ರಾಜ್ಯದಲ್ಲಿ ಸಾರಿಗೆ ನೌಕರರ ವೇತನ ಸಮಸ್ಯೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ನೌಕರರ ಬೇಡಿಕೆಗಳು, ಮುಷ್ಕರದ ಎಚ್ಚರಿಕೆ, ಸರ್ಕಾರದ ಪ್ರತಿಕ್ರಿಯೆ—ಇವೆಲ್ಲವೂ ಒಂದೇ ಸಮಯದಲ್ಲಿ ನಡೆಯುತ್ತಿವೆ. ಆದರೆ ಈ ಕಲಹದಲ್ಲಿ ನಿಜವಾದ ಸಮಸ್ಯೆ ಏನು? ಯಾರ ಹಕ್ಕು ನ್ಯಾಯವಾಗಿದ್ದು, ಯಾವ ಭಾಗದಲ್ಲಿ ಗೊಂದಲ ಉಂಟಾಗಿದೆ
ನೌಕರರ ಬೇಡಿಕೆಗಳು – ಸರಳವಾಗಿ ಹೇಳುವುದಾದರೆ:
- 2020 ರಿಂದ ಸರ್ಕಾರ 15% ವೇತನ ಹೆಚ್ಚಳ ಮಾಡಲು ಒಪ್ಪಿಕೊಂಡಿತ್ತು, ಆದರೆ 38 ತಿಂಗಳ ವೇತನ ಬಾಕಿ ಇದೆ. ಅದನ್ನು ಕೊಡಬೇಕು ಎನ್ನುವುದು ಮೊದಲ ಬೇಡಿಕೆ.
- 2024 ರಿಂದ ಹೊಸದಾಗಿ ವೇತನ ಪರಿಷ್ಕರಣೆ ಮಾಡಬೇಕು, 2023ರ ಕೊನೆಯದಿನದ ಆಧಾರದ ಮೇಲೆ 25% ಹೆಚ್ಚಳ ಕೊಡಬೇಕು ಎಂಬುದು ಇನ್ನೊಂದು ಬೇಡಿಕೆ.
ಇದರಲ್ಲಿ ಮತ್ತೊಂದು ಗೊಂದಲವೇನೆಂದರೆ, ಬೇರೆ ಒಂದು ನೌಕರರ ಸಂಘಟನೆ—ಸಾರಿಗೆ ನೌಕರರ ಒಕ್ಕೂಟ— ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆಯೇ ಸಮಾನ ವೇತನ ನೀಡಬೇಕೆಂಬ ವಿಚಾರದಲ್ಲಿ ಸಂಘಟನೆಗಳದ್ದೂ ದ್ವಂದ್ವ ನಿಲುವಾಗಿದೆ.
ಎರಡು ಸಂಘಟನೆಗಳ ಬೇಡಿಕೆಗಳು ಪರಸ್ಪರ ವಿರುದ್ದವಾಗಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಯಾರ ಮಾತು ಕೇಳಬೇಕು? ಯಾರಿಗೆ ಮೊದಲಿಗೆ ತುರ್ತು ಪರಿಹಾರ ನೀಡಬೇಕು? ಇದು ಸರ್ಕಾರಕ್ಕೂ ತಲೆನೋವಿನ ಕಾರಣವಾಗಿದೆ.
ಸರ್ಕಾರದ ಹೇಳೋದು ಏನು?
‘ಕೋವಿಡ್ ಸಮಯದಲ್ಲಿ ನೌಕರರ ವೇತನ ಸರ್ಕಾರ ನೀಡಿದೆ. ಆದ್ದರಿಂದ 2023ರ ಮಾರ್ಚ್ ರಿಂದ 15% ವೇತನ ಏರಿಕೆ ಜಾರಿ ಮಾಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ.
ಹಿಂದಿನ ಎಲ್ಲ ವೇತನ ಪರಿಷ್ಕರಣೆಗಳು ಹೊಸ ವರ್ಷದಿಂದಲೇ ಜಾರಿಯಾಗಿದ್ದವು—ಹಿಂದಿನಿಂದ ಜಾರಿಯಾಗಲಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಹೇಳುತ್ತದೆ, “2020ರಿಂದಲೇ ವೇತನ ಹೆಚ್ಚಳ ಮಾಡಬೇಕು” ಎಂಬ ಬೇಡಿಕೆಗೆ ಆದೇಶವನ್ನು ಮಾರ್ಪಾಡು ಮಾಡಲು ಸಾಧ್ಯವಿಲ್ಲ ಎಂಬುದು ಪ್ರಮುಖ ಅಂಶವಾಗಿದೆ.
2023 ರಿಂದ ಜಾರಿಗೆ ಬರುತ್ತದೆ ಎಂದು ಹಿಂದಿನ ಸರ್ಕಾರದ ಆದೇಶ? ಇದುವೇ ಎಲ್ಲಾ ಸಮಸ್ಯೆಗಳ ಮೂಲ?
2020 ರಿಂದ ಅನ್ವಯವಾಗುವಂತಿದ್ದರೆ ಇದಕ್ಕಾಗಿ ಯಾವುದೇ ಪ್ರತ್ಯೇಕ ನಿಧಿಯನ್ನು ಹಿಂದಿನ ಸರ್ಕಾರ ಹಂಚಿಕೆ ಮಾಡಿರುವುದಿಲ್ಲ. ಮತ್ತು ಸರ್ಕಾರದ ಆದೇಶದಲ್ಲಿ ಎಲ್ಲಿಯೂ 2020 ರಿಂದ ಎಂಬುದರ ಬಗ್ಗೆ ಉಲ್ಲೇಖವಿರುವುದಿಲ್ಲ. ಏಕ ಸದಸ್ಯ ಸಮಿತಿಯು ಎಷ್ಟು ತಿಂಗಳ ಬಾಕಿ ನೀಡಬೇಕು ಎಂದು ತಿಳಿಸುವುದು ಎಂಬುದನ್ನು ಮಾತ್ರ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿರುತ್ತದೆ” ಅದಕ್ಕೂ ಸಹ ಪ್ರತ್ಯೇಕ ನಿಧಿಯಾಗಲಿ, ಬಜೆಟ್ ನಲ್ಲಿ ಹಣ ವಾಗಲಿ ಮೀಸಲಿರಿಸಿಲ್ಲ.

