ದೊಡ್ಡಬಳ್ಳಾಪುರ: ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಹಚ್ಚಲಾಗಿದ್ದ ಸೊಳ್ಳೆ ಬತ್ತಿಯ ಕಿಡಿ ರಟ್ಟಿನ ಡಬ್ಬಕ್ಕೆ ತಗುಲಿದ ಪರಿಣಾಮ, ಹಣ್ಣಿನ ಅಂಗಡಿಯೊಂದು ಸುಟ್ಟು ಭಸ್ಮವಾಗಿರುವ ಘಟನೆ ದೊಡ್ಡಬಳ್ಳಾಪುರದ ಟಿಬಿ ವೃತ್ತ ಸಮೀಪದ ಚರ್ಚ್ ಬಳಿ ಸಂಭವಿಸಿದೆ.
ರಫೀಕ್ ಎಂಬುವವರಿಗೆ ಸೇರಿದ ಹಣ್ಣಿನ ಅಂಗಡಿ ಇದಾಗಿದ್ದು, ಸೋಮವಾರ ತಡರಾತ್ರಿ ಸೊಳ್ಳೆ ಬತ್ತಿಗೆಂದು ಹಚ್ಚಲಾಗಿದ್ದ ಕಿಡಿಯಿಂದ ಬೆಂಕಿ ವ್ಯಾಪಿಸಿ, ಸೇವು, ಮಾವು, ಮೊಸಂಬಿ ಸೇರಿದಂತೆ ಅಪಾರ ಪ್ರಮಾಣದ ಹಣ್ಣುಗಳು ಬೆಂಕಿಗೆ ಸುಟ್ಟು ಕರಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.