ವರದಿ: ಫಾದರ್ ರೋಶನ್ ಡಿಸೋಜಾ
ಬೀದರ್: Azim Premji Philanthropic Initiative (APPI) ಮತ್ತು ಗುಲ್ಬರ್ಗ ಧರ್ಮಕ್ಷೇತ್ರದ ಸಮಾಜಸೇವಾ ಅಭಿವೃದ್ಧಿ ಸಂಸ್ಥೆಗಳಾದ ಸೇವಾ ಸಂಗಮ, ಕಲಬುರಗಿ ಹಾಗೂ ಆರ್ಬಿಟ್ ಸಂಸ್ಥೆ, ಬೀದರ್ ಇವರ ಜಂಟಿ ಆಶ್ರಯದಲ್ಲಿ ತಲಾ ಒಂದು ಸಾವಿರ ರೂಪಾಯಿ ಮೌಲ್ಯದ ಆಹಾರಧಾನ್ಯದ ಕೀಟಗಳನ್ನು ಸುಮಾರು 17,500 ಬಡ ಕುಟುಂಬಗಳಿಗೆ ಸಿದ್ಧಪಡಿಸಲಾಯಿತು.
ಗುರುಗಳು , ಕನ್ಯಾ ಭಗಿನಿಯರು, ಭಕ್ತ ವಿಶ್ವಾಸಿಗಳು ಹಾಗೂ ನಲವತ್ತಕ್ಕೂ ಹೆಚ್ಚು ಸ್ವಯಂಸೇವಾ ಸಂಘಗಳು ಸ್ವಿಚ್ಛೆಯಿಂದ ಈ ಸೇವೆಯಲ್ಲಿ ಕೈಜೋಡಿಸಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳ ಸಂಯೋಗದೊಂದಿಗೆ ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ 200 ಕ್ಕಿಂತ ಹೆಚ್ಚು ಬಡ ಹಳ್ಳಿಗಳನ್ನು ಆರಿಸಿ ಆಹಾರ ಧಾನ್ಯಗಳ ವಿತರಣಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.