ಕೋಸ್ಟಲ್‌ವುಡ್‌ನಲ್ಲಿ DK v/s VK ಹವಾ.. ತುಳು ಸಿನಿಲೋಕದಲ್ಲೀಗ ಇದರದ್ದೇ ಕುತೂಹಲ..
ತುಳುವರು ಕಾತುರದಿಂದ ಕಾಯುತ್ತಿರುವ ಬಹು ನಿರೀಕ್ಷೆಯ ಬೋಜರಾಜ್ ಎಂ.ಬಿ.ಬಿ.ಎಸ್ ಚಿತ್ರ ಹೊಸತೊಂದು ಹವಾ ಕ್ರಿಯೇಟ್ ಮಾಡಿದೆ. ತುಳು ಚಿತ್ರರಂಗ ಮತ್ತು ರಂಗಭೂಮಿಯ ಎರಡು ಕಣ್ಣುಗಳಂತಿರುವ ದೇವದಾಸ್ ಕಾಪಿಕಾಡ್ ಮತ್ತು ವಿಜಯಕುಮಾರ್ ಕೊಡಿಯಾಲ್ ಬೈಲ್ ಎಂಬಿಬ್ಬರು ದಿಗ್ಗಜರುಗಳು ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಬಣ್ಣ ಹಚ್ಚಿಕೊಂಡಿರುವುದು ತುಳುನಾದಲ್ಲಿ ಸಾಕಷ್ಟು ಸುದ್ದಿಯಾಗಿದೆೆ. ಅದರಲ್ಲೂ ಇತ್ತೀಚೆಗೆ ಈ ಚಿತ್ರದ ಈ ಇಬ್ಬರು ಮಹಾನ್ ಕಲಾವಿದರ ಇಂಟ್ರೊ ಸೀನ್ ಟ್ರಿಜರ್ arc Kannada musiq ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ.
ಅದರಲ್ಲೂ ಇನ್ನಷ್ಟು ವಿಶೇಷಗಳಿವೆ. ಇಬ್ಬರ ಲೂಕ್‌ಗೂ ತುಳು ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಾಪಿಕಾಡ್ ಮತ್ತು ಕೊಡಿಯಾಲ್ ಬೈಲ್ ನಡುವಿನ ಪೈಪೋಟಿ ಸಂಭಾಷಣೆಯ ತುಣುಕುಗಳು ಹರಿದಾಡುತ್ತಿದ್ದು ಅಭಿಮಾನಿಗಳ ಕೂತೂಹಲವನ್ನು ಹೆಚ್ಚಿಸಿದೆ.