ಗದಗ: “ಸಮಬಾಳು ಸಮಪಾಲು ಎನ್ನುವ ವಿಜೆಯೇಂದ್ರ ಅವರು ಅಲ್ಪಸಂಖ್ಯಾತರಲ್ಲಿ ಯಾರದರೊಬ್ಬರನ್ನು ಎಂಎಲ್‌ಸಿ, ರಾಜ್ಯಸಭಾ ಸದ್ಯಸರನ್ನಾಗಿ, ಕೇಂದ್ರ ಸಂಪುಟದಲ್ಲಿ ಮಂತ್ರಿ ಮಾಡಿಕೊಳ್ಳಲಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಗದಗದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಎಕ್ಸ್ (ಟ್ವೀಟ್) ಬಗ್ಗೆ ಪ್ರತಿಕ್ರಿಯಿಸಿದರು. “ಅವರ ಪಕ್ಷದಲ್ಲಿ ಇಬ್ಬರು ಕ್ರಿಶ್ಚಿಯನ್ಸ್, ಮೂರು ಜನ ಮುಸ್ಲಿಮರಿಗೆ ಅವಕಾಶ ಮಾಡಿಕೊಡಲಿ. ಹೀಗೆ ಮಾಡಿದಾಗ ಮಾತ್ರ ವಿಜಯೇಂದ್ರ ಅವರಿಗೆ ಸಮಬಾಳು ಸಮಪಾಲು ಎಂದು ಮಾತನಾಡಲು ಒಂದು ಅವಕಾಶ ಸಿಗುತ್ತದೆ” ಎಂದರು.
ವಿಜಯೇಂದ್ರ ಕುವೆಂಪು ಅವರು ಬರೆದಿರುವ ನಾಡಗೀತೆಯನ್ನು ವಿಜಯೇಂದ್ರ ಸರಿಯಾಗಿ ಓದಲಿ. ಯಾರು, ಯಾರು ಸೇರಿದರೆ ಶಾಂತಿಯ ತೋಟ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲಿ. ಇನ್ನು ಪಾಪ ಈಗ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರ ಲೆವೆಲ್ ನಲ್ಲಿ ಇರಲಿ” ಎಂದರು.
“ಮುಸ್ಲಿಂ, ಸಿಕ್, ಜೈನ, ಪಾರ್ಸಿ, ಬೌದ್ದರು ಇವರೆಲ್ಲಾ ನಮ್ಮ ದೇಶದ ಹಾಗೂ ಕರ್ನಾಟಕದ ಪ್ರಜೆಗಳು. ನಾವು ಎಲ್ಲಾ ಅಲ್ಪಸಂಖ್ಯಾತರು, ಹಿಂದುಳಿದವರ ಬಗ್ಗೆ ಚಿಂತನೆ ಮಾಡುತ್ತೇವೆ” ಎಂದು ಡಿಕೆಶಿ ಹೇಳಿದರು.