ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ, ನಟ ಅಭಿಷೇಕ್ ಶೀಘ್ರವೇ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ. ಸಕ್ಕರೆ ನಾಡು ಮಂಡ್ಯವೇ ಅವರ ಫೇವರೇಟ್ ಪ್ಲೇಸ್..!
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಳುಗನ ಹಳ್ಳಿಗೆ ಭೇಟಿ ನೀಡಿದ್ದ ವೇಳೆ ತಮ್ಮ ರಾಜಕೀಯ ಆಸಕ್ತಿಯನ್ನು ಬಹಿರಂಗಪಡಿಸಿದರು.
ತಾಯಿ, ಸಂಸದೆ ಪ್ರತಿನಿಧಿಸುತ್ತಿರುವ ಮಂಡ್ಯ ಜಿಲ್ಲೆ ಹುಲುಗನ ಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್, ಜನರು ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಾನು ಸಿದ್ಧ ಎಂದರು.
ಕಳೆದ ವಾರ ಯಾರಿಗೂ ಸುಳಿವಿಲ್ಲದೆ ಸಿಎಂ ಬದಲಾವಣೆ ನಡೆದಿದೆ. ಅದರಂತೆಯೇ ಭವಿಷ್ಯ ಏನು ಅಂತ ಈಗಲೇ ಹೇಳಲು ಸಾಧ್ಯವಿಲ್ಲ ಎಂದ ಅವರು, ಮಂಡ್ಯ, ಮದ್ದೂರು ಕ್ಷೇತ್ರಗಳತ್ತ ಬೊಟ್ಟು ಮಾಡಿದರು. ಮಂಡ್ಯ ಜಿಲ್ಲೆಗೆ ಒಳ್ಳೆಯ ಪ್ರತಿನಿಧಿಗಳು ಸಿಗಬೇಕು” ಎಂಬ ಅಭಿಷೇಕ್ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.