ಹುತಾತ್ಮ ಯೋಧರ ಸ್ಮರಣೆಗಾಗಿ ಸೈಕಲ್ ಜಾಥಾ.. 3000 ಕಿ.ಮೀ, 4 ಕೇಂದ್ರಸ್ಥಾನಗಳು, 44 ದಿನಗಳ ಜಾಥಾ..
ಯಲಹಂಕ: ಸ್ವಾತಂತ್ರ್ಯ ಬಂದ 75 ವರ್ಷಗಳ ಅಮೃತ ಮಹೋತ್ಸವ ವರ್ಷಾಚರಣೆ ಹಂಗವಾಗಿ ದೇಶದ ರಕ್ಷಣೆಯಲ್ಲಿ ಹುತಾತ್ಮರಾದ ಯೋಧರ ಸ್ಮರಣೆಗಾಗಿ ಸಿ.ಆರ್.ಪಿ.ಎಫ್ 80 ಯೋಧರ ತಂಡ ಕನ್ಯಾಕುಮಾರಿ ಇಂದ ದೆಹಲಿಯ ರಾಜ್ ಘಾಟ್ ತಲುಪಲಿದೆ.
ಆಗಸ್ಟ್ 22 ರಂದು ಶುರುವಾದ ರ್ಯಾಲಿ ಇಂದು ಯಲಹಂಕದಲ್ಲಿರುವ ಕರ್ನಾಟಕ-ಕೇರಳ ಸೆಕ್ಟರ್ ಕೇಂದ್ರ ಕ್ಯಾಂಪ್ ತಲುಪಿದ್ದು ರ್ಯಾಲಿಯಲ್ಲಿ ಭಾಗವಹಿಸಿದ್ದ ಯೋಧರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.
ಪ್ರತಿ ಕೇಂದ್ರದಿಂದ 20 ಯೋಧರು ಜೊತೆಗೂಡಲಿದ್ದು ಕನ್ಯಾಕುಮಾರಿ ಯಿಂದ ಬೆಂಗಳೂರು ಆಗಮಿಸಿದ ತಂಡ ಇಲ್ಲಿಂದ ಹೊರಟು ಮುಂದೆ ಹೈದರಾಬಾದ್ ತಲುಪಿ ಅಲ್ಲಿಂದ ನಾಗಪುರ್ ಮೂಲಕ ಭೋಪಾಲ್, ನಾಗಪುರ ಮೂಲಕ ದೆಹಲಿ ತಲುಪಲಿದೆ.
ಯಲಹಂಕ ದಲ್ಲಿರುವ ಸಿ.ಆರ್.ಪಿ.ಫ್ – ಕರ್ನಾಟಕ-ಕೇರಳ ಸೆಕ್ಟರ್ ಆಗಮಿಸಿದ ಯೋಧರಿಗೆ ಬಿ.ಡಿ.ಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಜಿಲ್ಲಾಧಿಕಾರಿ ಮಂಜುನಾಥ್, ಐ.ಜಿ.ಪಿ ಗಿರಿ ಪ್ರಸಾದ್, ಡಿ.ಐ.ಜಿ.ಪಿ ಇಮಾಂಶು ಕುಮಾರ್ ಮತ್ತು ರವೀಂದ್ರ ಸೇರಿದಂತೆ ಅಧಿಕಾರಿಗಳ ತಂಡ ನಿನ್ನೆ ಸಂಜೆ ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಂಡು , ಆತಿಥ್ಯ ನೀಡಿ ಗೌರವಿಸಲಾಯಿತು. ಇಂದು ಯಲಹಂಕ ಕ್ಯಾಂಪ್ ನಿಂದ ಹೊರಡಲು ಸಿದ್ದರಾಗಿರುವ ಯೋಧರಿಗೆ ದೇಶಭಕ್ತಿ ಗೀತೆಗಳು, ಸತ್ಕಾರ ಮಾಡುವ ಮೂಲಕ ಹುಮ್ಮಸ್ಸು ಹೆಚ್ಚಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಮಾಡಿ ಗೌರವ ಸೂಚಿಸಿ ಬೀಳ್ಕೊಟ್ಟರು.
ಬಿ.ಡಿ.ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮಾತನಾಡಿ ಸೈನಿಕರು ನಿಜವಾದ ದೇಶ ಸೇವೆ ಮಾಡ್ತಿದ್ದಾರೆ -10:-20 ಡಿಗ್ರಿ ಹಿಮದಿಂದ +50 ಡಿಗ್ರಿ ಬಿಸಿಲಲ್ಲಿ ಬಸವಳಿದು ಸೇವೆ ಸಲ್ಲಿಸುತ್ತಿದ್ದಾರೆ. ನಾವು ರಾಜಕಾರಣಿಗಳು ಬರಿ ದೇಶ, ದೇಶ ಸೇವೆ ಅಂತೆಲ್ಲಾ ಭಾಷಣ ಮಾಡ್ತೇವೆ, ಆದರೆ ನಿಜವಾದ ದೇಶ ಸೇವೆ , ಸಾರ್ಥಕ ಸೇವೆ ಸಲ್ಲಿಸುತ್ತಿರುವುದು ಸೇನೆಯಲ್ಲಿ ಜೀವ ಪಣಕ್ಕಿಟ್ಟಿರುವ ಯೋಧರು ಎಂದು ಭಾವುಕರಾದರು.
ಅದರಲ್ಲಿ ಸಿ.ಆರ್.ಪಿ.ಎಫ್ ಸೇವೆ ಸದ್ಯದ ಪರಿಸ್ಥಿತಿಯಲ್ಲಿ ಅತ್ಯವಶ್ಯಕ ಮತ್ತು ಸ್ಮರಣೀಯ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ, ಚುನಾವಣೆ, ದೊಂಬಿ, ಗಲಭೆ, ಅತಿವೃಷ್ಠಿ, ಅನಾವೃಷ್ಠಿ ಸೇರಿದಂತೆ ದೇಶದ ವಿ.ಐ.ಪಿ ಸೆಕ್ಯೂರಿಟಿ ಮಾಡುವಲ್ಲಿ ಯಶಸ್ವಿಯಾಗಿದೆ. ಸೈನ್ಯ ಎಂದರೆ ಎಲ್ಲರಿಗೂ ತಿಳಿಸಿದೆ, ಆದರೆ ಸಿ.ಆರ್.ಪಿ.ಎಫ್ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲವಾದರೂ ಸಿ.ಆರ್.ಪಿ.ಎಫ್ ಸೇವೆ ಅತ್ಯಮೂಲ್ಯ ಎಂದು ಶ್ಲಾಘಿಸಿದರು.