ಗಂಧದಗುಡಿಯ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಜೋಗಿ ಖ್ಯಾತಿಯ ಪ್ರೇಮ್ ಜೊತೆ ಧ್ರುವ ಸರ್ಜಾ ಸಿನಿಮಾ ಮಾಡುತ್ತಿದ್ದಾರೆ.
‘ಪೊಗರು’ ಚಿತ್ರದ ನಂತರ ಹಲವು ಸಿನಿಮಾಗಳನ್ನು ಮಾಡುತ್ತಿರುವ ಧ್ರುವ ಸರ್ಜಾ ತನ್ನ ಆರನೇ ಚಿತ್ರದ ಸುಳಿವು ನೀಡಿದ್ದಾರೆ. ಈ ಸಿನಿಮಾವನ್ನು ಪ್ರೇಮ್ ಅವರು ನಿರ್ದೇಶಿಸಲಿದ್ದಾರಂತೆ.
ಇದು ಪ್ರೇಮ್ ಪಾಲಿಗೂ ಪ್ರತಿಷ್ಠೆಯ ಸಿನಿಮಾ ಎನಿಸಲಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರೇಮ್, ‘ಯುದ್ದದ ಮುನ್ನುಡಿ ಇಲ್ಲಿಂದ ಆರಂಭ. ನಿಮ್ಮ ಪ್ರೀತಿ ಪ್ರೋತ್ಸಾಹ ಅಭಿಮಾನ ಆಶೀರ್ವಾದ ಸದಾ ಹೀಗೆ ಇರಲಿ’ ಎಂದು ಹೇಳಿದ್ದಾರೆ.ಬ
ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ, ನಿಮ್ಮ ಪ್ರೀತಿ ಪ್ರೋತ್ಸಾಹ ಅಭಿಮಾನ ಆಶೀರ್ವಾದ ಸದಾ ಹೀಗೆ ಇರಲಿ. @DhruvaSarja #kvnproductions 🙏🙏🙏
The prelude to the war begins now. Shower us with your love and support like you always do.
Love you all. #prems09 #dhruvasarja06 pic.twitter.com/vdVDQHFSrH— PREM❣️S (@directorprems) August 24, 2021