ಬೆಂಗಳೂರು: ಖಾಸಗಿ ಸಾರಿಗೆ ಸಂಸ್ಥೆಗಳ ಬಹುಕಾಲದ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮವಹಿಸಿದ್ದು, ಮಾರುದ್ದದ ಬೇಡಿಕೆಗಳ ಪಟ್ಟಿ ಪೈಕಿ ಬಹುತೇಕ ಆಗ್ರಹಗಳಿಗೆ ಮನ್ನಣೆ ಸಿಕ್ಕಿದೆ. ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಹಾಗೂ ಇತರೆ ಸರಕು ಸಾಗಣೆ ವಾಹನಗಳ ಮಾಲೀಕರು ಮತ್ತು ಚಾಲಕರ 31 ಬೇಡಿಕೆಗಳಲ್ಲಿ 20ನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬಗೆಹರಿಸಿದ್ದಾರೆ.
ಕೆಲವು ಸಮಯದ ಹಿಂದೆ ವಕೀಲರಾದ ನಟರಾಜ್ ಶರ್ಮಾ ರವರ ನೇತೃತ್ವದಲ್ಲಿ ಖಾಸಗಿ ವಲಯದ 32 ಸಂಘಟನೆಗಳು ಪ್ರತಿಭಟನ ನಡೆಸಿ ಸರ್ಕಾರಕ್ಕೆ ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದವು. ಈ ಪೈಕಿ ಬಹುತೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ.
ವಾಹನಗಳ ಜೀವಾವಧಿ ತೆರಿಗೆ, ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ, ಟ್ಯಾಕ್ಸಿ ಚಾಲಕರಿಗೆ ಊಟದ ವ್ಯವಸ್ಥೆ, ಚಾಲಕರ ಮಕ್ಕಳಿಗೆ ಶಾಲಾ ವಿದ್ಯಾರ್ಥಿ ವೇತನ, ಅಂತರ್ ರಾಜ್ಯ ಪ್ರವಾಸಿ ವಾಹನಗಳ ಪರಸ್ಪರ ಒಪ್ಪಂದ, ವೈಟ್ ಬೋರ್ಡ್ ವಾಹನಗಳನ್ನು ಬಾಡಿಗೆ ಕಾರುಗಳಂತೆ ಬಳಸಲು ನಿರ್ಬಂಧ ಸಹಿತ ಹಲವು ವಿಚಾರಗಳಲ್ಲಿ ಸಾರಿಗೆ ಸಚಿವರು ಸ್ಪಂಧಿಸಿದ್ದಾರೆ ಎಂದು ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಹಾಗೂ ಇತರೆ ಸರಕು ಸಾಗಣೆ ವಾಹನಗಳ ಮಾಲೀಕರ ಸಮೂಹ ಸಂತಸ ವ್ಯಕ್ತಪಡಿಸಿವೆ.
ಪ್ರಮುಖ ಇತ್ಯರ್ಥಗಳು ಹೀಗಿವೆ.
10 ರಿಂದ 15 ಲಕ್ಷದ ಬೆಲೆಯ ಹೊಸ ಸಾರಿಗೆ ವಾಹನಗಳಿಗೆ 9% ಜೀವಾವಧಿ ತೆರಿಗೆಯನ್ನು ವಿಧಿಸಿದೆ. ಮುಂದುವರೆಸಿ ಈಗಾಗಲೇ ನೋಂದಾಯಿತ ವಾಹನಗಳಿಗೆ ತ್ರೈಮಾಸಿಕ ತೆರಿಗೆಯನ್ನು ವಿಧಿಸಿ ಆದೇಶಿಸಿದೆ.
ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಲು ಅಧಿನಿಯಮ 2024 ಪ್ರಕಟಿಸಲಾಗಿದೆ.
ಸರ್ಕಾರದ ವತಿಯಿಂದ ಅಗ್ರಿಗೇಟರ್ ಆಪ್ ಮಾಡುವ ಕುರಿತು ಇ-ಆಡಳಿತ ಇಲಾಖೆಯೊಂದಗೆ ಚರ್ಚಿಸಿ ಪರಿಕಲ್ಪನೆ ಟಿಪ್ಪಣಿಯನ್ನು (Concept Note) ಒದಗಿಸಲು ಕ್ರಮ ವಹಿಸಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 5000 ಟ್ಯಾಕ್ಸಿ ಚಾಲಕರಿಗೆ ಊಟದ ವ್ಯವಸ್ಥೆಗಾಗಿ ಇಂದಿರಾ ಕ್ಯಾಂಟಿನ್ ಯನ್ನು ತೆರೆಯಲಾಗಿದೆ.
ಎಲೆಕ್ನಿಕ್ ಆಟೋರಿಕ್ಷಾಗಳು ಸಂಚರಿಸುವ ಪ್ರದೇಶ ಮಾರ್ಗ ನಿಯಂತ್ರಣಕ್ಕೆ ರಹದಾರಿಯಿಂದ ವಿನಾಯಿತಿ ನೀಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕ್ರಮ ವಹಿಸಲಾಗಿದೆ.
