ಮಂಗಳೂರು: ಪವಿತ್ರ ರಮ್ಜಾನ್ ಮಾಸ ಕೊನೆಗೊಳ್ಳುತ್ತಿದ್ದು ಮುಸ್ಲಿಂ ಸಮುದಾಯ ಹಬ್ಬದ ಸಡಗರದಲ್ಲಿದೆ. ಸಾಮೂಹಿಕ ಪ್ರಾರ್ಥನೆಗೆ ಕೋವಿಡ್ ಪರಿಸ್ಥಿತಿ ಅಡ್ಡಿಯಾಗಿದ್ದರೂ ಸಂಪ್ರದಾಯಕ್ಕೆ ಕೊರತೆಯಾಗದಂತೆ ಹಬ್ಬ ಆಚರಣೆಗೆ ಸಿದ್ದತೆಗಳೂ ಸಾಗಿವೆ.
ಈ ನಡುವೆ, ಕರಾವಳಿ ತೀರದಲ್ಲಿ ಇಂದು ಚಂದ್ರ ದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಇಂದು ಚಂದ್ರದರ್ಶನವಾಗದ ಕಾರಣ ರಮಳಾನ್ ಚಾಂದ್ 30 (ಬುಧವಾರ) ಪೂರ್ತಿ ಗೊಳಿಸಿ “ಶವ್ವಾಳ್ ಚಾಂದ್ 01 ಮೇ 13 ಗುರುವಾರ ಈದುಲ್ ಫಿತರ್” ಆಗಿರುತ್ತದೆ ಎಂದು ದಕ್ಷಿಣಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ಘೊಷಿಸಿದ್ದಾರೆ.
ಈ ಕುರಿತಂತೆ ಮಂಗಳೂರಿನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ & ಈದ್ಗಾ ಮಸೀದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಅವರು ಪ್ರಕಟಣೆ ಹೊರಡಿಸಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿ ಅನುಸರಿಸಿ, ಕೊರೋನಾ ವಿರುದ್ದದ ಜಾಗೃತಿಯಲ್ಲಿ ಎಲ್ಲರೂ ಕೈ ಜೋಡಿಸಿ ಸರಳವಾಗಿ ಈದುಲ್ ಫಿತರ್ ಹಬ್ಬ ಆಚರಿಸುವಂತೆ, ಖಾಝಿ ಉಸ್ತಾದರವರು ಕರೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.