ದೆಹಲಿ: ರಾಜ್ಯ ಸರ್ಕಾರದ ಪ್ರತಿಷ್ಠಿತ ಸಾರಿಗೆ ನಿಗಮ KSRTC ಪಾಲಿಗೆ ಮತ್ತೊಂದು ಪ್ರತಿಷ್ಠಿತ ಪುರಸ್ಕಾರ ಸಿಕ್ಕಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) STARS OF THE INDUSTRY- EXCELLENCE AND LEADERSHIP – Most Admired Company of the year ಪ್ರಶಸ್ತಿಯನ್ನು ಪಡೆದಿದೆ.
KSRTCಗೆ ವಿನೂತನ ಕಾರ್ಮಿಕ ಕಲ್ಯಾಣ ಉಪಕ್ರಮಗಳ ಅನುಷ್ಠಾನಕ್ಕಾಗಿ STARS OF THE INDUSTRY- EXCELLENCE AND LEADERSHIP ಪ್ರಶಸ್ತಿಯನ್ನು Most Admired Company of the year ವರ್ಗದಡಿಯಲ್ಲಿ ನೀಡಲಾಗಿದೆ.
World HRD Congress ನವದೆಹಲಿಯಲ್ಲಿ ಆಯೋಜಿಸಿದ ಸಮಾರಂಭದಲ್ಲಿ ವಿಜಯಕುಮಾರ್ ನಾಯ್ಡು, India Head of Sales, ADP ಹಾಗೂ ಖ್ಯಾತ ಜ್ಯೋತಿಷಿ ಡಾ.ಜೈಮದಾನ್ ಅವರು Most Admired Company of the year ಪ್ರಶಸ್ತಿಯನ್ನು KSRTCಗೆ ಪ್ರದಾನ ಮಾಡಿದರು. ಕೆಎಸ್ಸಾರ್ಟಿಸಿ ನಿಗಮದ ಪರವಾಗಿ ಮುಖ್ಯ ಯೋಜನಾ ಮತ್ತು ಸಂಖ್ಯಾಧಿಕಾರಿ ವೀಣಾ ಪಿ. ದೇಸಾಯಿ ಹಾಗೂ ಪ್ರಾದೇಶಿಕ ತರಬೇತಿ ಕೇಂದ್ರ ಮಳವಳ್ಳಿಯ ಪ್ರಾಂಶುಪಾಲರಾದ ವಿದ್ಯಾ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.











































































