ದೆಹಲಿ: ಕೊರೋನಾ ವೈರಾಣು ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿದೆ. ವಿವಿಧ ರಾಜ್ಯಗಳಲ್ಲಿ ಮಂಗಳವಾರ ಸಿಕ್ಕಿದ ಅಂಕಿ ಅಂಶಗಳ ಪ್ರಕಾರ ಸೋಮವಾರ ಒಂದೇ ದಿನ 3,29,942 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಸೋಕಿನಲ್ಲಾಗುತ್ತಿರುವ ಹೆಚ್ಚಳದ ಈ ಪ್ರಮಾಣವು ಆತಂಕ ಸೃಷ್ಟಿಸಿದೆ. ಇದೀಗ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,29,92,517ಕ್ಕೆ ಏರಿಕೆಯಾಗಿದೆ.
ಇದೇ ವೇಳೆ, ಒಂದೇ ದಿನ 3876 ಮಂದಿ ಸಾವನ್ನಪ್ಪಿರುವ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಅಂಕಿ ಅಂಶ ಪೇರಿಸಿದೆ. ಇಂದು ಬೆಳಿಗ್ಗೆ ಬಹಿರಂಗವಾದ ವರದಿ ಪ್ರಕಾರ ಈವರೆಗೆ ಮಹಾಮಾರಿ ಕೊರೋನಾಗೆ 2,49,992 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.