ಶ್ರೀನಗರ: ಭಾರತದ ದಾಳಿಗೆ ಬೆಚ್ಚಿ ಬೀಳಿಸಿರುವ ಪಾಕಿಸ್ತಾನ ಇದೀಗ ಸೇಡು ತೀರಿಸಿಕೊಳ್ಳಲು ಇನ್ನಿಲ್ಲದ ತಂತ್ರ ನಡೆಸುತ್ತಿದೆ. ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿ ನಡೆಸಿದೆ. ನಾಗರಿಕರನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಹಲವಾರು ಗಾಯಗೊಂಡಿದ್ದಾರೆ.
VIDEO | Jammu and Kashmir: Morning visuals from Baramulla town.
Sirens and numerous explosions were reported in Akhnoor, Samba, Baramulla and Kupwara and several other places as the Indian military carried out a massive night aerial vigil along the border with Pakistan.… pic.twitter.com/JBswXiznYQ
— Press Trust of India (@PTI_News) May 9, 2025
ಕೆಲವು ದಿನಗಳಿಂದ ಪಾಕಿಸ್ತಾನವು ಉತ್ತರ ಕಾಶ್ಮೀರದ ಉರಿ ಮತ್ತು ಕುಪ್ವಾರಾ ಭಾಗಗಳ ಗಡಿ ಪ್ರದೇಶಗಳ ಮೇಲೆ ನಿರಂತರವಾಗಿ ಶೆಲ್ ದಾಳಿ ನಡೆಸುತ್ತಿದೆ. ಗುರುವಾರ ಉರಿ ಪ್ರದೇಶದಲ್ಲಿ ಶೆಲ್ ದಾಳಿ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ತನ್ನ ಕಾರ್ಯಾಚರಣೆಯನ್ನು ಬಿಗಿಗೊಳಿಸಿದೆ.