ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಇದೀಗ ರೋಚಕ ಘಟ್ಟ ಸಮೀಪಿಸುತ್ತಿದೆ. ರಾಜಕೀಯ ಪ್ರತಿಷ್ಠೆಯ ಅಖಾಡದಲ್ಲಿ ಈ ಎಲ್ಲಾ ಪಕ್ಷಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿರುವಾಗಲೇ ಸಮೀಕ್ಷಾ ಫಲಿತಾಂಶಗಳೂ ಕುತೂಹಲಕಾರಿ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿವೆ.
ಈ ನಡುವೆ, ಎಬಿಪಿ-ಸಿವೋಟರ್ ಸಮೀಕ್ಷೆ ಈ ಲೆಕ್ಕಾಚಾರಗಳಿಗೆ ರೋಚಜತೆ ತುಂಬಿದೆ. ಸಿ-ವೋಟರ್ ಮತ್ತು ಎಬಿಪಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಗುವ ಸಾಧ್ಯತೆಗಳು ಗೋಚರಿಸಿವೆ.
ರಾಜ್ಯದ 224 ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆದಿದ್ದು 17,772 ಅಭಿಪ್ರಾಯಗಳನ್ನಾಧರಿಸಿ ಈ ಚುನಾವಣಾ ಪೂರ್ವ ಸಮೀಕ್ಷೆ ನಡೆಸಲಾಗಿದೆ. ಅದರಂತೆ ಕಾಂಗ್ರೆಸ್ ಪಕ್ಷವು 107ರಿಂದ 119 ಸ್ಥಾನಗಳನ್ನು ಗೆಲ್ಲಲು ಪರಿಸ್ಥಿತಿ ಪೂರಕವಾಗಿದ್ದರೆ, ಬಿಜೆಪಿಗೆ 74 ರಿಂದ 86 ಗೆಲ್ಲಲು ಅನುಕೂಲಕರ ಸ್ಥಿತಿ ಇದೆ. ಜೆಡಿಎಸ್ 23 ರಿಂದ 35 ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಇತರರೂ 5 ಕ್ಷೇತ್ರಗಳಲ್ಲಿ ಪ್ರಭಾವ ತೋರುತ್ತಿರುವುದು ಗೊತ್ತಾಗುತ್ತಿದೆ. ಆದರೆ ಕರಾವಳಿಯಲ್ಲಿ ಪರಿಸ್ಥಿತಿ ಬಿಜೆಪಿಗೆ ವರದಾನವಾಗಿದೆ ಎಂಬುದು ಗೊತ್ತಾಗಿದೆ.
ಕರಾವಳಿಯಲ್ಲಿ ಪರಿಸ್ಥಿತಿ ಹೀಗಿದೆ:
ಬಿಜೆಪಿ – 15 ರಿಂದ 19
ಕಾಂಗ್ರೆಸ್ – 3 ರಿಂದ 5
ಇತರರು – 0-1
ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಮೇಲುಗೈ ಸಾಧಿಸುವ ಮುನ್ಸೂಚನೆ ವ್ಯಕ್ತವಾಗಿದೆ. ಈ ಸಮೀಕ್ಷೆ ಪ್ರಕಾರ ಕರಾವಳಿ ಜಿಲ್ಕೆಗಳ 21 ಕ್ಷೇತ್ರಗಳ ಪೈಕಿ ಬಹುತೇಕ ಕಡೆ ಬಿಜೆಪಿ ಉಳಿಸಿಕೊಳ್ಳುವ ಸ್ಥಿತಿಯಲ್ಲಿದೆ. ಈ ಮತದಾನ ಪೂರ್ವ ಸಮೀಕ್ಷೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿಗೆ 15 ರಿಂದ 19 ಕ್ಷೇತ್ರಗಳಲ್ಲಿ ಅನುಕೂಲಕರ ಪರಿಸ್ಥಿತಿ ಇದ್ದರೆ, ಬಿಹೆಪಿ ಭದ್ರಕೋಟೆಗೆ ಲಗ್ಗೆ ಹಾಕಲು ಪ್ರಯತ್ನಿಸಿರುವ ಕಾಂಗ್ರೆಸ್ ಪಕ್ಷಕ್ಕೆ 3 ರಿಂದ 5 ಕ್ಷೇತ್ರಗಳಲ್ಲಿ ಹಿತಕರವಾದ ಸ್ಥಿತಿ ಇದೆ. ಪಕ್ಷೇತರರು ಕರಾವಳಿಯ ಒಂದು ಕ್ಷೇತ್ರವನ್ನು ಗೆದ್ದರೂ ಅಚ್ಚರಿಯಿಲ್ಲ ಎಂಬ ಅಭಿಮತ ಗೊತ್ತಾಗಿದೆ.
ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪರ ಅಲೆ ಇದ್ದಂತಿದೆ. ಈ ಸಮೀಕ್ಷೆಯಲ್ಲಿ ಮಧ್ಯ ಕರ್ನಾಟಕ ಭಾಗದ 35 ಕ್ಷೇತ್ರಗಳಲ್ಲಿ ಹೆಚ್ಚಿನ ಕಡೆ ಕೈ ಅಭ್ಯರ್ಥಿಗಳ ಗೆಲುವಿಗೆ ಪರಿಸ್ಥಿತಿ ಪೂರಕವಾಗಿದೆ.
ಮಧ್ಯ ಕರ್ನಾಟಕ ಭಾಗದ ಸದ್ಯದ ಸ್ಥಿತಿ ಹೀಗಿದೆ:
ಕಾಂಗ್ರೆಸ್ : 19 ರಿಂದ 23
ಬಿಜೆಪಿ : 12 ರಿಂದ 16
ಜೆಡಿಎಸ್ : ಗರಿಷ್ಠ 01
ಇತರರು : ಗರಿಷ್ಠ 01
ಇದೇ ವೇಳೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಆಡಳಿತಾರೂಢ ಬಿಜೆಪಿಗೆ ಕಹಿ ಪರಿಸ್ಥಿತಿ ಇದೆ. ಬೆಂಗಳೂರು ಮತ್ತು ಸುತ್ತಮುತ್ತಲ 32 ಕ್ಷೇತ್ರಗಳಲ್ಲಿ ಹೆಚ್ಚಿನ ಕಡೆ ಕಾಂಗ್ರೆಸ್ ಪಕ್ಷಕ್ಕೆ ಪೂರಕ ಪರಿಸ್ಥಿತಿ ಇದೆ.
ಗ್ರೇಟರ್ ಬೆಂಗಳೂರಿನ ಸದ್ಯದ ಸ್ಥಿತಿ:
ಕಾಂಗ್ರೆಸ್ : 15 ರಿಂದ 19
ಬಿಜೆಪಿ : ,11 ರಿಂದ 15
ಜೆಡಿಎಸ್ : 02 ರಿಂದ 04
ಇತರರು : ಗರಿಷ್ಠ 01
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯನ್ನೊಳಗೊಂಡ ಹೈದರಾಬಾದ್ ಕರ್ನಾಟಕ ಭಾಗದಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಹೈ-ಕ ಭಾಗದ ಜಿಲ್ಲೆಗಳ ಸುಮಾರು 31 ಜಿಲ್ಲೆಗಳ ಮತದಾರರ ಅಭಿಮತ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾಗಿದೆ.
ಹೈ-ಕ ಭಾಗದದಲ್ಲಿನ ಸಮೀಕ್ಷೆ ಹೀಗೆನ್ನುತ್ತಿದೆ:
ಕಾಂಗ್ರೆಸ್ : 19 ರಿಂದ 23
ಬಿಜೆಪಿ : ,08 ರಿಂದ 12
ಜೆಡಿಎಸ್ : ಗರಿಷ್ಟ 01
ಇತರರು : ಗರಿಷ್ಠ 01
ಮುಂಬೈ ಕರ್ನಾಟಕ ಭಾಗದಲ್ಲೂ ಹೆಚ್ಚಿನ ಕಡೆ ಕಾಂಗ್ರೆಸ್ ಪರವಾಗಿ ಒಲವು ಇರುವುದು ಕಂಡುಬಂದಿದೆ. ಈ ಭಾಗದ ಜಿಲ್ಲೆಗಳ ಸುಮಾರು 50 ಕ್ಷೇತ್ರಗಳ ಪೈಕಿ ಸುಮಾರು 30 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾದ ಅಲೆ ಇರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.
ಮುಂಬೈ ಕರ್ನಾಟಕ ಭಾಗದಲ್ಲಿ ಮತದಾರರ ಅಭಿಮತ ಹೀಗಿದೆ:
ಕಾಂಗ್ರೆಸ್ : 26 ರಿಂದ 30
ಬಿಜೆಪಿ : 20 ರಿಂದ 24
ಜೆಡಿಎಸ್ : ಗರಿಷ್ಠ 01
ಇತರರು : ಗರಿಷ್ಠ 01
ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾ ದಳ ಪಕ್ಷವು ಈ ಬಾರಿಯೂ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಹಿಡಿತ ಸಾಧಿಸುವ ಸಾಶ್ಯತೆಗಳಿವೆ. ಈ ಮತದಾನ ಪೂರ್ವ ಸಮೀಕ್ಷೆಯಲ್ಲಿ ಹಳೆ ಮೈಸೂರು ಭಾಗದ ಜಿಲ್ಲೆಗಳ ಸುಮಾರು 55 ಕ್ಷೇತ್ರಗಳ ಪೈಕಿ ಸುಮಾರು 29 ಕಡೆ ಜೆಡಿಎಸ್ ಪರ ಒಲವು ವ್ಯಕ್ತವಾದಂತಿದೆ.