ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಬಿಎಸ್‌ವೈ ಅವರೇ ಸೂಪರ್ ಸಿಎಂ ಎಂದು ಬಿಜೆಪಿ ಪಾಳಯದಲ್ಲಿ ಅಸಮಾಧಾನದ ಮಾತುಗಳು ಕೇಳಿಬಂದರೆ, ಈ ವಿಚಾರದಲ್ಲಿ ಕಾಂಗ್ರೆಸ್ ವಿಷ್ಲೇಷಣೆಯೇ ಬೇರೆ. ಬಿಎಸ್‌ವೈ ಅವರೇ ಹೈಕಮಾಂಡ್ ಎಂದು ಕಾಂಗ್ರೆಸ್ ಬಣ್ಣಿಸಿದೆ.
ನಳಿನ್ ಕುಮಾರ್ ಆಡಿಯೋ ಬಗ್ಗೆಯೂ ಕಾಂಗ್ರೆಸ್ ಟೀಕಿಸಿದೆ. ಬಿಜೆಪಿಯಲ್ಲಿನ ಬೆಳವಣಿಗೆ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ದೆಹಲಿಯಲ್ಲಿರುವ ಪಕ್ಷನಿಷ್ಠನನ್ನು ಸಿಎಂ ಮಾಡಿಬಿಡುತ್ತೇವೆ ಎಂದು ನಳಿನ್ ಕುಮಾರ್, ಕೊಚ್ಚಿಕೊಳ್ಳುತ್ತಿದ್ದರು, ಆದರೆ ಸಿಎಂ ಆಗಿದ್ದು ಬಿಎಸ್‌ವೈ ನಿಷ್ಠ ಬಸವರಾಜ್ ಬೊಮ್ಮಾಯಿ. ದವಳಗಿರಿಯೇ ಈಗ ಬಿಜೆಪಿ ಹೈಕಮಾಂಡ್! ಈ ಹೊತ್ತಿನಲ್ಲಿ ಬಿಜೆಪಿ ನಾಯಕರ ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಿ ಸ್ಥಿರ ಸರ್ಕಾರ, ಸುಸ್ಥಿರ ಆಡಳಿತ ಎನ್ನುವುದು ರಾಜ್ಯಕ್ಕೆ ಮರೀಚಿಕೆಯಾಗಿದೆ ಎಂದು ಲೇವಡಿ ಮಾಡಿದೆ.
ದೆಹಲಿಯಲ್ಲಿರುವ ಪಕ್ಷನಿಷ್ಠನನ್ನು ಸಿಎಂ ಮಾಡಿಬಿಡುತ್ತೇವೆ @nalinkateel ಕೊಚ್ಚಿಕೊಳ್ಳುತ್ತಿದ್ದರು, ಆದರೆ ಸಿಎಂ ಆಗಿದ್ದು ಬಿಎಸ್‌ವೈ ನಿಷ್ಠ @BSBommai.
ದವಳಗಿರಿಯೇ ಈಗ ಬಿಜೆಪಿ ಹೈಕಮಾಂಡ್!
ಈ ಹೊತ್ತಿನಲ್ಲಿ #BJPvsBJP ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಿ ಸ್ಥಿರ ಸರ್ಕಾರ, ಸುಸ್ಥಿರ ಆಡಳಿತ ಎನ್ನುವುದು ರಾಜ್ಯಕ್ಕೆ ಮರೀಚಿಕೆಯಾಗಿದೆ.
— Karnataka Congress (@INCKarnataka) July 30, 2021
'@BJP4Karnataka ದುರಾಡಳಿತದ ವೈಖರಿ👇
●2019ರಲ್ಲಿ ನೆರೆ ಬಂದಾಗ – ಸಂಪುಟವಿಲ್ಲದ ಸರ್ಕಾರ
●2020ರ ನೆರೆ – ಕುರ್ಚಿ ಕದನ
●2021ರ ನೆರೆ ಬಂದಿದೆ – ಏಕವ್ಯಕ್ತಿ ಸರ್ಕಾರದ ಖಾತೆ ಕಸರತ್ತು
●ಕರೋನಾ 1ನೇ ಅಲೆ – ಭ್ರಷ್ಟಾಚಾರಕ್ಕೆ ಪೈಪೋಟಿ, ಆಂತರಿಕ ಕಚ್ಚಾಟ
●2ನೇ ಅಲೆ – ಸಿಡಿ ತಡೆಯಾಜ್ಞೆ
● 3ನೇ ಅಲೆ – ಕುರ್ಚಿಗಾಗಿ ದೆಹಲಿ ಪರೇಡ್
— Karnataka Congress (@INCKarnataka) July 30, 2021