ಅವರನ್ನು ವಿಕಾಸಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದೆ. ಸರ್ಕಾರ ಘೋಷಿಸಿರುವ ಲಾಕ್ ಡೌನ ನಿಂದಾಗಿ ರಾಜ್ಯದ ಸಂಘಟಿತ ಅಸಂಘಟಿತ ಸ್ಕೀಂ ನೌಕರರು, ಗುತ್ತಿಗೆ ಹೊರಗುತ್ತಿಗೆ ಹಾಗೂ ವಲಸೆ ಕಾರ್ಮಿಕರು ಎದುರಿಸಬಹುದಾದ ಸಂಕಷ್ಟಗಳು ಮತ್ತು ರಾಜ್ಯ ಸರ್ಕಾರಿ ಕೂಡಲೇ ಈ ವಿಭಾಗದ ಕಾರ್ಮಿಕರ ಬದುಕಿನ ರಕ್ಷಣೆಗಾಗಿ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಿ ಸುದೀರ್ಘವಾದ ಚರ್ಚೆ ನಡೆಸಿತು. ಮನವಿಯನ್ನು ಸ್ವೀಕರಿಸಿದ ಸಚಿವರು ಈ ಬಗ್ಗೆ ಸೂಕ್ತ ಕ್ರಮವಹಿಸುವ ಭರವಸೆ ನೀಡಿದರು.
ಸಚಿವರೊಂದಿಗ ನಡೆದ ಸಭೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಜಿ. ಕಲ್ಪನಾ ಕಾರ್ಮಿಕ ಆಯುಕ್ತರು ಹಾಗೂ ಕಟ್ಟಡ ಕಾರ್ಮಿಕ ಮಂಡಳಿ ಕಾರ್ಯದರ್ಶಿ ಡಾ ಅಕ್ರಂ ಪಾಷಾ ಉಪಸ್ಥಿತರಿದ್ದರು.
ಸಿಐಟಿಯು ರಾಜ್ಯ ಆಧ್ಯಕ್ಷರಾದ ಎಸ್. ವರಲಕ್ಷ್ಮೀ,, ಪಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ರಾಜ್ಯ ಕಾರ್ಯದರ್ಶಿ ಗಳಾದ ಕೆ.ಎನ್.ಉಮೇಶ್, ಕೆ.ಮಹಾಂತೇಶ ಸಿಐಟಿಯು ರಾಜ್ಯ ಸಮಿತಿ ಪರವಾಗಿ ತಯಾರಿಸಲಾದ ತಯಾರಿಸಲಾದ 11 ಬೇಡಿಕೆಗಳನ್ನು ವಿವರವಾಗಿ ಸಚಿವರು ಮತ್ತು ಅಧಿಕಾರಿಗಳ ಮುಂದೆ ಮಂಡಿಸಿದರು.