ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಮತ್ತು ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆಂಧ್ರ ಪ್ರದೇಶದ ನೂತನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿಡುಗು ರುಧ್ರ ರಾಜ್ ಹೇಳಿದ್ದಾರೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ತೂಬಗೆರೆ ಹೋಬಳಿಯ ಹೊಸಹಳ್ಳಿ ತಾಂಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾದ ಕಾಂಗ್ರೆಸ್ ಪ್ರಚಾರ ವೇಳೆ ಮಾತನಾಡಿದರು. ಮೇ 10 ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ 140 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುವುದು ಖಚಿತ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದರುವ 5 ಪ್ರಮುಖ ಗ್ಯಾರೆಂಟಿಗಳಿಗೆ ಪಕ್ಷದ ವರಿಷ್ಠರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಸೇರಿ ಚರ್ಚಿಸಿ ಪರಿಶೀಲಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಐದು ಗ್ಯಾರೆಂಟಿ ಅಂಶಗಳು ಜಾರಿಯಾಗಿ ರಾಜ್ಯ ಅಭಿವೃದ್ದಿಯತ್ತ ಸಾಗಬೇಕಾದರೇ ರಾಜ್ಯದ ಜನತೆ ಕಾಂಗ್ರೆಸ್ ಬೆಂಬಲಿಸಬೇಕು.
ಚುನಾವಣೆಗೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಇದ್ದೂ ಕೆ.ಹೆಚ್ ಮುನಿಯಪ್ಪ ಗೆಲುವಿಗೆ ಸಹಕಾರಿಯಾದರೆ ಮುಂದೆ ಬರಲಿರುವ 5 ವರ್ಷ ಜಾತಿ, ಬೇದ, ಧರ್ಮ ಎಂಬ ಬೇದ ಭಾವಗಳ ಇಲ್ಲದೇ ಎಲ್ಲಾ ವರ್ಗಗಳನ್ನು ಜೊತೆಗೂಡಿಸಿಕೊಂಡು ಕೆಲಸಮಾಡಿ ಕ್ಷೇತ್ರವನ್ನು ಅಭಿವೃದ್ದಿಯೆಡೆಗೆ ಕೊಂಡಯುಲ್ಯಲಿದ್ದಾರೆ, ಆದ್ದರಿಂದ ಈ ಬಾರಿ ಅಧಿಕ ಮತಗಳಿಂದ ಅವರನ್ನು ಜಯಶೀಲರನ್ನಾಗಿ ಮಾಡುವಂತೆ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಬಿಜೆಪಿಗೆ ಸೋಲಿನ ಭೀತಿ ಎದುರಾಗಿದ್ದೂ ಪ್ರಧಾನಿ ಮೋದಿ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ, ಒಂದು ದೇಶದ ಪ್ರಧಾನಿಯಾದವರು ವಾರಕ್ಕೂಮ್ಮೆ ಬರುತ್ತಿರುವುದು ಒಂದು ದುರಂತವಾಗಿದೆ, ಮೋದಿಯವರು ಈ ರಾಷ್ಟ್ರದ ಪ್ರಧಾನ ಮಂತ್ರಿ ಗೌರವವನ್ನ ಕೆಳಮಟ್ಟಕ್ಕೆ ತಂದಿದ್ದಾರೆ ಎಂದರು.
ನಾನು ಹೈಸ್ಕೂಲ್ ಓದುವಾಗ ಪಂಡಿತ್ ಜವಾಹರ್ ಲಾಲ್ ನೋಡಿದ್ದೆ, 1964 ರಲ್ಲಿ ಓಮ್ಮೆ ಮಾತ್ರ ಬಂದಿದ್ದರು, ಚಿಕ್ಕಬಳ್ಳಾಪುರಕ್ಕೆ ಬಂದಿದ್ದ ಅವರು ನಂದಿಗಿರಿಧಾಮದಲ್ಲಿ ವಿಶ್ರಾಂತಿ ಪಡೆದು, ಸಮೀಪದಲ್ಲೇ ಇದ್ದ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮಸ್ಥಳಕ್ಕೆ ಭೇಟಿ ನೀಡಿ ಅವರ ಸಮಾಧಿಗೆ ನಮನ ಸಲ್ಲಿಸಿದರು, ಸರ್ ಎಂ ವಿಶ್ವೇಶ್ವರಯ್ಯನವರ ನೆನಪಿಗಾಗಿ 1964ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಗ್ರಂಥಾಲಯ ಮಾಡಲಾಗಿದೆ. ಹಾಗೆಯೇ ಇಂದಿರಾ ಗಾಂಧಿ ಎರಡು ಬಾರಿ ಭೇಟಿ ನೀಡಿದ್ದನ್ನು ನಾನು ನೋಡಿದ್ದೇನೆ, ಆದರೆ ಈ ಪ್ರಧಾನಿ ಮಂತ್ರಿಗಳು ಕಾಂಗ್ರೆಸ್ ಬರುತ್ತೆ ಎಂದು ಭಯ ಬಿದ್ದು ವಾರಕ್ಕೂಮ್ಮೆ ರಾಜ್ಯಕ್ಕೆ ಬರುತ್ತಿದ್ದಾರೆ.
