ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಮರಣ ಮೃದಂಗ ಭಾರಿಸುತ್ತಿದ್ದು ನಿಯಂತ್ರಣಕ್ಕೆ ಬರುತ್ತಿಲ್ಲ.ಮಹಾರಾಷ್ಟ್ರದ ಹಾದಿಯಲ್ಲೇ ಕರ್ನಾಟಕವೂ ಇದ್ದು ಪಾಸಿಟಿವ್ ಕೇಸುಗಳು ದಿನೇ ದಿನೇ ಹೆಚ್ಚುತ್ತಲಿವೆ. ಇದಕ್ಕೆ ಕಡಿವಾಣ ಹಾಕುವ ಸಂಬಂಧ ಕಠಿಣ ನಿಯಮಾವಳಿ ಜಾರಿಗೆ ಸರ್ಕಾರ ಮುಂದಾಗಿದೆ. ಮಹಾರಾಷ್ಟ್ರ ಮಾದರಿಯಲ್ಲೇ ಕ್ರಮ ಅನುಸರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
‘ಸ್ವಯಂ ಜನತಾ ಕರ್ಫ್ಯೂ’ಗೆ ಕರೆ
ಈ ನಡುವೆ, ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಆರೋಗ್ಯ ಸಚಿವ ಸುಧಾಕರ್, ಲಾಕ್‌ಡೌನ್ ಪರ್ಯಾಯವಲ್ಲ, ಜನರೇ ಎಚ್ಚರವಹಿಸಬೇಕಿದೆ ಎಂದಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರ್ಯಾಯವಲ್ಲ. ಜನರೇ ಇದನ್ನು ಅರ್ಥ ಮಾಡಿಕೊಂಡು ಜನತಾ ಕರ್ಫ್ಯೂ ವಿಧಿಸಿಕೊಳ್ಳಬೇಕು ಎಂದವರು ಕರೆ ನೀಡಿದ್ದಾರೆ.
ಸಮಾರಂಭಗಳಿಗೂ ಅಂಕುಶ:
ಸಮಾರಂಭಗಳನ್ನು ಸರಳವಾಗಿ ಮಾಡಬೇಕು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಪ್ರಕರಣ ಸಂಖ್ಯೆ ಹೆಚ್ಚಿದರೆ ಜಿಲ್ಲಾಡಳಿತವನ್ನೇ ಹೊಣೆ ಮಾಡಲಾಗುತ್ತದೆ. ಕೋವಿಡ್ ಸುರಕ್ಷತಾ ಕ್ರಮಗಳನ್ನು ಜನರು ಪಾಲಿಸಬೇಕು ಎಂದು ಸಚಿವ ಸುಧಾಕರ್ ಮನವಿ ಮಾಡಿದರು.