ಆಪಲ್ ಕಂಪನಿ ಸೆಪ್ಟೆಂಬರ್ 9 ರಂದು ತನ್ನ ಹೊಸ ಐಫೋನ್ 17 ಸರಣಿಯನ್ನು ಬಿಡುಗಡೆ ಮಾಡುವ ಮುನ್ನ, ಕಳೆದ ವರ್ಷ ಬಿಡುಗಡೆಯಾದ ಐಫೋನ್ 16 ಮಾದರಿಗಳಿಗೆ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರೀ ರಿಯಾಯಿತಿ ಘೋಷಿಸಲಾಗಿದೆ.
ಸೆಪ್ಟೆಂಬರ್ 19ರಿಂದ ಭಾರತದಲ್ಲಿ ಹೊಸ ಮಾದರಿಗಳು ಮಾರಾಟಕ್ಕಿಳಿಯುವ ನಿರೀಕ್ಷೆ ಇದೆ. ಈ ನಡುವೆ, ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಹಳೆಯ ಮಾದರಿಗಳ ಬೆಲೆಗಳನ್ನು ಕಡಿತಗೊಳಿಸಿ ಗ್ರಾಹಕರ ಗಮನ ಸೆಳೆಯಲು ಸ್ಪರ್ಧೆ ಆರಂಭಿಸಿವೆ.
ಅಮೆಜಾನ್ ಆಫರ್: ರೂ.79,900 ಕ್ಕೆ ಬಿಡುಗಡೆಯಾದ 128GB ಐಫೋನ್ 16 ಈಗ ರೂ.69,999 ಕ್ಕೆ ಲಭ್ಯ. ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿದರೆ ಹೆಚ್ಚುವರಿ ರೂ.3,000 ರಿಯಾಯಿತಿ ದೊರೆಯುತ್ತದೆ. ಹಳೆಯ ಫೋನ್ ವಿನಿಮಯ ಮಾಡಿದರೆ ರೂ.36,050 ವರೆಗೆ ಕಡಿತ ಸಿಗಲಿದೆ ಎಂಬ ಜಾಹೀರಾತುಗಳು ಹರಿದಾಡುತ್ತಿವೆ.
ಫ್ಲಿಪ್‌ಕಾರ್ಟ್ ಆಫರ್: ಐಫೋನ್ 16 ಅನ್ನು ರೂ.71,399 ಕ್ಕೆ ಪಟ್ಟಿ ಮಾಡಲಾಗಿದೆ. ಬ್ಯಾಂಕ್ ಆಫರ್, ರೂ.8,501 ರ ವಿಶೇಷ ರಿಯಾಯಿತಿ, EMI ಸೌಲಭ್ಯ ಹಾಗೂ ರೂ.61,700 ವರೆಗೆ ವಿನಿಮಯ ರಿಯಾಯಿತಿ ಲಭ್ಯ ಎನ್ನಲಾಗುತ್ತಿದೆ.
ಐಫೋನ್ 16 ಪ್ರೊ: ರೂ.1,19,900 ಕ್ಕೆ ಬಿಡುಗಡೆಯಾದ ಪ್ರೊ ಮಾದರಿ ಈಗ ರೂ.1,05,900 ಕ್ಕೆ ಇಳಿಕೆಯಾಗಿದೆ. ಕ್ರೆಡಿಟ್ ಕಾರ್ಡ್ ಆಫರ್‌ನೊಂದಿಗೆ ಬೆಲೆ ರೂ.1,01,900 ಕ್ಕೆ ಇಳಿಯುತ್ತದೆ. ವಿನಿಮಯ ರಿಯಾಯಿತಿ ರೂ.46,550 ವರೆಗೆ ದೊರೆಯಬಹುದು ಎಂಬ ವಿಶ್ಲೇಷಣೆಯೂ ಕುತೂಹಲಕ್ಕೆ ಕಾರಣವಾಗಿವೆ.