ವಿಜಯಪುರ: ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದುಗೊಳಿಸಿ ಹೊಸ ಮೀಸಲಾತಿ ವ್ಯವಸ್ಥೆಯನ್ನು ಬಿಜೆಪಿ ಸರಕಾರ ಜಾರಿ ಮಾಡಿದೆ. ರಿವರ್ಸ್ ಗೇರ್ ಹೊಂದಿರುವ ಕಾಂಗ್ರೆಸ್ ಲಿಂಗಾಯತ, ದಲಿತ ಬಾಂಧವರ ಮೀಸಲಾತಿ ರದ್ದುಗೊಳಿಸಿ ಪುನಃ ಮುಸ್ಲಿಮರಿಗೆ ನೀಡುವುದಾಗಿ ಹೇಳುತ್ತಿದೆ, ಆದರೆ ಯಾವ ಕಾರಣಕ್ಕೂ ಬಿಜೆಪಿ ಇದನ್ನು ಸಹಿಸುವುದಿಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ
ವಿಜಯಪುರ ಜಿಲ್ಲೆ ದೇವರಹಿಪ್ಪರಗಿಯಲ್ಲಿ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಲಿಂಗಾಯತರ ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಬಿಡುವುದಿಲ್ಲ ಎಂದರು. ಧರ್ಮ ಆಧಾರಿತವಾಗಿ ಮೀಸಲಾತಿ ಏಕೆ ಎಂದು ನಗರ ಶಾಸಕ ಯತ್ನಾಳ ಪದೇ ಪದೇ ಕೇಳುತ್ತಲೇ ಇದ್ದರು, ವೋಟ್ ಬ್ಯಾಂಕ್ ಆಧರಿಸಿ ಕಾಂಗ್ರೆಸ್ ಮುಸ್ಲಿಂ ಮೀಸಲಾತಿ ಕೊಟ್ಟಿತ್ತು, ಭಾರತೀಯ ಜನತಾ ಪಕ್ಷ ಮುಸ್ಲಿಂ ಮೀಸಲಾತಿ ರದ್ದುಗೊಳಿಸಿ ಲಿಂಗಾಯತ, ಒಕ್ಕಲಿಗ, ತಳವಾರ-ಪರಿವಾರ, ದಲಿತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದೆ; ಇದು ಮಾಡಿದ್ದು ಒಳ್ಳೆಯದೇ? ಕೆಟ್ಟದ್ದೇ? ಎಂದು ಪ್ರಶ್ನಿಸಿದರು.
Live : ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ @AmitShah ಅವರ ನೇತೃತ್ವದಲ್ಲಿ ಸಾರ್ವಜನಿಕ ಸಭೆ.
ಸ್ಥಳ – ದೇವರ ಹಿಪ್ಪರಗಿ, ವಿಜಯಪುರ.#BJPYeBharavase #DoubleEngineSarkara https://t.co/B3yF6ZYyPl
— BJP Karnataka (@BJP4Karnataka) April 25, 2023
ಕಾಂಗ್ರೆಸ್ ಅಧ್ಯಕ್ಷರು ಒಳಮೀಸಲಾತಿ ರದ್ದುಗೊಳಿಸಿ ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ರದ್ದುಗೊಳಿಸಿ ಮುಸ್ಲಿಂರಿಗೆ ಮಿಸಲಾತಿ, ಸರ್ಕಾರ ಬರುವುದೇ ಇಲ್ಲ, ಮೀಸಲಾತಿ ರದ್ದಾಗುವುದೇ ಇಲ್ಲ; ಚಿಂತೆ ಮಾಡಬೇಡಿ ಎಂದ ಅಮಿತ್ ಶಾ, ಮೀಸಲಾತಿಯ ಮೇಲೆ ದಲಿತರ, ಆದಿವಾಸಿಗಳ, ಲಿಂಗಾಯತರಿಗೆ ನೀಡುವ ಮೀಸಲಾತಿ ಅಭಯ ಎಂದೂ ಕೊನೆಗೊಳಿಸುವುದಿಲ್ಲ, ಪಿಎಫ್‍ಐ ಹಿಂಸೆಯ ತಾಂಡವವಾಡುತ್ತಿದ್ದ ಪಿಎಫ್‍ಐ ಸಂಘಟನೆಯನ್ನು ನಮ್ಮ ಸರ್ಕಾರ ಬ್ಯಾನ್ ಮಾಡಿದೆ, ಇದು ಒಳ್ಳೆಯದಲ್ಲವೇ? ಎಂದು ಪ್ರಶ್ನಿಸಿದರು.
ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಪಿಎಫ್‍ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು, ಆದರೆ ಬಿಜೆಪಿ ಅವರನ್ನು ಹುಡುಕಿ ಹುಡುಕಿ ಜೈಲಿಗಟ್ಟುತ್ತಿದೆ, ಆದರೆ ರಿವರ್ಸ್ ಗೇರ್ ಕಾಂಗ್ರೆಸ್ ಪಿಎಫ್‍ಐ ನಿμÉೀಧವನ್ನು ಹಿಂದಕ್ಕೆ ಪಡೆಯುವ ಮಾತು ಹೇಳಲಿದೆ, ದೇಶಕ್ಕೆ ದೊಡ್ಡಮಟ್ಟದ ಅಪಾಯದ ಎಚ್ಚರಿಕೆ ಗಂಟೆಯಾಗಿರುವ ಪಿಎಫ್‍ಐನ್ನು ವೋಟ್ ಬ್ಯಾಂಕ್‍ಗಾಗಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವ ಕರ್ನಾಟಕದ ಕನಸು ನನಸಾಗುವುದು ಮೋದಿ ಅವರಿಂದ ಮಾತ್ರ ಸಾಧ್ಯ, ವಿಕಾಸದ ಮಂತ್ರ ಜಪಿಸುವ ಪಕ್ಷ ಬಿಜೆಪಿ ಮಾತ್ರ ಎಂದರು. ಬಿಜೆಪಿ ಅಧಿಕಾರದಲ್ಲಿ ಇರುವ ಕಾರಣ ಅಭಿವೃದ್ಧಿಯ ಪರ್ವ ಮುಂದುವರೆಯುತ್ತಲೇ ಇದೆ ಎಂದರು.
