📝 ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಬೆಳಗ್ಗೆ ಗೆಳತಿ ಸಹನ ಫೋನ್ ಮಾಡಿ ಹುಟ್ಟಿದ ಹಬ್ಬಕ್ಕೆ ವಿಶ್ ಮಾಡಿದ್ದರೆ ನಾನಿನ್ನೂ ನಿದ್ದೆಯ ಮೂಡ್ ಲ್ಲಿಯೇ ಇದ್ದೆ. ಎಂತ ಮಾರಾಯ್ತಿ ಗಂಟೆ ಎಂಟಾಯ್ತು ಇನ್ನೂ ಏಳಲಿಲ್ಲವಾ? ಹೇಯ್ ಹಾಗೇನಿಲ್ಲವಾ , ಆಗಲೇ ಎದ್ದೆ ರಾತ್ರೆ ಸರಿ ನಿದ್ದೆಯೇ ಬರ್ತಾ ಇಲ್ಲವಾ. ಹಗಲು ತಲೆ ಎತ್ತಲಿಕ್ಕೇ ಕಷ್ಟ ಆಗ್ತದೆ, ಎಂತ ಮಾಡುದು ಅಂತಲೇ ಅರ್ಥವಾಗುತ್ತಿಲ್ಲ. ಹಾಗಂತ ಹಗಲು ಮಲಗಲಿಕ್ಕೆ ಒಂದು ಚೂರು ಸಮಯ ಇಲ್ಲ.
ನನ್ನ ಮಾತು ಮುಗಿಯುವುದೇ ತಡ ಹೇಯ್ ಚಾ ಕುಡಿ , ಚೆಂದಕೆ ನಿದ್ದೆ ಬರುತ್ತದೆ, ಎನ್ನುವುದೇ! ಚಾ ಕುಡಿದರೆ ಬರುವ ನಿದ್ದೆಯೂ ಓಡಿತು ಎಂದು ನಾನೆಂದರೆ ಸಹನ ಬಿಡುವ ಹಾಗೆ ಕಾಣಲಿಲ್ಲ. ಇದು ಮಸಲಾ ಚಾಹ ಅಲ್ಲ, ಹೆಲ್ದಿ ಬನಾನಾ ಚಹಾ.
ಅಷ್ಟು ಕೇಳಿದ್ದೇ ತಡ ನನ್ನ ಮಂಪರು ಪೂರ ಹಾರಿ ಹೋಯ್ತು. ಎಂತ ಇನ್ನೊಮ್ಮೆ ಹೇಳು. ಅದೇ ಬಾಳೆ ಹಣ್ಣಿನ ಚಹಾ. ಹೀಗೆ ಮಾಡಿ ಕುಡಿ. ಒಂದು ಬಾಳೆ ಹಣ್ಣನ್ನು ಸ್ವಲ್ಪ ತುಂಡುಮಾಡಿ (ಇಷ್ಟವಿದ್ದರೆ ಸಿಪ್ಪೆಯನ್ನು ಬಳಸ ಬಹುದು) ಕುದಿಯುವ ನೀರಿಗೆ ಹಾಕ ಬೇಕು. ಚಿಟಿಕೆ ದಾಲ್ಚಿನ್ನಿ ಹಾಕ ಬೇಕು. ಹತ್ತು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ ಸೋಸಿದಾಗ ಬಾಳೆಹಣ್ಣಿನ ಚಹಾ ತಯಾರು. ಬಾಳೆಹಣ್ಣಿನ ಸ್ವಾಭಾವಿಕ ಸಿಹಿಯೇ ಚಹಾದಲ್ಲಿರುತ್ತದೆ. ಕುಡಿದು ನೋಡು. ನಿದ್ದೆ ಚೆನ್ನಾಗಿ ಬರುತ್ತದೆ.
