ದೊಡ್ಡಬಳ್ಳಾಪುರ: ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಹುಣ್ಣಿಮೆ ಪ್ರಯುಕ್ತ ದೊಡ್ಡಬಳ್ಳಾಪುರ ನಗರದ ಜೆ.ಪಿ.ನಗರದಲ್ಲಿರುವ ಪುಣ್ಯಕ್ಷೇತ್ರ ಶ್ರೀ ರೇಣುಕಾ ಯಲ್ಲಮ್ಮ ಮತ್ತು ಕತ್ತಿ ಮಾರಮ್ಮ ದೇಗುಲದಲ್ಲಿ ವಿಶೇಷ ಪೂಜೆ ಪುನಸ್ಕಾರ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಶ್ರೀದೇವಿಯು ಪರಶುರಾಮನ ವಿಶ್ವಪರ್ಯಟನದ ನಂತರ ಮುತ್ತೈದೆಯಾದಳು ಎಂಬ ಪೌರಾಣಿಕ ನಂಬಿಕೆ ಹಿನ್ನೆಲೆಯಲ್ಲಿ ಭಕ್ತರು ಮುತ್ತೈದೆ ಹುಣ್ಣಿಮೆಯನ್ನು ಆಸ್ತಿಕರು ಆಚರಿಸುತ್ತಾರೆ. ಅದರಂತೆ ಈ ದೇಗುಲದಲ್ಲಿ ಹೋಳಿಗೆ, ಕರಿಗಡಬು ತಯಾರಿಸಿ ದೇವಿಯ ಮಡಿಲಿಗೆ ಹಡ್ಡಲಿಗೆ ತುಂಬುವುದು ಹಬ್ಬದ ಸಂಪ್ರದಾಯ. ಹೀಗಾಗಿ ಭಕ್ತರು ಶ್ರೀಕ್ಷೇತ್ರದಲ್ಲಿ ಕರಿಗಡಬು ಮತ್ತು ಹೋಳಿಗೆ ತಯಾರಿಸಿ ದೇವಿಗೆ ಉಡಿ ತುಂಬಿ ಭಕ್ತಿ ಸಮರ್ಪಿಸಿದರು.
ಅರ್ಚಕ ಅಶ್ವಥ್ ಮಾತನಾಡಿ ಮುತೈದೆ ಹುಣ್ಣುಮೆ ದಿನ ಮಹಿಳೆಯರು ದೇವಿಯ ಕೃಪೆಗೆ ಪಾತ್ರರಾಗುವುದು ಸಂಪ್ರದಾಯ. ಇದರಿಂದ ಆರೋಗ್ಯ, ಕುಟುಂಬ, ಜೀವನ ನಿರ್ವಿಗ್ನವಾಗಿ ನಡೆಯುವುದು ಎಂದರು. ಬೆಳಗ್ಗೆ 5 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವಿಯ ದರ್ಶನ ಪಡೆದಿದ್ದಾರೆ.