ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಟ್ರಾಕ್ಟರ್‌ಗಳ ಅಕ್ರಮ ಸಂಚಾರಕ್ಕೆ ಪೊಲೀಸರು ಬ್ರೇಕ್ ಹಾಕಲು ಮುಂದಾಗಿದ್ದಾರೆ. ಲೈಸನ್ಸ್ ಇಲ್ಲದ, ನಂಬರ್ ಪ್ಲೇಟ್‌ಗಳನ್ನೇ ಹಾಕದೆ ಟ್ರಾಕ್ಟರ್‌ಗಳು ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುತ್ತಿವೆ. ಬಿಬಿಎಂಪಿ ಕಾಮಗಾರಿ ಎಂಬ ಫಲಕವನ್ನು ಟ್ರಾಕ್ಟರ್‌ಗಳಲ್ಲಿ ಪ್ರದರ್ಶಿಸಿ ಪೊಲೀಸರನ್ನೇ ಯಾಮಾರಿಸುವ ಪ್ರಯತ್ನ ಹಲವರಿಂದ ನಡೆದಿದೆ. ಈ ಬಗ್ಗೆ ಸಾರ್ವಜನಿಕರ ದೂರಿನ ಹಿನ್ಬೆಲೆಯಲ್ಲಿ ಕಾಡುಗೊಂಡನಹಳ್ಳಿ ಸಂಚಾರ ಠಾಣೆಯ ಪೊಲೀಸರು ಇಂತಹಾ ಅಕ್ರಮಗಳನ್ನು ಪತ್ತೆ ಮಾಡಿ ದುಬಾರಿ ದಂಡ ವಿಧಿಸಿದ್ದಾರೆ.
ಬಹುತೇಕ ಟ್ರಾಕ್ಟರ್‌ಗಳು ಪರ್ಮಿಟನ್ನೇ ಹೊಂದಿಲ್ಲ. ಹಲವು ಟ್ರಾಕ್ಟರ್‌ಗಳು ಹೊರ ರಾಜ್ಯಗಳ ರಿಜಿಸ್ಟ್ರೇಷನ್ ಹೊಂದಿದ್ದು ನವೀಕರಣ ಮಾಡಿಲ್ಲ. ಟ್ರಾಕ್ಟರ್‌ಗಳ ಪೈಕಿ ಇಂಜಿನ್‌ಗೆ ಒಂದು ರೀತಿ ನಂಬರ್, ಅದರ ಟ್ರಾಲಿಗೆ ಮತತೊಂದು ರೀತಿಯ ನಂಬರ್ ಇರುತ್ತೆ. ಆದರೆ ಪರವಾನಗಿ ನವೀಕರಣ ಮಾಡಿದ ಹಿನ್ನೆಲೆಯಲ್ಲಿ ನಂಬರ್ ಪ್ಲೇಟನ್ನೇ ಮರೆಮಾಚುವ ಕೃತ್ಯ ನಡೆಯುತ್ತಿದೆ.
ಈ ಬಗ್ಗೆ ಕೆ.ಜಿ.ಹಳ್ಳಿ ಸಂಚಾರ ಪೊಲೀಸ್ ಠಾಣೆ ಬಳಿ ಕಾರ್ಯಾಚರಣೆಗಿಳಿದ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಟ್ರಾಕ್ಟರ್‌ಗಳ ಅಕ್ರಮ ಸಂಚಾರಕ್ಕೆ ಬ್ರೇಕ್ ಹಾಕಿದರು. ರೈತರು ಕೃಷಿ ಕೆಲಸಕ್ಕೆ ಬಳಸಬೇಕಾದ ಟ್ರಾಕ್ಟರ್‌ಗಳನ್ಬು ಬೆಂಗಳೂರು ನಗರದಲ್ಲಿ ಕಲ್ಲು ಮರಳು, ಕಟ್ಟಡ ನಿರ್ಮಾಣದ ಸ್ಕ್ರಾಪ್‌ಗಳನ್ನು ಸಾಗಿಸಲು ಬಳಸಲಾಗುತ್ತಿದೆ. ಇಂತಹಾ ಟ್ರಾಕ್ಟರ್‌ಗಳ ಅನೇಕ ಕಡೆ ಅಪಘಾತಗಳಿಗೂ ಕಾರಣವಾಗಿವೆ. ಆದರೆ ಈ ಟ್ರಾಕ್ಟರ್‌ಗಳಲ್ಲಿ ಸರಿಯಾದ ನಂಬರ್ ಪ್ಲೇಟ್ ಇಲ್ಲದೆ ಜನರು ಅವುಗಳ ನಂಬರ್ ದಾಖಲಿಸಲು ಸಾಧ್ಯವಾಗುತ್ತಿಲ್ಲ.
ಈ ರೀತಿಯ ಲೋಪಗಳನ್ನು ಪತ್ತೆಹಚ್ಚಿರುವ ಸಂಚಾರ ವಿಭಾಗದ ಪೊಲೀಸರು ಅನೇಕ ಟ್ರಾಕ್ಟರ್‌ಗಳ ವಿರುದ್ದ ಹಾಗೂ ಡಿಎಲ್ ಹೊಂದಿರದ ಚಾಲಕರ ಮೇಲೆ ದಂಡ ವಿಧಿಸಿದ್ದಾರೆ.