ಹೊನ್ನಾಘಟ್ಟ-ಕೋಳೂರು ರಸ್ತೆ ಬಂದ್ ತೆರವು.. ಎರಡು ತಿಂಗಳಿಂದಲು ಬಂದ್ ಮಾಡಲಾಗಿದ್ದ ರಸ್ತೆ ತೆರವು.. ಪೊಲೀಸ್ ಬಂದೋಬಸ್ತ್ ನಲ್ಲಿ ತೆರವು ಕಾರ್ಯಾಚರಣೆ
ವರದಿ: ಸುರೇಶ್ ಬಾಬು
ದೊಡ್ಡಬಳ್ಳಾಪುರ: ಹೊನ್ನಘಟ್ಟ-ಕೋಳೂರು ರಸ್ತೆ ಬಂದ್ ಮಾಡಲಾಗಿದ್ದನ್ನು ತಹಶೀಲ್ದಾರ್ ಟಿ.ಎಸ್. ಶಿವರಾಜ್ ಅವರು ಪೊಲೀಸ್ ಬಂದೋಬಸ್ತ್ನಲ್ಲಿ ತೆರವುಗೊಳಿಸಿದ್ದಾರೆ.
ರಸ್ತ್ ಬಂದ್ನಿಂದಾಗಿ ಎರಡು ತಿಂಗಳಿಂದಲು ಎರಡು ಗ್ರಾಮಗಳ ಜನರ ಸಂಪರ್ಕವೇ ಬಂದ್ ಆಗಿತ್ತು. ಹಲವಾರು ಸುತ್ತಿನ ಶಾಂತಿ ಸಭೆಯ ನಂತರವು ರಸ್ತೆಯನ್ನು ತೆರವು ಮಾಡಲಾಗಿರಲಿಲ್ಲ. ಇಂದು ಪೊಲೀಸರ ಸಮ್ಮುಖದಲ್ಲಿ ಜೆಸಿಬಿಯೊಂದಿಗೆ ರಸ್ತೆಯನ್ನು ತೆರವು ಮಾಡಲಾಯಿತು.
ರಸ್ತೆ ತೆರವು ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಟಿ.ಎಸ್.ಶಿವರಾಜ್, ದಶಕಗಳಿಂದಲು ಇದ್ದ ಹಾಗೂ ಈ ಹಿಂದೆಯೇ ಡಾಂಬರು ಸಹ ಹಾಕಲಾಗಿದ್ದ ರಸ್ತೆಯನ್ನು ಹೊನ್ನಾಘಟ್ಟ ಗ್ರಾಮದ ಕೆಲವರು ಉದ್ದೇಶ ಪೂರ್ವಕವಾಗಿ ಬಂದ್ ಮಾಡಿದ್ದರು. ಸಾರ್ವಜನಿಕರಿಗೆ ತೊಂದರೆ ಮಾಡಿದ್ದವರ ವಿರುದ್ದ ದೂರು ಸಹ ದಾಖಲಿಸಲಾಗಿದೆ. ಬಲಭಾಗದಲ್ಲಿ ತೆರವು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಡಭಾಗದಲ್ಲಿ ಕೂಡ ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದರು.
ಜಾಗದ ಮಾಲೀಕರಾದ ಪ್ರಕಾಶ್, ರುದ್ರೇಶ್ ಮಾತನಾಡಿ ಇದು ನಮ್ಮ ತಾತ, ಮುತ್ತಾತ್ತ ಸಂಪಾದನೆ ಮಾಡಿರುವ ಸ್ವಂತ ಜಾಗ. ಸಾರ್ವಜನಿಕ ಹಿತಾಸಕ್ತಿಯಿಂದ ರಸ್ತೆಗೆ ಸ್ಥಳ ಬಿಟ್ಟಿದ್ದೇವು. ನಾವು ಒಂದು ಇಂಚು ಜಾಗವನ್ನು ಕೂಡ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಲ್ಲ. ಈ ಬಗ್ಗೆ ಹಿಂದಿನ ತಹಶೀಲ್ದಾರ್, ಸರ್ವೇಯರ್ ಗಳೇ ಸರ್ವೆ ಮಾಡಿಸಿದ್ದಾಗಲೂ ಯಾವುದೇ ಒತ್ತುವರಿ ಕಂಡು ಬಂದಿರಲಿಲ್ಲ. ನಮ್ಮ ಜಾಗವನ್ನು ಉಳಿಸಿಕೊಳ್ಳಲು ಕೋರ್ಟ್ ನಲ್ಲಿ ದಾವೆ ಹೂಡಿದ್ದೇವೆ. ಕೋರ್ಟ್ ಈ ಬಗ್ಗೆ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 23ಕ್ಕೆ ನಿಗದಿ ಪಡಿಸಿದೆ. ತಾಲ್ಲೂಕು ಆಡಳಿತ ನಮ್ಮ ಜಾಗದಲ್ಲಿದ್ದ ಕಲ್ಲುಕುಚಗಳನ್ನು ತೆಗೆದುಹಾಕಿದ್ದಾರೆ. ಮುಂದೆ ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದರು.