ಸ್ಯಾಂಡಲ್‌ವುಡ್ ಛಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಮಳೆಯಾಗಿದೆ. ಅಭಿಮಾನಿಗಳಂತೂ ಜಾತ್ರೆಯ ರೂಪದಲ್ಲಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದರು. ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ಕ್ಷೇತ್ರದ ದಿಗ್ಗಜರು ಸೇರಿದಂತೆ ಗಣ್ಯಾತಿಗಣ್ಯರು ದರ್ಶನ್ ಅವರನ್ನು ಭೇಟಿಯಾಗಿ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಇದೇ ವೇಳೆ, ‘ನೀವಿಡುವ ಎಲ್ಲ ಹೆಜ್ಜೆಗಳಿಗೆ ಗೆಲುವಾಗಲಿ’ ಎಂದು ನಟಿ ಸುಮಲತಾ ಅಂಬರೀಶ್ ಅವರು ದರ್ಶನ್‌ಗೆ ಹರಸಿರುವ ಸಾಲುಗಳು ಗಮನಸೆಳೆದಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಗೆಲುವಿನಲ್ಲಿ ನಟ ದರ್ಶನ್ ಪಾತ್ರ ಮಹತ್ವದ್ದು. ಹಾಗಾಗಿಯೇ ಸುಮಲತಾ ಅವರು ದಾಸಗಿಗಾಗಿ ಮಮತೆಯ ಸಾಲುಗಳನ್ನು ಹರಿಯಬಿಟ್ಟಿದ್ದಾರೆ.
‘ಪ್ರತಿಭೆಗೆ ತಕ್ಕಂತೆ ಅಪಾರ ಪರಿಶ್ರಮದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಚಿತ್ರರಂಗದಲ್ಲಿ ಧ್ರುವ ನಕ್ಷತ್ರದಂತೆ ಪ್ರಜ್ವಲಿಸುತ್ತಿರುವ ಪ್ರೀತಿಯ ದರ್ಶನ್’ಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು. ಆ ಭಗವಂತ ದೀರ್ಘ ಆಯಸ್ಸು ,ಉತ್ತಮ ಆರೋಗ್ಯ ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸುವೆ. ನೀವಿಡುವ ಎಲ್ಲ ಹೆಜ್ಜೆಗಳಿಗೆ ಗೆಲುವಾಗಲಿ’ ಎಂದು ಅವರು ಟ್ವೀಟ್ ಮಾಡಿ ಹರಸಿದ್ದಾರೆ.
ಪ್ರತಿಭೆಗೆ ತಕ್ಕಂತೆ ಅಪಾರ ಪರಿಶ್ರಮದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಚಿತ್ರರಂಗದಲ್ಲಿ ಧ್ರುವ ನಕ್ಷತ್ರದಂತೆ ಪ್ರಜ್ವಲಿಸುತ್ತಿರುವ ಪ್ರೀತಿಯ ದರ್ಶನ್'ಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು.ಆ ಭಗವಂತ ದೀರ್ಘ ಆಯಸ್ಸು ,ಉತ್ತಮ ಆರೋಗ್ಯ ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸುವೆ.ನೀವಿಡುವ ಎಲ್ಲ ಹೆಜ್ಜೆಗಳಿಗೆ ಗೆಲುವಾಗಲಿ❤️ @dasadarshan pic.twitter.com/VZqCvalGhf
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) February 16, 2023