ದೀದಿ ನಾಡಲ್ಲಿ ಮೋದಿ ಮೋಡಿ.. ಆದರೂ ಮಮತಾ ಪಾರುಪತ್ಯ.. ಅಸ್ಸಾಂ, ಪಾಂಡಿಚೇರಿಯಲ್ಲಿ NDA, ಕೇರಳದಲ್ಲಿ ಎಡರಂಗಕ್ಕೆ ಅಧಿಕಾರ ಸಾಧ್ಯತೆ..
ದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು ಸಹಿತ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದ್ದು ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಸಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಏಜೆನ್ಸಿಗಳು ನಢಸಿರುವ ಎಕ್ಸಿಟ್ ಪೋಲ್ ಫಲಿತಾಂಶ ಅಚ್ಚರಿ ಹಾಗೂ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಕೇರಳದಲ್ಲಿ ಎಡರಂಗ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಮುನ್ಸೂಚನೆ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮೋದಿ ಅಲೆ ಎದ್ದಿದೆಯಾದರೂ ಅಲ್ಲಿ ಮಮತಾ ಬ್ಯಾನರ್ಜಿ ಸಾರಥ್ಯದ ತೃಣಮೂಲ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದು ಮತದಾನೋತ್ತರ ಸಮೀಕ್ಷೆಯಲ್ಲಿ ಮುನ್ಸೂಚನೆ ಸಿಕ್ಕಿದೆ.
ಇದನ್ನೂ ಓದಿ.. EXIT POLL : ಫಲಿತಾಂಶ ಹೀಗಿದೆ..
ಅಸ್ಸಾಂನಲ್ಲಿ ಎನ್‌ಡಿಎ ಮಿತ್ರಕೂಟ ಅಧಿಕಾರ ರಚಿಸುವ ಸಾಧ್ಯತೆಗಳೇ ಹೆಚ್ಚು. ಪಾಂಡಿಚೇರಿಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಗೆ ವಿಜಯಮಾಲೆ ಒಲಿಯುವ ಸಾಧ್ಯತೆಗಳು ಗೋಚರಿಸಿವೆ.
ಈ ಮತಗಟ್ಟೆ ಸಮೀಕ್ಷೆಗಳನ್ನಾಧರಿಸಿ ಸೋಲುಗೆಲುವಿನ ಲೆಕ್ಕಾಚಾರ ಸಾಗಿದ್ದು ಮತೆಣಿಕೆಯ ನಂತರವಷ್ಟೇ ಸ್ಪಷ್ಟ ಫಲಿತಾಂಶ ಸಿಗಲಿದೆ.