ಚಾಲನಾ ಪರವಾನಿಗೆ ಹೊಂದಿರುವವರಿಗೆ ಮಾತ್ರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಬೆಂಗಳೂರು ಇಲ್ಲಿ ಇ-ರಿಕ್ಷಾಗಳನ್ನು ನೋದಣಿ ಮಾಡಲು ನಿರ್ಣಯಿಸಲಾಗಿದ್ದು, ರಾಪಿಡೋ. ಓಲಾ, ಉಬರ್ ಮತ್ತು ಇನ್ನಿತರ ಆನ್ನೈನ್ ಕಂಪನಿಗಳಿಗೆ ಇ- ರಿಕ್ಷಾಗಳ ನೇರ ನೋಂದಣಿ ಮಾಡುವುದನ್ನು ನಿಷೇಧಿಸಲಾಗಿದೆ.
ಓಲಾ ಮತ್ತು ಉಬರ್ ಆಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳು ಟ್ಯಾಕ್ಸಿಗಳನ್ನು ಬ್ಲಾಕ್ ಲಿಸ್ಟ್ ಮಾಡುವ ಕ್ರಮದ ವಿರುದ್ಧ ಉಚ್ಚ ನ್ಯಾಯಾಲಯದ ಆದೇಶವಿರುವ ಕಾರಣ. ಪ್ರಕರಣದ ತ್ವರಿತ ವಿಲೇವಾರಿಗಾಗಿ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಚಾಲಕರ ಮಕ್ಕಳಿಗೆ ಶಾಲಾ ವಿದ್ಯಾರ್ಥಿ ವೇತನ, ಕಾಲೇಜು ವಿದ್ಯಾಭ್ಯಾಸಕ್ಕೆ ಧನಸಹಾಯ ಒದಗಿಸಲು 2023-24 ನೇ ಸಾಲಿನ ಆಯವ್ಯಯದಲ್ಲಿ ರೂ. 17 ಕೋಟಿ ಮೀಸಲಿಡಲಾಗಿದೆ.
ಬಾಕಿ ಇರುವ ಅಂತರ್ ರಾಜ್ಯ ಪ್ರವಾಸಿ ವಾಹನಗಳ ಪರಸ್ಪರ ಒಪ್ಪಂದಕ್ಕೆ ಚಾಲನೆ ನೀಡುವ ಸಲುವಾಗಿ ಈಗಾಗಲೇ ನೀಡಲಾಗಿರುವ ರಹದಾರಿಗಳ ಕುರಿತು ಈ ಕುರಿತು ತ್ವರಿತ ಕ್ರಮ ವಹಿಸಲಾಗುವುದು.
ಟ್ಯಾಕ್ಸಿ, ಮಾಕ್ಸಿ ಹಾಗೂ ಒಪ್ಪಂದ ವಾಹನಗಳಿಗೆ ಈಗಾಗಲೇ ವಿಶೇಷ ರಹದಾರಿ ನೀಡಲಾಗುತ್ತಿದೆ. ಹೊರ ರಾಜ್ಯದ ವಾಹನಗಳಿಗೆ ಕರ್ನಾಟಕದ ಗಡಿ ತನಿಖಾ ಠಾಣೆಗಳಲ್ಲಿ ವಿಶೇಷ/ತಾತ್ಕಲಿಕ ರಹದಾರಿ ನೀಡವ ವ್ಯವಸ್ಥೆ ಕಲ್ಪಿಸಲಾಗಿದೆ.
ಅಖಿಲ ಭಾರತ ಪ್ರವಾಸಿ ವಾಹನಗಳಿಗೆ ವಾಹನ- 04 ಆನ್ಸೆನ್ ತಂತ್ರಾಂಶದ ಮೂಲಕ ರಹಧಾರಿಗಳನ್ನು ನೀಡಲಾಗುತ್ತಿದ್ದು, ವಿಶೇಷ/ ತಾತ್ಕಾಲಿಕ ರಹದಾರಿ ನೀಡುವ ಸಲುವಾಗಿ ತಂತ್ರಾಶವನ್ನು ಅಭಿವೃದ್ಧಿಪಡಿಸಲು NIC ರವರಿಗೆ ಸೂಚಿಸಲಾಗಿದೆ.
ಕಲಾಸಿಪಾಳ್ಯ ವಾಹನ ನಿಲ್ದಾಣದಲ್ಲಿ ಖಾಸಗಿ ವಾಹನಗಳಿಗೆ ದರ ವಿಧಿಸುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದ್ದು, ತಾತ್ಕಾಲಿಕವಾಗಿ 1/9/2023ರಿಂದ ಜಾರಿಗೆ ಬರುವಂತೆ ಪ್ರತಿ ವಾಹನಕ್ಕೆ ಪ್ರತಿ ದಿನಕ್ಕೆ ರೂ. 50 ಅಥವಾ ತಿಂಗಳಿಗೆ ರೂ. 1500 ಶುಲ್ಕವನ್ನು ಮಾತ್ರ ವಿಧಿಸುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಪತ್ರವನ್ನು ಬರೆದು ಸೂಚನೆ ನೀಡಲಾಗಿದೆ.
ಖಾಸಗಿ ಶಾಲಾ ವಾಹನಗಳ ಪರವಾನಗಿ ನೀಡಿರುವ ಕುರಿತು ಇರುವ ನಿರ್ಬಂಧಗಳನ್ನು ಸಡಲಿಸುವ ಬಗ್ಗೆ ಸ್ಕೂಲ್ ಕ್ಯಾಬ್ ಅಸೋಸಿಯೇಷನ್ ನೊಂದಿಗೆ ಸಭೆ ನಡೆಸಿ ಅಗತ್ಯವಿದ್ದಲ್ಲಿ ನಿರ್ಭಂಧಗಳನ್ನು ಸಡಲಿಸಲು ಕ್ರಮ ವಹಿಸಲಾಗುತ್ತಿದೆ.
Zomato ಮತ್ತು Swiggy ಆಪ್ ಆಧಾರಿತ ಅನಧಿಕೃತವಾಗಿ ಬೈಕ್ ರೈಡರ್ ಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು. 64 ವಾಹನಗಳ ಮೇಲೆ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ.
ವೈಟ್ ಬೋರ್ಡ್ ವಾಹನಗಳನ್ನು ಬಾಡಿಗೆ ಕಾರುಗಳಂತೆ ಬಳಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಬೆಂಗಳೂರು ನಗರದ ಜಂಟಿ ಸಾರಿಗೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ.ರದ್ದುಗೊಳಿಸಲಾಗಿರುವ ಜೂಮ್ ಕಂಪನಿಯ ವಾಹನಗಳನ್ನು ವಶ ಪಡೆಸಿಕೊಂಡು ಪೋಲೀಸ್ ಪ್ರಕರಣ ದಾಖಲಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅಕ್ರಮವಾಗಿ ಚಲಿಸುತ್ತಿರುವ ರಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಸಂಪೂರ್ಣ ನಿಷೇಧ ಮಾಡುವ ಬಗ್ಗೆ ಉಚ್ಚ ನ್ಯಾಯಾಲಯದ ತಡೆ ಇರುವುದರಿಂದ ತೆರವುಗೊಳಿಸಲು ಅಫಿಡೇವಿಟ್ ಸಲ್ಲಿಸಿ ಮುಂದಿನ ಕ್ರಮ ಜರುಗಿಸಲಾಗಿದೆ.
ಓಲಾ ಮತ್ತು ಉಬರ್ ನಂತಹ ಆನ್ಸೆನ್ ಕಂಪನಿಗಳಿಗೆ ಈಗಾಗಲೇ ನಿರ್ಧಾರವಾಗಿರುವ ದರಗಳಿಗಿಂತ ಹೆಚ್ಚು ದರ ಪಡೆಯುತ್ತಿರುವ ಕುರಿತು ತಪಾಸಣೆ ನಡೆಸಿ ನ್ಯಾಯಾಲಯದಲ್ಲಿ ನಿರ್ಬಂಧಿಸುವ ಸಲುವಾಗಿ ಆದೇಶ ಪಡೆಯಲು ಮಾನ್ಯ ಅಡ್ವಕೇಟ್ ಜನರಲ್ ಗೆ ನೀಡಲಾಗಿದೆ.
ಅಗ್ರಿಗೇಟರ್ ಲೈಸೆನ್ಸ್ ಹೊಂದಿರುವ ಓಲಾ ಮತ್ತು ಉಬರ್ ಕಂಪನಿಗಳು ವಿಧಿಸಬೇಕಾದ ಡೈನಾಮಿಕ್ ದರ ರದ್ದುಗೊಳಿಸಿ, ಏರಕೂಪದ ಪ್ರಯಾಣಿಕ ಹಾಗೂ ಸಾಗಣಿಕೆ ದರಗಳನ್ನು ನಿಗದಿಪಡಿಸಲಾಗಿದೆ.
ರೆಡ್ ಬಸ್. ಅಭಿ ಬಸ್ ನಂತ ಇನ್ನಿತರ ಆನ್ವೆನ್ ಆಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳು ಹೆಚ್ಚು ಕಮಿಷನ್ ಪಡೆಯುತ್ತಿರುವ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ 14-09-2023 ರಿಂದ 18-9-2023ರ ವರೆಗೆ 646 ಪ್ರಕರಣಗಳನ್ನು ದಾಖಲಿಸಿ ರೂ. 562263 ಗಳನ್ನು ದಂಡ ವಿಧಿಸಲಾಗಿದೆ.
ಮಜಲು ವಾಹನ/ಒಪ್ಪಂದ ವಾಹನ ಬಸ್ಸುಗಳ ರಹದಾರಿಯಲ್ಲಿ ಅಡಕವಾಗಿರುವ ವಾಹನದ ಬದಲಾವಣೆಗೆ ಈಗಾಗಲೇ 90 ದಿನಗಳ ಸಮಯಾವಕಾಶ ಕಲ್ಪಿಸಲಾಗಿದೆ.