ದಾವಣಗೆರೆ. ಪತ್ರಕರ್ತ ಬಾಲಕೃಷ್ಣ ಶೀಬಾರ್ಲ್ ಬರೆದ ‘ಕಾಪ’ ತುಳು ನಾಟಕ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಸ್ಥೆಯ ಕಳೆದ ವರ್ಷದ ರಂಗಹಬ್ಬದಲ್ಲಿ ಪ್ರದರ್ಶನಗೊಂಡಿತ್ತು. ಅದರ ಬೆನ್ನಿಗೇ ಕೊರೊನಾ ಬಂದಿದ್ದರಿಂದ ವಿವಿಧೆಡೆ ಪ್ರದರ್ಶನಗೊಳ್ಳುವ ಅವಕಾಶ ತಪ್ಪಿ ಹೋಗಿತ್ತು.
ಉಡುಪಿ ಅಜ್ಜರಕಾಡು ಬಯಲು ರಂಗಮಂದಿರದಲ್ಲಿ ಮಾರ್ಚ್ 22ರಿಂದ 28ರವರೆಗೆ ಸುಮನಸಾ ಕೊಡವೂರು ಸಂಸ್ಥೆಯ ‘ರಂಗ ಹಬ್ಬ’ ನಡೆಯುತ್ತಿದೆ. ಅದರಲ್ಲಿ ಐದನೇ ದಿನ ಅಂದರೆ ಮಾರ್ಚ್ 26ರಂದು ಸಂಜೆ 6.30ಕ್ಕೆ ‘ಕಾಪ’ ಬಿಡುಗಡೆಗೊಳ್ಳುತ್ತಿದೆ. ಖ್ಯಾತ ಚಿಂತಕಿ ಆತ್ರಾಡಿ ಅಮೃತಾ ಶೆಟ್ಟಿ ನಾಟಕ ಕೃತಿ ಅನಾವರಣಗೊಳಿಸಲಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಪತ್ರಕರ್ತ ಬಾಲಕೃಷ್ಣ ಶೀಬಾರ್ಲ್, ಈ ಕೃತಿ ಬಿಡುಗಡೆಯಲ್ಲಿ ನಾನು ಹೆಸರಿಗಷ್ಟೇ ಇರುತ್ತೇನೆ. ಎಲ್ಲ ಹೊಣೆ, ಹೊರೆಗಳನ್ನು ಸುಮನಸಾ ಕೊಡವೂರು ಸಂಸ್ಥೆ, ಅದರಲ್ಲಿಯೂ ಪ್ರವೀಣ್ ಕೊಡವೂರು ವಹಿಸಿಕೊಂಡು ಕೃತಿ ಹೊರ ತರುತ್ತಿದ್ದಾರೆ ಎಂದಿದ್ದಾರೆ.
ಬೆಳಕು ಪ್ರಕಾಶನ ಪ್ರಕಟಿಸುತ್ತಿರುವ ನನ್ನ ಎರಡನೇ ಕೃತಿ ಇದು. ಮೊದಲ ಕೊರೊನೋತ್ತರದ ಸಂಕಷ್ಟದ ಕಾಲ ಇದು. ಬರಲು ಸಾಧ್ಯ ಇದ್ದರೆ ಬಂದು ಸಾಕ್ಷಿಯಾಗಿ. ಸಾಧ್ಯವಾಗದೇ ಇದ್ದರೆ ಎಲ್ಲಿದ್ದೀರೋ ಅಲ್ಲಿಂದಲೇ ಹಾರೈಸಿ ಎಂದು ಸ್ನೇಹಿತರ ಬಳಗವನ್ನು ಪತ್ರಕರ್ತ ಬಾಲಕೃಷ್ಣ ಶೀಬಾರ್ಲ್ ಕೋರಿದ್ದಾರೆ.