ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ನಾಲ್ಕನೇ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರಕ್ಕೇರುವ ಆಮ್ ಆದ್ಮಿ ಪಕ್ಷದ ಕನಸು ಭಗ್ನವಾಗಿದೆ. ಬಿಜೆಪಿ ಬಹುಮತ ಸಾಧಿಸಿದ್ದು ಸುಮಾರು 2 ದಶಕಗಳ ನಂತರ ದೆಹಲಿ ಗೆದ್ದುಗೆ ಏರಲು ಬಿಜೆಪಿ ತಯಾರಿ ನಡೆಸಿದೆ,
70 ಸ್ಥಾನಬಲದ ದೆಹಲಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣಾ ಮತಗಳ ಎಣಿಕೆ ಶನಿವಾರ ನಡೆದಿದೆ. ನತಗಳ ಎಣಿಕೆಯುದ್ದಕ್ಕೂ ಮುನ್ನಡೆ ಕಾಯ್ದುಕೊಂಡ ಭಾರತೀಯ ಜನತಾ ಪಕ್ಷ (BJP) 47 ಸ್ಥಾನಗಳನ್ನು ಗೆದ್ದು ಬೀಗಿದೆ.
ಆಡಳಿತಾರೂಢ ಆಮ್ ಆದ್ಮಿ ಪಕ್ಷ (AAP) ಹೀನಾಯ ಸೋಲುಂಡಿದ್ದು, ರಾಜಧಾನಿಯಲ್ಲೇ ಕಾಂಗ್ರೆಸ್ ಪಕ್ಷ ಶೂನ್ಯ ಸಾಧನೆ ಮಾಡಿರುವುದು ದೇಶದ ಇತಿಹಾಸದಲ್ಲೇ ಅಚ್ಚರಿಯ ಫಲಿತಾಂಶವಾಗಿದೆ.
ದೆಹಲಿ ಫಲಿತಾಂಶ ಹೀಗಿದೆ:
ಒಟ್ಟು ಸ್ಥಾನಗಳು : 70,
ಬಹುಮತಕ್ಕೆ ಅಗತ್ಯ ಸ್ಥಾನಗಳು: 36,
ಬಿಜೆಪಿ : 47,,
ಆಮ್ ಆದ್ಮಿ : 23,
ಕಾಂಗ್ರೆಸ್ : 00