ಇದೊಂದು ಟ್ರೈ ಮಾಡಿಯೇ ಬಿಡೋಣವೆಂದು ಹೊರಟೆ. ಸ್ವಾದಿಷ್ಟವಾದ ಬನಾನ ಟೀ ಮನಸಿಗೆ ಹಿಡಿಸುವಂತಿತ್ತು. ನಿದ್ದೆಯೂ ಬಂತು. ಗೆಳತಿಗೆ ಥ್ಯಾಂಕ್ಸ್ ಹೇಳುವುದನ್ನು ಮರೆಯಲಿಲ್ಲ.

ಬಾಳೆಹಣ್ಣಿನ ಟೀ ಕುಡಿದರೆ ಶರೀರಕ್ಕೆ ಲಾಭಗಳು ಹಲವು.
- ಬಾಳೆಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಅವುಗಳಲ್ಲಿ ಪ್ರಮುಖವಾದವು ಪೊಟಾಸಿಯಂ, ಮ್ಯಾಗ್ನೀಸಿಯಮ್, ಟ್ರಿಫೊಫಾನ್. ಸಹಕಾರಿಯಾಗಿವೆ. ರಕ್ತದೊತ್ತಡವನ್ನು ನಿವಾರಿಸುತ್ತದೆ. ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
- ಬಾಳೆಹಣ್ಣು ಪ್ರೋಟೀನ್ ಗಳ ಆಗರವಾಗಿದೆ.
- ವಿಟಮಿನ್ ಬಿ ೬ ರೋಗನಿರೋಧಕ ಶಕ್ತಿ ಯನ್ನು ವೃದ್ಧಿಸಲು ಸಹಕಾರಿಯಾಗಿದೆ. ಕೆಂಪು ರಕ್ತ ಕಣಗಳ ಉತ್ಪತ್ತಿ ಹೆಚ್ಚಿಸುತ್ತದೆ.
- ಬಾಳೆಹಣ್ಣನ್ನು ಕುದಿಸುವ ಕಾರಣ ಕ್ಯಾಲೊರಿ ಪ್ರಮಾಣ ಕಡಿಮೆಯಾಗುತ್ತದೆ.
- ದೇಹದಲ್ಲಿ ನ ಒತ್ತಡ ಹಾಗೂ ಖಿನ್ನತೆ ಯನ್ನು ನಿಯಂತ್ರಿಸುವ ಹಾರ್ಮೋನು ಗಳನ್ನು ಇದರಲ್ಲಿರುವ ಸೆರೊಟೂನಿನ್ ಹೆಚ್ಚಿಸುತ್ತದೆ.
- ಮೂಳೆಗಳ ಆರೋಗ್ಯ ವೃದ್ಧಿ, ಹೆಚ್ಚನ ತೂಕ ಇಳಿಸಲು ಬನಾನ ಚಹಾ ಪರಿಣಾಮಕಾರಿ.
- ಕಣ್ಣುಗಳ ಆರೋಗ್ಯ ರಕ್ಷಣೆಗೂ ಸೈ.
- ೨೭ ಶೇಕಡಾ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುವುದು.
- ನಿಯಮಿತ ಸೇವನೆಯಿಂದ ಗರ್ಭಾವಸ್ಥೆಯ ಸಮಯದಲ್ಲಿ ನ ಮಧುಮೇಹ ವನ್ನು ನಿಯಂತ್ರಿಸ ಬಹುದು.
- ಹೃದಯದ ಆರೋಗ್ಯಕ್ಕೂ ಉತ್ತಮ.
- ಹಲವು ಬಗೆಯ ಕ್ಯಾನ್ಸರ್ ನಿವಾರಕ.
ಎಲ್ಲಾ ಸಮಸ್ಯೆ ಗಳಿಗೂ ಮೂಲ ನಿದ್ರಾ ಹೀನತೆ. ಚೆನ್ನಾಗಿ ಯಾರು ನಿದ್ದೆ ಮಾಡುತ್ತಾರೋ ಅವರ ಆರೋಗ್ಯ ಉತ್ತಮವಾಗಿಯೇ ಇರುತ್ತದೆ. ಮನಸ್ಸು ಸರಿಯಾಗಿ ಇರುತ್ತದೆ.





















