ನೀಟ್ ಪರೀಕ್ಷೆ ನಡೆಯುವ ಸಮಯದಲ್ಲಿ ರೋಡ್ ಶೋ ಅಯೋಜನೆ ಮಾಡಿರುವುದು ಸರ್ಕಾರದ ಬೇಜವಾಬ್ದಾರಿಯನ್ನ ತೋರಿಸುತ್ತದೆ, ಪ್ರಧಾನ ಮಂತ್ರಿಗಳು, ಅಮಿತ್ ಷಾ ಮತ್ತು ಜೆಪಿ ನಡ್ಡಾ ರಾಜ್ಯಕ್ಕೆ ಪದೇ ಪದೇ ಬರುತ್ತಿರುವುದು ಜನತೆಗೆ ಬೇಸರವಾಗಿದೆ, ಇದರಿಂದ ಕಾಂಗ್ರೆಸ್ ಮತ್ತಷ್ಟು ಸ್ಥಾನ ಗಳಿಸಿದೆ ಎಂದರು.
ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ಮಂದಕೃಷ್ಣ ಮಾದಿಗ ರಾಜ್ಯದಲ್ಲಿ ಬಿಜೆಪಿ ಬೆಂಬಲ ನೀಡಿರುವುದು ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಆಂದ್ರಪ್ರದೇಶದ ಕಾರ್ಯಾಧ್ಯಕ್ಷರಾದ ಪದ್ಮಶ್ರೀ ಮಾತನಾಡಿ, ಇತ್ತೀಚೆಗೆ ಬಿಜೆಪಿ ಸರ್ಕಾರ ಬಂದ ಮೇಲೆ ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಹತ್ಯಾಚಾರ, ದೌರ್ಜನ್ಯಗಳು ಹೆಚ್ಚುತಲೇ ಇದೆ, ಸದ್ಯದ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಲು ಆಗದಂತ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ವನ್ನು ಕಿತ್ತೊಗೆಯಬೇಕು, ಕಾಂಗ್ರೆಸ್ ರಾಜ್ಯದಲ್ಲಿ 140 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದೂ ಬಾರಿ ಅಧಿಕಾರಕ್ಕೆರುವುದು ನಿಶ್ಚಿತ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಹೆಚ್.ಮುನಿಯಪ್ಪ ನವರನ್ನು ಗೆಲ್ಲಿಸುವ ಮೂಲಕ ರಾಹುಲ್ ಗಾಂಧಿ ಕೈ ಬಲಪಡಿಸಬೇಕು ಎಂದರು.
ಆಂಧ್ರಪ್ರದೇಶದ ಮಾಜಿ ಅಧ್ಯಕ್ಷರು ಮತ್ತು ಮಾಜಿ ಮಂತ್ರಿಗಳಾದ ರಘುವೀರ್ ರೆಡ್ಡಿ, ಶುಂಕರ ಪದ್ಮಶ್ರೀ ಕಾರ್ಯಾಧ್ಯಕ್ಷರು, ಪಾರ್ಥಸಾರಾಥಿ ರೆಡ್ಡಿ ಎಐಸಿಸಿ ಮೆಂಬರ್ ಆಂದ್ರಪ್ರದೇಶ್ ರಾಜ್ಯ ಕಾಂಗ್ರೆಸ್ ವಕ್ತಾರರು, ಶಂಕರ್ ಎಸ್. ಸಿ, ವಿಭಾಗದ ರಾಜ್ಯಾಧ್ಯಕ್ಷ, ನಾಗ ಮಧುಯಾದವ್ ರಾಜ್ಯ ಎನ್‌ಎಸ್‌ಯುಐ ಅಧ್ಯಕ್ಷರು ಮತ್ತು ಹಿರಿಯ ಕಾಂಗ್ರೆಸ್ ಮುಖಂಡರು ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು