ಬೆಂಗಳೂರು: ಗಾಂಧಿನಗರ ವಿಧಾನಸಭೆ ಕ್ಷೇತ್ರ ಶೇಷಾದ್ರಿಪುರದ ರಾಜೀವ್ ಗಾಂಧಿ ಪ್ರತಿಮೆ ಬಳಿ ಏಕತಾ ಸೈಕಲ್ ಜಾಥಾಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಬೆಳಗ್ಗೆ ಚಾಲನೆ ನೀಡಿದರು. ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಕೆಪಿಸಿಸಿ ವಕ್ತಾರೆ ಕವಿತಾ ರೆಡ್ಡಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲಾವಣ್ಯ ಮೊದಲಾದ ನಾಯಕರು ಹಾಜರಿದ್ದರು.
ಆಗಸ್ಟ್ 20 ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನ. ಅದರ ಅಂಗವಾಗಿ ಕವಿತಾ ರೆಡ್ಡಿ ಅವರ ನೇತೃತ್ವದಲ್ಲಿ ಇಂದು ಹೊರಟಿರುವ ಏಕತಾ ಸೈಕಲ್ ಜಾಥಾವು 300 ಕಿ.ಮೀ. ಕ್ರಮಿಸಿ, ರಾಜೀವ್ ಗಾಂಧಿ ಅವರು ಹುತಾತ್ಮರಾದ ಸ್ಥಳ ತಮಿಳುನಾಡಿನ ಶ್ರೀ ಪೆರಂಬದೂರನ್ನು ಆಗಸ್ಟ್ 20 ರಂದು ತಲುಪಲಿದೆ.