ಮಂಗಳೂರು ಹೊರವಲಯ ನೀರುಮಾರ್ಗದ G.R HOSPITAL & RESEARCH CENTREಗೆ ಶಾಸಕರು, ಅಧಿಕಾರಿಗಳ ದಿಢೀರ್ ಭೇಟಿ.. ಡಿಸಿ ಮುಂದೆ ಕೊಡುಗೈ ದಾನಿಯಾದ ಗಣೇಶ್ ರಾವ್.. ತಮ್ಮ ಹೊಸ ವೈದ್ಯಕೀಯ ಕಾಲೇಜು, ಆಸ್ಪತ್ರೆಯನ್ನೇ ಸಾರ್ವಜನಿಕ ಸೇವೆಗೆ ಒಪ್ಪಿಸಿದ ಶಿಕ್ಷಣ ತಜ್ಞ.
ಮಂಗಳೂರು: ಕಡಲತಡಿ ಮಂಗಳೂರಿನ ಪ್ರತಿಷ್ಠಿತ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಕೈಂಕರ್ಯದಲ್ಲೂ ಮುಂಚೂಣಯಲ್ಲಿದೆ. ಕಳೆದ ವರ್ಷ ಈ ಸಂಸ್ಥೆ ಮಂಗಳೂರು-ಉಡುಪಿ, ಬೆಂಗಳೂರು ಜಿಲ್ಲೆಗಳಲ್ಲಿ ಉಚಿತ ವೈದ್ಯಕೀಯ ಸೇವೆ ನೀಡಿ ದೇಶದ ಗಮನಸೆಳೆದಿತ್ತು. ಈ ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಇದೀಗ ಮತ್ತೆ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.
ಕೊರೋನಾ ಸಂಕಟ ಕಾಲದಲ್ಲಿ ಆಸ್ಪತ್ರೆಗಳ ಸಂಖ್ಯೆ ಕಡಿಮೆಯಿದ್ದು ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಇದೇ ಸಂದರ್ಭದಲ್ಲಿ ಮಂಗಳೂರು ಹೊರವಲಯದ ನೀರುಮಾರ್ಗ ಬಳಿ ತಲೆ ಎತ್ತಿರುವ ಸುಸಜ್ಜಿತ ಜಿ.ಆರ್. ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯು ಸುದ್ದಿಯ ಮುನ್ನಲೆಗೆ ಬರುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ಸ್ವತಃ ವೈದ್ಯರಾದ ಶಾಸಕ ಭರತ್ ಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ದಿಢೀರನೆ ಕರಾವಳಿ ಹಾಸ್ಪಿಟಲ್ ಹಾಗೂ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದರು. ಈ ಹಠಾತ್ ಭೇಟಿ ಅಚ್ಚರಿ ಹಾಗೂ ಕುತೂಹಲಕ್ಕೂ ಕಾರಣವಾಯಿತು.
ನೀರುಮಾರ್ಗದ ಒಳಬೈಲಿನಲ್ಲಿರುವ ಜಿ.ಆರ್. ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್ ಈಗಷ್ಟೇ ತಲೆಎತ್ತಿದೆ. ಹೀಗಿರುವಾಗ ಸುಸಜ್ಜತ ವ್ಯವಸ್ಥೆ ಇರಲು ಸಾಧ್ಯವೇ? ಪರಿಣಿತರ ವ್ಯವಸ್ಥೆ ಸಿಗಬಹುದೇ? ಎಂಬ ಸಾಲು ಸಾಲು ಅನುಮಾನಗಳೊಂದಿಗೆ ಈ ಕ್ಯಾಂಪಸ್‌ಗೆ ಹೆಜ್ಜೆ ಇಟ್ಟ ಡಿಸಿಗೆ ಅಚ್ಚರಿ ಹಾಗೂ ಕುತೂಹಲ. ಸದ್ದಿಲ್ಲದೆ ಸುದ್ದಿಯಾಗುತ್ತಿರುವ ಈ ಮೆಡಿಕಲ್ ಕಾಲೇಜ್ ನಿಜಕ್ಕೂ ಸುಸಜ್ಜಿತ ವೈದ್ಯಕೀಯ ಕೇಂದ್ರ ಎಂಬುದು ಅಧಿಕಾರಿಗೆ ಖುದ್ದು ಭೇಟಿ ನೀಡಿದಾಗ ಮನವರಿಕೆಯಾಯಿತು.
