ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಟಫ್ ರೂಲ್ಸ್ ಪ್ರಕಟಿಸಿರುವ ಸರ್ಕಾರದ ವಿರುದ್ದ ಸಿನಿಮಾ ರಂಗದ ಗಣ್ಯರು ಆಕ್ರೋಶ ಹೊರಹಾಕಿದ್ದಾರೆ. ಚಿತ್ರೋದ್ಯಮದ ಒತ್ತಡಕ್ಕೆ ಮಣಿದ ಸರ್ಕಾರ ನಿಯಮಗಳನ್ನು ಸಡಿಲಗೊಳಿಸಿದೆ.
ಶುಕ್ರವಾರವಷ್ಟೇ ಕಠಿಣ ನಿಯಮಾವಳಿಗಳನ್ನು ಪ್ರಕಟಿಸಿದ ಸರ್ಕಾರ ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಿತ್ತು. ಈ ನಿಯಮವನ್ನು ಸಡಿಲಗೊಳಿಸಬೇಕೆಂಬ ಫಿಲಂ ಚೇಂಬರ್ ಪ್ರಮುಖರ ಒತ್ತಾಯಕ್ಕೆ ಮಣಿದ ಸರ್ಕಾರ ಈ ತಿಂಗಳ 7ರವರೆಗೆ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ಗೆ ಅವಕಾಶ ಕಲ್ಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಚಿತ್ರರಂಗದ ಹಾಗೂ ವಾಣಿಜ್ಯ ಮಂಡಳಿಯ ಮನವಿ ಮೇರೆಗೆ ಚಿತ್ರಮಂದಿರಗಳು ಶೇ.50% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವ ನಿಯಮವನ್ನು ಬುಧವಾರ, ದಿನಾಂಕ 7 ಏಪ್ರಿಲ್ ನಿಂದ ಜಾರಿಗೆ ಬರುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರರಂಗದ ಹಾಗೂ ವಾಣಿಜ್ಯ ಮಂಡಳಿಯ ಮನವಿ ಮೇರೆಗೆ ಚಿತ್ರಮಂದಿರಗಳು ಶೇ.50% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವ ನಿಯಮವನ್ನು ಬುಧವಾರ, ದಿನಾಂಕ 7 ಏಪ್ರಿಲ್ ನಿಂದ ಜಾರಿಗೆ ಬರುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. pic.twitter.com/6L3MihbRv2
— Dr Sudhakar K (Modi ka Parivar) (@DrSudhakar_) April 3, 2021