ಬೆಂಗಳೂರು: ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆ ಏರ್ಪಡಿಸಿದ್ದ ರಾಷ್ಟ್ರೀಯ ತೋಟಗಾರಿಕೆ ಮೇಳ 2021ಕ್ಕೆ ಸಾರ್ವಜನಿಕರು ಮತ್ತು ರೈತರಿಂದ ಅಭೂತಪೂರ್ವ ಪ್ರತಕ್ರಿಯೆ ವ್ಯಕ್ತವಾಗಿದೆ.
ಕೊವಿಡ್ ಕಾಲಘಟ್ಟದಲ್ಲಿ ಏರ್ಪಟ್ಟ ಬೃಹತ್ ತೋಟಗಾರಿಕೆ ಮೇಳ ಇದಾಗಿದ್ದು, ಕೋವಿಡ್ ಪರಿಸ್ಥಿತಿಯನ್ನೂ ಲೆಕ್ಕಿಸದೆ, ರೈತರು ಮತ್ತು ಸಾರ್ವಜನಿಕರು ಐಐಎಚ್ಆರ್ ಅಭಿವೃದ್ದಿ ಪಡಿಸಿರುವ ತೋಟಗಾರಿಕೆ ಬೆಳೆಗಳು, ಹಣ್ಣಿನ ಬೆಳೆಗಳು ಮತ್ತು ವಿವಿಧ ತಳಿಯ ಹೂವಿನ ತಳಿಗಳ ಕುರಿತು ಮತ್ತು ಸುಮಾರು 140 ಕ್ಕೂ ಅಧಿಕ ಸ್ಟಾಲ್ ಬಗ್ಗೆ ಮಾಹಿತಿ ತಿಳಿಯಲು ಹೆಸರಘಟ್ಟದಲ್ಲಿ ನಡೆಯುತ್ತಿರುವ ಮೇಳಕ್ಕೆ ದಾಂಗುಡಿ ಇಟ್ಟರು.
ನೋಂದಣಿ ಅಧಿಕಾರಿಗಳ ಮಾಹಿತಿ ಪ್ರಕಾರ ಎರಡನೇ ದಿನ ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ತೋಟಗಾರಿಕೆ ಮೇಳ ವಿಕ್ಷಿಸಿದರು. ಸಾರ್ವಜನಿಕರು, ಐಐಎಚ್ಎಫ್ ಅಭಿವೃದ್ದಿ ಪಡಿಸಿರುವ ವಿವಿಧ ತೋಟಗಾರಿಕೆ ಗಿಡಗಳು ಮತ್ತು ಬೀಜಗಳ ಖರೀದಿಗೆ ಮುಗಿ ಬಿದ್ದರು.
ಮುಖ್ಯವಾಗಿ ಸಾರ್ವಜನರಿಕರು ಐಐಎಚ್ ಎಫ್ನ ತಾಟುಗಳಿಗೆ ಭೇಟಿ ನೀಡಿ ವಿವಿಧ ತೋಟಗಾರಿಕೆ ಬೆಳೆ ಮತ್ತು ಹೂವಿನ ಕುರಿತು ಮಾಹಿತಿ ಪಡೆದರು.
ಐಐಎಚ್ ಎಫ್ ಬಿಡುಗಡೆ ಮಾಡಿರುವ ಟೊಮೆಟ್ ಬೆಳೆಗಾಳದ ಅರ್ಕಾ ಅಬೇದ್, ಮೆಣಸಿನ ಕಾಯಿ ಅರ್ಕಾ ತುಳಸಿ,, ಅರ್ಕಾ ಸಂಗಮ್ ಕಲ್ಲಂಗಡಿ, ಅರ್ಕಾ ಚೆನ್ನ ಕನಕಾಂಬರ ಮತ್ತಿತರ ತೋಟಗಾರಿಕೆ ಬೆಳೆ ಮತ್ತು ಹೂಹಣ್ಣಿನ ಬಗ್ಗೆ ಮಾಹಿತಿ ಪಡೆದರು.
ಅಲ್ಲದೆ ಐಐಎಚ್ ಆರ್ ಅಭಿವೃದ್ದಿ ಪಡಿಸಿರುವ ತೋಟಗಾರಿಕೆ ತಂತ್ರಜ್ಞಾನಗಳ ಬಳಸುವ ವಿಧಾನ ಎಲ್ಲರ ಕುತೂಹಲದ ಕೇಂದ್ರಬಿಂದುವಾಯಿತು.