ದೆಹಲಿ: ನಟ ರಾಹುಲ್ ವೊಹ್ರಾ ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟಿದ್ದು ಕೊನೆಯುಸಿರೆಳೆಯುವ ಮುನ್ನ ಮಾಡಲಾಗಿದೆ ಎನ್ನಲಾದ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಆಮ್ಲಜನಕ ಮುಗೀತಾ ಇದೆ. ಬರ್ತಾ ಇಲ್ಲ’ ಎಂದು ಹೇಳಿದ ಕೂಡಲೇ ಅವರು ಪ್ರಾಣ ಬಿಟ್ಟಿದ್ದಾರೆ. ಆ ವೀಡಿಯೋವನ್ನು ರಾಹುಲ್ ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಕೋವಿಡ್ ಸೋಂಕಿಗೊಳಗಾಗಿ ದೆಹಲಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು, ‘ಸರಿಯಾದ ಚಿಕಿತ್ಸೆ ಸಿಗುತ್ತಿದ್ದರೆ ನಾನೂ ಬದುಕುತ್ತಿದ್ದೆ’ ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
ಮೇ 8ರಂದು ಮಾಡಿರುವ ಈ ಪೋಸ್ಟ್‌ನಲ್ಲಿ, ಜೀವನದಲ್ಲಿ ಈ ಬಾರಿ ಸೋತೆ, ಮತ್ತೆ ಹುಟ್ಟಿ ಬರುತ್ತೇನೆಂದು ಬೆರೆದುಕೊಂಡಿದ್ದರು. ಪ್ರಧಾನಿ ಮೋದಿ, ದೆಹಲಿಯ ಸಚಿವ ಮನೀಶ್ ಸಿಸೋಡಿಯಾ ಹೆಸರನ್ನೂ ಆ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು. ಈ ಪೋಸ್ಟ್ ಭಾರೀ ಸುದ್ದಿಯಾಗಿದೆ. ಇದರ ಬೆನ್ನಲೇ ಅವರ ವೀಡಿಯೋ ಕೂಡಾ ವೈರಲ್ ಆಗಿದೆ.