ಮೂಲ ಸಮಸ್ಯೆ ಏನು?
ಸಂಘಟನೆಗಳ ನಡುವೆ ಒಂದೇ ರೀತಿಯ ನಿಲುವಿಲ್ಲ. ಬೇರೆ ಬೇರೆ ಬೇಡಿಕೆಗಳು, ಭಿನ್ನ ವಿಭಿನ್ನ ಟೀಕೆಗಳು. ಹೀಗಿರುವಾಗ ಸರ್ಕಾರ ತೀರ್ಮಾನಕ್ಕೆ ಬರೋದು ಕಷ್ಟ. ಮೇಲಿಂದ ಮೇಲೆ ಬೇಡಿಕೆ ಮಾಡುವುದು ಸುಲಭ, ಆದರೆ ರಾಜ್ಯದ ಹಣಕಾಸು ಪರಿಸ್ಥಿತಿ, ಪ್ರಕ್ರಿಯೆಗಳು, ನಿಯಮಗಳು ಇವೆಲ್ಲವನ್ನೂ ಸರ್ಕಾರ ಪಾಲಿಸಲೇಬೇಕು.
ಮುಷ್ಕರ ಪರಿಹಾರವೇ? ಅಥವಾ ಸಮಸ್ಯೆ ಮತ್ತಷ್ಟು ದೊಡ್ಡದಾಗುವ ಮಾರ್ಗವೇ? ಎಂಬ ಬಗ್ಗೆಯೂ ವಿಮರ್ಶೆ ನಡೆಯಬೇಕಿದೆ.
ಈ ಹಿಂದೆ ಮುಷ್ಕರದಲ್ಲಿ ಸಾವಿರಾರು ನೌಕರರು ಕೆಲಸದಿಂದ ವಜಾಗೊಂಡಿದ್ದರು. ಇಂದಿಗೂ ಅವರು ನ್ಯಾಯಕ್ಕಾಗಿ ಕೋರ್ಟ್‌ಗಳಲ್ಲಿ ಅಲೆಯುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಮತ್ತೆ ಅದೇ ದಾರಿಗೆ ಹೋಗುವುದು ಯಾವ ನೌಕರರಿಗೂ ಲಾಭದಾಯಕವಾಗದು.
ಇದನ್ನು ಗಮನಿಸಿದರೆ, ಮುಷ್ಕರಕ್ಕಿಂತ ಮಾತುಕತೆ ಉತ್ತಮ. ಸರ್ಕಾರವೂ ಕೆಲವೊಂದು ಹೊಸ ಯೋಜನೆಗಳನ್ನು ಆರಂಭಿಸಿದೆ. 5200 ಹೊಸ ಬಸ್ಸುಗಳು, ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದಿಂದ ಆದಾಯ ಹೆಚ್ಚಳ, 10,000 ಹೊಸ ನೇಮಕಾತಿ ಇತ್ಯಾದಿ. ಇದರ ಅರ್ಥ, ಸರ್ಕಾರ ಸಹ ಪ್ರಯತ್ನ ಮಾಡುತ್ತಿದೆ.
ಒಟ್ಟಿನಲ್ಲಿ ಎಲ್ಲರಿಗೂ ಪರಿಹಾರ ಸಿಗಬೇಕಾದ ಸಂದರ್ಭದಲ್ಲಿ, ಸಾರಿಗೆ ನೌಕರರು ಸರಕಾರದ ನೌಕರರಲ್ಲ, ಅವರು ನಿಗಮದಡಿಯಲ್ಲಿ ಕೆಲಸ ಮಾಡುತ್ತಾರೆ. ಆದರೂ ಅವರ ಶ್ರಮವನ್ನು ಮರೆಯಲು ಸಾಧ್ಯವಿಲ್ಲ. ಸರ್ಕಾರದ ನಿಯಮಗಳು ಒಂದು ಕಡೆ, ನೌಕರರ ಬೇಡಿಕೆಗಳು ಮತ್ತೊಂದು ಕಡೆ. ಮಧ್ಯದಲ್ಲಿ ಬಡ ನೌಕರನು ಒತ್ತಡಕ್ಕೆ ಸಿಲುಕಿರುವುದು ವಾಸ್ತವ.
ಹೀಗಾಗಿ, ಈ ಸಮಸ್ಯೆಗೆ ಸತ್ಯವಾಗಿ ಪರಿಹಾರ ಬಯಸಿದರೆ, ಸಂವಾದದ ದಾರಿ ಬೇಕಾಗಿವೆ. ಇಲ್ಲದಿದ್ದರೆ ಈ ರೀತಿಯ ಹೋರಾಟಗಳು ಮತ್ತೆ ಮತ್ತೆ ಮತ್ತೆ ಮೂಡಿ ಬರುತ್ತಲೇ ಇರುತ್ತವೆ.



















































ಸರ್ಕಾರದ ಹೇಳೋದು ಏನು?