ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ನಿರ್ದೇಶಕರಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಂಟಿಗಾನಹಳ್ಳಿಯ ವೆಂಕಟೇಶ್ ಬಾಬು ಅವಿರೋಧ ಆಯ್ಕೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಂಟಿಗಾನಹಳ್ಳಿಯಲ್ಲಿರುವ ತೆಂಗಿನ ನಾರಿನ ವಸ್ತುಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಕೈಗಾರಿಕಾ ಸಹಕಾರ ಸಂಘ ನಿಯಮಿತವನ್ನು ಪ್ರತಿನಿಧಿಸುತ್ತಿರುವ ವೆಂಕಟೇಶ್ ಬಾಬು ಹಾಗೂ ವಿವಿಧ ಜಿಲ್ಲೆಗಳ ಪ್ರತಿನಿಧಿಗಳನ್ನು ನಿರ್ದೇಶಕರಾಗಿ ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿ ಚಿದಾನಂದ ಮೂರ್ತಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಎಸ್.ಎಲ್ ವೆಂಕಟೇಶ ಬಾಬು ಅವರು ಈ ಮೊದಲು ದೊಡ್ಡಬಳ್ಳಾಪುರ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಸಹಾಕರ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಎಸ್.ಎಲ್ ವೆಂಕಟೇಶ ಬಾಬು ಅವರು ಅವಿರೋಧ ಆಯ್ಕೆಯಾಗಿದ್ದು ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಆಯ್ಕೆಯಾಗಿರುವ ನಿರ್ದೇಶಕರ ಪಟ್ಟಿ ಹೀಗಿದೆ:
ಬೆಂಗಳೂರಿನ ರಾಜಾಜಿನಗರದ ಕೈಗಾರಿಕಾ ವಸಾಹತಿನಲ್ಲಿರುವ ಈ ಮಹಾಮಂಡಳಿಗೆ ಉಡುಪಿಯ ಬೇಬಿ, ಉತ್ತರಕನ್ನಡ ಜಿಲ್ಲೆ ಕುಮಟಾದ ಭವಾನಿ ನಾಗಮುಕ್ರಿ, ಬೆಂಗಳೂರು ನಗರ ಜಿಲ್ಲೆಯ ಬಿಳಕೇನಹಳ್ಳಿಯ ಕೆ.ಎಸ್.ಕೃಷ್ಣಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಎಲ್.ಎಸ್.ವೆಂಕಟೇಶ್ ಬಾಬು, ತುಮಕೂರು ಜಿಲ್ಲೆಯ ಟಿ.ಎಸ್.ಕಿಡಿಗಣ್ಣಪ್ಪ, ಮೈಸೂರು ಜಿಲ್ಲೆಯ ನಾರಾಯಣ ರಾವ್, ಚಾಮರಾಜನಗರ ಜಿಲ್ಲೆಯ ರಾಮಚಂದ್ರಪ್ಪ, ಚಿತ್ರದುರ್ಗದ ಎಲ್.ತಿಪ್ಪೇಸ್ವಾಮಿ, ದಾವಣಗೆರೆಯ ಕೆ.ಬಿ.ಜಯಪ್ರಕಾಶ್.
ಮುಂದಿನ ಐದು ವರ್ಷಗಳ ಅವಧಿಗೆ ಇವರು ಮಹಾಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.






















