ಪಾಕ್ ಕಿರುಕುಳವನ್ನು ದಮನ ಮಾಡಲು ಡಾ.ಮನಮೋಹನ್ ಸಿಂಗ್ ಧೈರ್ಯ ತೋರಲಿಲ್ಲ, ಆದರೆ ನರೇಂದ್ರ ಮೋದಿ ಅವರು ದಿಟ್ಟತನದಿಂದ ಉಗ್ರವಾದಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಕಾಶ್ಮೀರದಲ್ಲಿ ದಾಳಿ ನಡೆದ 10 ದಿನಗಳಲ್ಲಿಯೇ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಡೆಸಿ ಪಾಕ್ ಮನೆಗೆ ನುಗ್ಗಿ ಉಗ್ರವಾದಿಗಳಿಗೆ ದಿಟ್ಟ ಉತ್ತರ ಕೊಟ್ಟಿದ್ದೋ ಸರಿಯೋ ಇಲ್ಲವೋ? ಆದರೆ ಇದಕ್ಕೆ ದಾಖಲೆ ಇದೆಯೇ ಎಂದು ರಾಹುಲ್ ಬಾಬಾ ಕೇಳುತ್ತಾರೆ, ಪಾಕ್ ಎದೆ ಬಡಿದುಕೊಂಡು ಅಳುತ್ತಿದೆ, ಇದು ಒಂದು ದಾಖಲೆ ಅಲ್ಲವೇ ರಾಹುಲ್ ಬಾಬಾ ಎಂದು ಅಮಿತ್ ಶಾ ಲೇವಡಿ ಮಾಡಿದರು.
ರಾಮಮಂದಿರ ದರ್ಶನಕ್ಕೆ ಸಿದ್ಧರಾಗಿರಿ
ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಅದನ್ನು ಭಾರತದ ಅವಿಭಾಜ್ಯ ಅಂಗವಾಗಿಸಿದ್ದು ತಪ್ಪೇ? ಎಂದು ಪ್ರಶ್ನಿಸಿದರು. ಈಗಾಗಲೇ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಗೊಳ್ಳುತ್ತಿದೆ, ಕಾಂಗ್ರೆಸ್ ಪಕ್ಷ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿ ಪಡಿಸಿತ್ತು, ಈ ವಿಷಯವಾಗಿ ದಿಕ್ಕು ತಪ್ಪಿಸುತ್ತಲೇ ಇತ್ತು, ಪ್ರಧಾನಿ ಮೋದಿ ಅವರ ಸರ್ಕಾರ ಈಗಾಗಲೇ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಸಹ ನೆರವೇರಿಸಿದೆ, ವಿಜಯಪುರ ನಿವಾಸಿಗಳು ಅಯೋಧ್ಯೆಗೆ ಬರಲು ಟಿಕೇಟ್ ಕಾಯ್ದಿರಿಸಿಕೊಳ್ಳಿ, ಅಯೋಧ್ಯೆಗೆ ಬಂದು ಭವ್ಯ ರಾಮಮಂದಿರ ಕಣ್ತುಂಬಿಕೊಳ್ಳಲು ಸಿದ್ಧರಾಗಿ ಎಂದು ವಿಜಯಪುರ ಜನತೆಗೆ ಅಮಿತ್ ಶಾ ಆಹ್ವಾನ ನೀಡಿದರು.
ಲಿಂಗಾಯತರನ್ನು ಕಾಂಗ್ರೆಸ್ ಅವಮಾನ ಮಾಡಿರುವ ವಿಷಯವನ್ನು ಪ್ರಸ್ತಾಪಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಲಿಂಗಾಯತರಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿರುವುದು ಹೊಸತಲ್ಲ, ವೀರೇಂದ್ರ ಪಾಟೀಲ, ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್ ಅವಮಾನ ಮಾಡಿದೆ, ಲಿಂಗಾಯತರನ್ನು ಅವಮಾನ ಕಾಂಗ್ರೆಸ್ ಮಾಡುತ್ತಲೇ ಇದೆ. ನಮ್ಮ ನಾಯಕ ಅಲ್ಲಿ ಹೋಗಿದ್ದಾರೆ, ಆದರೆ ಹುಬ್ಬಳ್ಳಿಯಲ್ಲಿ 25 ಸಾವಿರ ಅಂತರದಿಂದ ಸೋಲು ಕಾಣುವುದಂತೂ ಸತ್ಯ ಎಂದು ಪರೋಕ್ಷವಾಗಿ ಜಗದೀಶ ಶೆಟ್ಟರ್ ಸೋಲು ಖಚಿತ ಎಂದು ಭವಿಷ್ಯ ನುಡಿದರು. ಜೆಡಿಎಸ್‍ಗೆ ಮತ ನೀಡಿದರೆ ಕಾಂಗ್ರೆಸ್‍ಗೆ ಮತ, ಕಾಂಗ್ರೆಸ್‍ಗೆ ಮತ ನೀಡುವುದು ಪಿಎಫ್‍ಐಗೆ ಪರೋಕ್ಷ ಬೆಂಬಲ ನೀಡಿದಂತೆ ಎಂದರು.