(Surabhi Bhat)
ಬೆಂಗಳೂರು: ಸುಮಾರು ನಲವತ್ತು ಪ್ರತಿಶತ ಜನರಿಗೆ ನಿದ್ರಾಹೀನತೆ, ಮೂವತ್ತ ನಾಲ್ಕು ಪ್ರತಿಶತ ಜನರಲ್ಲಿ ಹೆಚ್ಚಿದ ದುಗುಡತೆ, ಇನ್ನು 34 ಪ್ರತಿಶತ ಜನರಲ್ಲಿ ಹೆಚ್ಚಿದ ಮಾನಸಿಕ ಸಮಸ್ಯೆಗಳು.. ಇದು ಇಂಡಿಯನ್ ಜರ್ನಲ್ ಆಫ್ ಸೈಕಿಯಾಟ್ರಿಯ ಇತ್ತೀಚಿನ ಸಂಶೋಧನೆಯಲ್ಲಿ ಕೋವಿಡ್ ಬಳಿಕ ಬೆಳಕಿಗೆ ಸಮಸ್ಯೆಗಳು. ಅಂದರೆ, ಜೀವ ಹಾನಿ, ಉದ್ಯೋಗ ನಷ್ಟದ ಜೊತೆಗೆ, ಕೋವಿಡ್ 19 ಜನ ಸಾಮಾನ್ಯರ ಮಾನಸಿಕ ಸ್ಥಿತಿಗತಿಗಳ ಮೇಲೂ ಅತಿ ಹೆಚ್ಚಿನ ದುಷ್ಪರಿಣಾಮ ಬೀರಿರುವುದು ಈಗ ಅಧ್ಯಯನಗಳಿಂದ ಬೆಳಕಿಗೆ ಬಂದಿದೆ. ಈ ಸಂಗತಿಗಳು ಇತರ ಅಧ್ಯಯನಗಳಲ್ಲೂ ಶ್ರುತ ಪಟ್ಟಿದೆ. ಒಟ್ಟಾರೆ ನಮ್ಮ ಸಮಾಜದ ಶೇಕಡಾ 50 ಪ್ರತಿಶತಕ್ಕೂ ಹೆಚ್ಚು ಮಂದಿ ಒಂದಲ್ಲ ಒಂದು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಗಂಭೀರ ಸಂಗತಿ ಈಗ ಬೆಳಕಿಗೆ ಬಂದಿದೆ. ಇಂತಹ ಸಂದರ್ಭಗಳಲ್ಲಿ ಜನರಿಗೆ ಸಾಂತ್ವನ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದು ತಜ್ಞ ಮನೋ ವೈದ್ಯರು ಹಾಗು ಮಾನಸಿಕ ಅರೋಗ್ಯ ಸಲಹೆಗಾರರು.
ಖ್ಯಾತ ಮನೋಶಾಸ್ತ್ರಜ್ಞೆ , ಕೌಶಲ್ಯ ತರಭೇತುಗಾರ್ತಿ ರೂಪ ರಾವ್ ಪ್ರಕಾರ, ಕೋವಿಡ್ 19 ಸಾಂಕ್ರಾಮಿಕ ರೋಗದ ಜೊತೆಗೆ, ಹಲವು ಮಾನಸಿಕ ಸಮಸ್ಯೆಗಳು ನಮ್ಮ ಸಮುದಾಯದಲ್ಲಿ ಉಲ್ಬಣಗೊಂಡಿವೆ. ಕಳೆದ ಒಂದೂವರೆ ವರ್ಷಗಳಲ್ಲಿ 2,400 ಕ್ಕೂ ಹೆಚ್ಚು ಮಂದಿಗೆ ಕೌನ್ಸೆಲಿಂಗ್ ನೀಡಿ ಅವರಿಗೆ ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯನ್ನು ಅರ್ಥೈಸಿದ್ದಾರೆ. ಅದರಲ್ಲಿ ಬಹುತೇಕರು ಯುವಕರು. ಉದ್ಯೋಗ ಕಳೆದುಕೊಳ್ಳುವ ಭೀತಿ, ಕುಟುಂಬದಲ್ಲಿ ಸಾವುಗಳು, ಇನ್ನಿತರ ಕೋವಿಡ್ ಸಮಸ್ಯೆಗಳಿಂದ ಬಳಲುತ್ತಿದ್ದವರಿಗೆ, ಇವರು ಕೌನ್ಸೆಲಿಂಗ್ ನಡೆಸಿ, ಮತ್ತೆ ಜೀವನೋತ್ಸಾಹ ಚಿಗುರುವಂತೆ ಮಾಡಿದ್ದಾರೆ. ರೂಪ ರಾವ್ ಪ್ರಕಾರ, ಒತ್ತಡ ನಿರ್ವಹಣೆ ಹಾಗು ಮಾನಸಿಕ ಅರೋಗ್ಯ ಕಾಪಾಡುಕೊಳ್ಳುವಿಕೆ ಎಲ್ಲರ ಎದುರಿಗಿರುವ ಅತಿ ದೊಡ್ಡ ಸವಾಲು. ಅದರಲ್ಲೂ ಮುಖ್ಯವಾಗಿ ಮಿಲಿನಿಯಲ್ಸ್ ಯುವಕ-ಯುವತಿಯರು ಈ ಸಮಸ್ಯೆಗಳಿಂದ ಹೆಚ್ಚು ಬಳಲುತ್ತಿದ್ದರೆ ಎನ್ನುತ್ತಾರೆ ರೂಪ ರಾವ್.
