ಕೋಲ್ಕತ್ತಾ: ಪಂಚ ರಾಜ್ಯಗಳ ಮತಸಮರ ಇಡೀ ದೇಶದ ಗಮನಸೆಳೆದಿದ್ದು, ಪೂರ್ವ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಮೋದಿ ಮೋಡಿ ನಡೆದಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸಾರಥ್ಯದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಜೋಡಿಯು ಬಿಜೆಪಿ ಕಾರ್ಯಕರ್ತರ ಸುನಾಮಿ ಎಬ್ಬಿಸಿದ್ದರು. ಬಿಜೆಪಿಯ ಈ ಸುನಾಮಿಯು ಎಡ ಪಕ್ಷವನ್ನು ಧೂಳೀಪಟ ಮಾಡಿದೆಯಾದರೂ ತೃಣಮೂಲ ಕಾಂಗ್ರೆಸ್ ಕೈಯಿಂದ ಅಧಿಕಾರವನ್ನು ಕಸಿದುಕೊಳ್ಳುವಲ್ಲಿ ಸಫಲವಾಗಿಲ್ಲ.
ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿಯವರ ಆಪ್ತರನ್ನು ಬಿಜೆಪಿಗೆ ಸೆಳೆದು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ನಿತ್ಯ ವಿದ್ಯಮಾನ ಸೃಷ್ಟಿಸುತ್ತಿದ್ದ ಮೋದಿ ಸೈನ್ಯದ ಪ್ರಾಬಲ್ಯವು ಆ ರಾಜ್ಯದ ಚುನಾವಣಾ ಫಲಿತಾಂಶದಲ್ಲಿ ಗೊತ್ತಾಗಿದೆ.
ಮತಣಿಕೆಯ ಆರಂಭದಿಂದಲೂ ಟಿಎಂಸಿ ಹಾಗೂ ಬಿಜೆಪಿ ಮಿತ್ರಕೂಟ ನಡುವೆ ಹಾವು ಏಣೆಯಾಟದ ಸನ್ನಿವೇಶ ಕಂಡುಬಂತಾದರೂ ಅಂತಿಮ ಹಂತದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವೇ ದಿಗ್ವಿಜಯ ಸಾಧಿಸಿದೆ.
ಬಲಾಬಲ ಹೀಗಿದೆ:
- ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಒಟ್ಟು ಸ್ಥಾನಗಳು: 294
- ಟಿಎಂಸಿ+ : 216
- ಎನ್‌ಡಿಎ + : 75
- ಇತರೆ : 01