ಮಂಗಳೂರು: ಹಿಜಬ್ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕಿದೆ ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಅವರು ಹೋರಾಟ ನಿರತ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಹೋರಾಡುತ್ತಿರುವ ಹಿಜಾಬ್ ವಿದ್ಯಾರ್ಥಿನಿಯರಿಗೆ ಅಭಿನಂದನೆಗಳು ಎಂದರು. ಹಿಜಬ್ ವಿಚಾರದಲ್ಲಿ ನ್ಯಾಯಾಲಯದ ಆದೇಶ ಪಾಲಿಸಬೇಕಿದೆ ಎಂದರು. ಪ್ರಕರಣ ಇನ್ನೂ ಕೋರ್ಟ್ ನಲ್ಲಿದೆ. ಎಸ್ ಡಿ ಪಿಐ ಹಾಗೂ ಸಂಘಪರಿವಾರದವರು ಇಂತಹ ಘಟನೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ನ್ಯಾಯಾಲಯದ ಮೂಲಕ ಹೋರಾಟ ನಡೆಸುತ್ತಿರುವವರಿಗೆ ನಮ್ಮ ಬೆಂಬಲವಿದೆ ಎಂದವರು ಹೇಳಿದರು.
ದೇಶದಲ್ಲಿ 33 ಕೋಟಿಗೂ ಹೆಚ್ಚು ದೇವರಿದ್ದಾರೆ. ಉತ್ತರಪ್ರದೇಶದ ಎಲ್ಲಾ ಮಹಿಳೆಯರು ಗುಂಗಟ್ ಹಾಕುತ್ತಾರೆ. ಅವರವರ ಇಷ್ಟದ ಪ್ರಕಾರ ಬಟ್ಟೆ ಧರಿಸಲಿ. ಅವ್ರ ಸಂಪ್ರದಾಯದ ಪ್ರಕಾರ ಧರಿಸಲು ಅವಕಾಶ ಮಾಡಿಕೊಡಬೇಕು ಎಂದು ಹರಿಪ್ರಸಾದ್ ಪ್ರತಿಪಾದಿಸಿದರು.


















































