ಚೆನ್ನೈ: ನಿರ್ದೇಶಕ ಸತೀಶ್ ಅವರ ‘ಕಿಸ್’ ಚಿತ್ರದ ಎರಡನೇ ಸಿಂಗಲ್ ಜಿಲ್ಲೆಮಾ ಹಾಡಿನ ಲಿರಿಕಲ್ ವಿಡಿಯೋವನ್ನು ಬಿಡುಗಡೆಯಾಗಿದ್ದು ಸಿನಿರಸಿಕ್ಕರಿಂದ ಸಕತ್ ಲೈಕ್ಸ್ ಗಿಟ್ಟಿಸಿಕೊಂಡಿದೆ. ರೊಮ್ಯಾಂಟಿಕ್ ಎಂಟರ್ಟೈನರ್ ಮಂಗಳವಾರ ಈ ಹಾಡಿನ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಇಬ್ಬರ ಆಳವಾದ ಪ್ರೀತಿಯನ್ನು ತೋರಿಸುವ ಈ ರೊಮ್ಯಾಂಟಿಕ್ ಹಾಡಿನ ಲಿರಿಕಲ್ ವಿಡಿಯೋದ ಲಿಂಕ್ ಅನ್ನು ನಟ ಕವಿನ್ ಹಂಚಿಕೊಂಡಿದ್ದಾರೆ.
ವಿಷ್ಣು ಎಡವನ್ ಅವರ ಸಾಹಿತ್ಯ ಹೊಂದಿರುವ ಈ ಪೆಪ್ಪಿ ರೊಮ್ಯಾಂಟಿಕ್ ಹಾಡಿಗೆ ಜೆನ್ ಮಾರ್ಟಿನ್ ಸಂಗೀತ ನೀಡಿದ್ದಾರೆ. ಇದನ್ನು ಆದಿತ್ಯ ಆರ್ಕೆ ಮತ್ತು ಪ್ರಿಯಾ ಮಾಲಿ ಹಾಡಿದ್ದಾರೆ.
ಈ ವರ್ಷದ ಮಾರ್ಚ್ನಲ್ಲಿ ಬಿಡುಗಡೆಯಾಗಬೇಕಿದ್ದ ‘ಕಿಸ್’ ಚಿತ್ರವು ಈಗ ಈ ವರ್ಷದ ಜುಲೈನಲ್ಲಿ ಬಿಡುಗಡೆಗೆ ಚಿತ್ರ ತಂಡ ನಿರ್ಧರಿಸಿದೆ. ಖ್ಯಾತ ನೃತ್ಯ ಸಂಯೋಜಕ ಸತೀಶ್ ನಿರ್ದೇಶನದಲ್ಲಿ ಮತ್ತು ನಿರ್ದೇಶಕಿ ಮಂತ್ರಿರಾ ಮೂರ್ತಿ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ಅಯೋಧ್ಯ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಪ್ರೀತಿ ಅಸ್ರಾನಿ ನಟಿಸುತ್ತಿರುವುದರಿಂದ ಇದು ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ.