ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಕನ್ನಡ ಭಾಷೆ ಬಗ್ಗೆ ಗೊಂದಲ ಸೃಷ್ಟಿಯಾದ ಬೆಳವಣಿಗೆಯಲ್ಲಿ ಗೂಗಲ್ ಸಂಸ್ಥೆ ಕ್ಷಮೆಯಾಚಿಸಿದ ಬೆನ್ನಲ್ಲೇ ಇದೀಗ ಅಮೆಜಾನ್ ಎಂಬ ಹೆಸರಲ್ಲಿ ಸೃಷ್ಟಿಯಾಗಿರುವ ಆನ್‌ಲೈನ್ ಶಾಪಿಂಗ್ ಸೈಟ್ ಕೂಡಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕನ್ನಡಿಗರ ಆಕ್ರೋಕ್ಕೆ ಮಣಿದ ಈ ಸೈಟ್, ಫೋಟೋವನ್ನು ಬದಲಾಯಿಸಿದ ರೀತಿ ಕನ್ನಡ ನಾಡಿನ ಬಗ್ಗೆ ಮತ್ತಷ್ಟು ಅಪಮಾನ ಮಾಡಿದಂತಿದೆ.
ಏನಿದು ಅವಾಂತರ..?
ಕನ್ನಡ ಧ್ವಜವನ್ನು ಹೋಲುವ ಬಟ್ಟೆ ಹಾಗೂ ಲಾಂಛನವನ್ನು ಬಿಕಿನಿಯನ್ನಾಗಿಸಿದ ಆರೋಪ ಅಮೇಜಾನ್ ಎಂಬ ಆನ್‌ಲೈನ್ ಶಾಪಿಂಗ್ ಸೈಟ್ ವಿರುದ್ದ ಕೇಳಿಬಂದಿತ್ತು. ಈ ಬಗ್ಗೆ ಕನ್ನಡಿಗರ ಆಕ್ರೋಶ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಈ ಶಾಪಿಂಗ್ ಸೈಟ್, ಬಿಕಿನಿಯ ಫೊಟೋವನ್ನು ಬದಲಾಯಿಸಿದೆ.ಆದರೆ ಟೈಟಲ್ ಬದಲಾಯಿಸಲೇ ಇಲ್ಲ. ಆ ವರೆಗೂ ಕನ್ನಡ ಧ್ವಜ ಬಿಕಿನಿಯಾದ ಬಗ್ಗೆ ಅರ್ಥವನ್ನು ಸಾರುತ್ತಿದ್ದ ಈ ಸೈಟ್, ಇದೀಗ ಕನ್ನಡದ ಧ್ವಜಕ್ಕೆ ಬೇರೆಯೇ ಅರ್ಥ ಬರುವಂತೆ ಬಿಂಬಿಸಿದೆ ಎಂಬುದು ಹಲವರ ಅಸಮಾಧಾನ.
ಅಮೆಜಾನ್ ಎಂಬ ಶಾಪಿಂಗ್ ಸೈಟ್‌ನಲ್ಲಿ ಕನ್ನಡ ಧ್ವಜವನ್ನು ಹೋಲುವ ಬಟ್ಟೆ ಹಾಗೂ ಲಾಂಛನವನ್ನು ಬಿಕಿನಿಯನ್ನಾಗಿಸಿ ಅದಕ್ಕೆ Brand: BKDMHHH (BKDMHHH Women’s Flag of Karnataka Original Design Slim Fit Tie Side Laces Triangle Chic Trimmer for Girl’s) ಎಂಬ ಶೀರ್ಷಿಕೆ ನೀಡಿ ಮಾರಾಟಕ್ಕಿಡಲಾಗಿತ್ತು. ಈ ಬಗ್ಗೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.
#ಕನ್ನಡದ್ರೋಹಿAmazonca
Hello Amazon, dont play with kannada sentiments. First remove your undergarments pic of Kannada flag. Upologise kannada ppl if want to continue your business in karnataka.— Raveesh Sarja (@RaveeshSarja) June 5, 2021
ಸಾಮಾಜಿಕ ಜಾಲತಾಣಗಳಲ್ಲಿ ಈ ಸೈಟ್ ವಿರುದ್ದ ಕನ್ನಡದ್ರೋಹಿAmazonca ಎಂಬ ಅಭಿಯಾನ ಚುರುಕಾಗಿತ್ತು.
How dare u do this😠😠😠😠 Don't try to mess with emotion of Kannadigas https://t.co/97IwC6mbEW @amazonca @amazon @AmazonHelp #ಕನ್ನಡದ್ರೋಹಿAmazonca @ArvindLBJP @CMofKarnataka @hd_kumaraswamy @siddaramaiah @KirikKeerthi
— Amogh Mangi – ಅಮೋಘ ಮಂಗಿ (@AmoghmangiOKKK) June 5, 2021
Dear @amazon there is a product that is a womens innerwear printed with Karnataka flag available in ur website . Dont try to mess with emotion of Kannadigas . Kindly remove the product @AmazonHelp #ಕನ್ನಡದ್ರೋಹಿAmazonca @amazonIN @CMofKarnataka @PMOIndia#RemoveKaFlagFromAmazon pic.twitter.com/4gdTxPynPi
— RafiqAli Dubai Kannadiga (@RKundanda) June 5, 2021
ಇದರಿಂದ ಬೆಚ್ಚಿದ ಅಮೆಜಾನ್ ಹೆಸರಿನ ಈ ಸೈಟ್ ತನ್ನಿಂದೇನೂ ತಪ್ಪು ನಡೆದಿಲ್ಲ ಎಂಬಂತೆ ಬಿಂಬಿಸಲು ಆತುರ ಆತುರದಲ್ಲಿ ಫೊಟೋ ಬದಲಾಯಿಸಿದೆ. ಆದರೆ ಶೀರ್ಷಿಕೆ ಬದಲಾಯಿಸಲು ಮರೆತಂತಿದೆ. ಇದೀಗ ಈ ‘ಶೀರ್ಷಿಕೆ ಹಾಗೂ ಫೊಟೋ’ ಕನ್ನಡ ಧ್ಜಜ ಬಗ್ಗೆ ಮತ್ತಷ್ಟು ನಿಂದಿಸಿದ ಅರ್ಥ ಕೊಡುತ್ತಿದೆ ಎಂಬುದು ಕನ್ನಡಿಗರ ಆರೋಪ.