ಕಲಬುರಗಿ: RSS ನಿರ್ಬಂಧಿಸಲು ಹೊರಟ ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ RSSನ ಶತಾಬ್ದಿ ಪಥಸಂಚಲನಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಿದ ಕಲಬುರಗಿ ಹೈಕೋರ್ಟ್ ಪೀಠ ನವೆಂಬರ್ 2ರಂದು ಪಥಸಂಚಲನಕ್ಕೆ ಅನುಮತಿ ನೀಡಿದೆ.
ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಕುರಿತಂತೆ ಭಾನುವಾರ ನಡೆಸಿದ ಹೈಕೋರ್ಟ್ ಪೀಠ, ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಜೊತೆಗೆ ಪಥಸಂಚಲನ ಮಾರ್ಗ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿ ರುವ ಹೈಕೋರ್ಟ್, ವಿಚಾರಣೆಯನ್ನು ಅಕ್ಟೋಬರ್ 24ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದೆ.
ಚಿತ್ತಾಪುರದಲ್ಲಿ ಭಾನುವಾರ RSS ಪಥ ಸಂಚಲನಕ್ಕೆ ಸ್ಥಳೀಯ ತಹಶೀಲ್ದಾರ್ ನಾಗಯ್ಯ ಹಿರೇಮಠ ಅನುಮತಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಪ್ರಮುಖರು ಕಲಬುರಗಿ ಹೈಕೋರ್ಟ್ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ತುರ್ತು ವಿಚಾರಣೆ ನಡೆಸಿದ ನ್ಯಾ. ಎಂಜಿಎಸ್ ಕಮಲ್ ವರಿದ್ದ ಪೀಠ, ಪ್ರತಿಭಟನೆ ಮಾಡದೇ, ಘೋಷಣೆ ಕೂಗದೇ ಗುಂಪು ನಡೆಯಲು ಅನುಮತಿ ಅಗತ್ಯವೇ. ದೊಡ್ಡ ಕುಟುಂಬದ ಸದಸ್ಯರು ಪರಿಸರದ ಅರಿವು ಮೂಡಿಸುವ ಮೆರವಣಿಗೆಗೆ ಅನುಮತಿ ಪಡೆಯಬೇಕೇ, ಯಾವ ಕಾನೂನಿನ ಅಡಿಯಲ್ಲಿ ಅನುಮತಿ ಪಡೆಯಬೇಕೆಂದು ಹೈಕೋರ್ಟ್ ಪ್ರಶ್ನೆ ಮಾಡಿತು.
ಈ ವೇಳೆ, ವಾದ ಮಂಡಿಸಿದ ಸರ್ಕಾರಿ ವಕೀಲರು, ದಲಿತ್ ಪ್ಯಾಂಥರ್ಸ್ ಕೂಡ ಪ್ರತಿಭಟನೆಗೆ ಅನುಮತಿ ಕೋರಿವೆ. ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟು ಅನುಮತಿ ನೀಡಿಲ್ಲವೆಂದು ಪೀಠದ ಗಮನಸೆಳೆಯಿತು.
ವಾದ ಆಲಿಸಿದ ನ್ಯಾಯಪೀಠವು, ಆರ್‌ಎಸ್‌ಎಸ್, ಭೀಮ್ ಆರ್ಮಿ ಎರಡೂ ಸಂಘಟನೆಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲು ಸೂಚನೆ ನೀಡಿತು. ನವೆಂಬರ್ 2ರಂದು RSS ಪಥಸಂಚಲನ ನಡೆಸಲು ಅರ್ಜಿದಾರರು ಒಪ್ಪಿಗೆ ಸೂಚಿಸಿದರು. ಇದೇ ವೇಳೆ, ರಾಜ್ಯದ ಸುಮಾರು 250 ಕಡೆ ಶಾಂತಿಯುತ ಪಥಸಂಚಲನ ನಡೆದಿದ್ದು,ಎಲ್ಲಿಯೂ ಶಾಂತಿಭಂಗವಾಗಿಲ್ಲವೆಂದು ನ್ಯಾಯಾಲಯದ ಗಮನಸೆಳೆದವು. ವಾದ ಆಲಿಸಿದ ನ್ಯಾಯಮೂರ್ತಿಗಳು ಹೊಸದಾಗಿ ಅರ್ಜಿ ಕೊಡಲು RSS ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.