“ಪ್ರತಿಯೊಬ್ಬರ ಸಮಸ್ಯೆಯು ಅವರಿಗಷ್ಟೇ ಸೀಮಿತವಾದ ಅನನ್ಯ ಸಮಸ್ಯೆಗಳು. ಅವುಗಳನ್ನು ಪರಿಹರಿಸಲು ವಿಭಿನ್ನ ಬಗೆಯ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕಿದೆ,” ಎನ್ನುತ್ತಾರೆ ರೂಪ ರಾವ್.
“ದುಗುಡತೆ, ಆತಂಕ, ಭಯ, ಹೀಗೆ, ನಾನಾ ಸಮಸ್ಯೆಗಳು ಈಗ ಹೆಚ್ಚುತ್ತಿವೆ. ಇವುಗಳೆಲ್ಲ, ವ್ಯಕ್ತಿಗಳ ದೈಹಿಕ ಆರೋಗ್ಯದ ಮೇಲೂ ತುಂಬಾ ದುಷ್ಪರಿಣಾಮ ಬೀರುತ್ತಿವೆ. ನಿದ್ರಾ ಹೀನತೆ, ರಕ್ತದೊತ್ತಡ, ಹೀಗೆ ನಾನಾ ಸಮಸ್ಯೆಗಳಿಗೆ ಮೂಲ ಕಾರಣ ಮಾನಸಿಕ ಸಮಸ್ಯೆಗಳು,” ಎನ್ನುತ್ತಾರೆ ರೂಪ.
ಧನಾತ್ಮಕ ಚಿಕಿತ್ಸೆ: ರೂಪ ರಾವ್ ಪ್ರಕಾರ, ಮಿಲೇನಿಯಲ್ಸ್ ಯುವಕ-ಯುವತಿಯರು ಎದುರಿಸುವ ಮಾನಸಿಕ ಸಮಸ್ಯೆಗಳೇ ಒಂದಾದರೆ, ಮಧ್ಯ ವಯಸ್ಕರು, ಮಕ್ಕಳು ಹೀಗೆ, ಉಳಿದ ವಯೋಮಾನದವರು ಎದುರಿಸುವ ಸಮಸ್ಯೆ ಇನ್ನೊಂದು ತೆರನಾದದ್ದು. “ಆರ್ಥಿಕ ಸ್ಥಿತಿಗತಿಗಳಿಗೂ ಮಾನಸಿಕ ರೋಗಗಳಿಗೂ ಸಂಬಂಧವಿಲ್ಲ. ಒಟ್ಟಾರೆ ಈ ಕೋವಿಡ್ ೧೯ ಎಲ್ಲ ಮನ-ಮನೆಗಳಲ್ಲೂ ಸಮಸ್ಯೆ ತಂದೊಡ್ಡಿದೆ. ಅವುಗಳಿಗೆ ತಕ್ಷಣದ ಪರಿಹಾರ ಅಗತ್ಯ,” ಎನ್ನುತ್ತಾರೆ ಅವರು.
ಸಣ್ಣ ಸಣ್ಣ ಸಂಗತಿಗಳ ಮೂಲಕ ಸಂಬಂಧ, ಹೀಗೆ ನಾನಾ ಉಪಕ್ರಮಗಳ ಮೂಲಕ ಅವರು ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.
ಮಕ್ಕಳ ಅರೋಗ್ಯ, ಆರಂಭಿಕ ಶಿಕ್ಷಣ ಹಾಗು ಕೌಶಲ್ಯ ತರಭೇತಿಯಲ್ಲಿ ಪ್ರಮಾಣೀಕೃತ ಸಲಹೆಗಾರರಾಗಿರುವ ರೂಪ ರಾವ್ ಪ್ರಕಾರ ಕೋವಿಡ್ 19 ದುರಿತ ಕಾಲದಲ್ಲಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯಕ್ಕೂ ಒಟ್ಟು ನೀಡಿ, ನಮ್ಮ ಸಮುದಾಯಗಳನ್ನು ಸಮಸ್ಯೆಗಳಿಂದ ಮುಕ್ತಗೊಳಿಸಬೇಕಿದೆ.