ಆ ಕೂಡಲೇ ಗಣೇಶ್ ರಾವ್ ಅವರ ಮುಂದೆ ಡಿಸಿ ಡಾ.ರಾಜೇಂದ್ರ ಅವರು ಇಟ್ಟ ಪ್ರಸ್ತಾಪ ಅಲ್ಲಿದ್ದ ಶಾಸಕ ಭರತ್ ಶೆಟ್ಟಿ ಹಾಗೂ ಇತರರಲ್ಲಿ ಕುತೂಹಲ ಮೂಡಿಸಿತು. ಈ ಆಸ್ಪತ್ರೆಯನ್ನು ಕೊವಿಡ್ ಕೇರ್‌ಗೆ ಬಳಸಬಹುದೇ ಎಂಬ ಡಿಸಿಯ ಕೋರಿಕೆಗೆ ತಡ ಮಡದೆಯೇ ಗಣೇಶ್ ರಾವ್ ಒಪ್ಪಗೆ ಸೂಚಿಸಿ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದರು.
ಡಿಸಿ, ಎಂಎಲ್‌ಎ ಫುಲ್ ಖುಷ್:
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮತ್ತು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಮೆಡಿಕಲ್ ಕಾಲೇಜ್ ಕ್ಯಾಫಸ್ ಪರ್ಯಟನೆ ನಡೆಸಿ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದ ಮಾತುಕತೆ ನಂತರ ಮಾತನಾಡಿದ, ಶಾಸಕ ಡಾ.ಭರತ್ ಶೆಟ್ಟಿ, ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕರಾಗಿರುವ ಗಣೇಶ್ ರಾವ್ ಅವರು ಇದೀಗ ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ ಸ್ಥಳೀಯರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಸುಮಾರು 250 ಬೆಡ್‌ಗಳ ಆಸ್ಪತ್ರೆ, 80 ಐಸಿಯು, ಲ್ಯಾಬ್ ಸಹಿತ ಉತ್ತಮ ವ್ಯವಸ್ಥೆಯಿದೆ. ಇದೀಗ ಈಗಿನ ತುರ್ತು ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುತ್ತಿರುವುದು ಶ್ಲಾಘನೀಯ ಎಂದರು.
ಈ ವೇಳೆ ಮಾತನಾಡಿದ ಗಣೇಶ್ ರಾವ್, ಜಿ.ಆರ್. ಮೆಡಿಕಲ್ ಆಸ್ಪತ್ರೆ 330 ಬೆಡ್‌ಗಳೊಂದಿಗೆ ಸುಸಜ್ಜಿತವಾಗುತ್ತಿದೆ. ಜನತೆಯ ಆರೋಗ್ಯ ದೃಷ್ಟಿಯಿಂದ ಜಿಲ್ಲಾಡಳಿತದೊಂದಿಗೆ ನಮ್ಮ ಸಂಸ್ಥೆ ಸಹಕಾರ ನೀಡುತ್ತದೆ ಎಂದರು. ಉನ್ನತ ಸೌಲಭ್ಯದ ಒಂದು ಬ್ಲಾಕ್‌ನ್ನು ಹೆಲ್ತ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಚಿಕಿತ್ಸೆಗೆ ಬಳಸಿಕೊಳ್ಳಿವ ಬಗ್ಗೆ ಜಿಲ್ಲಾಡಳಿತ ಕೇಳಿಕೊಂಡಿದೆ. ಇದಕ್ಕೆ ಸಹಕಾರ ನೀಡುತ್ತೇವೆ ಎಂದವರು ಭರವಸೆ ನೀಡಿದರು.
ಈ ಸಂದರ್ಭ ತಹಶೀಲ್ದಾರ್ ಗುರುಪ್ರಸಾದ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.