ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬೆಂಗಳೂರಿನಲ್ಲಿರುವ ನಿವಾಸ ಇಂದು ಕೋಲಾಹಲಕಾರಿ ಸನ್ನಿವೇಶಕ್ಕೆ ಕಾರಣವಾಯಿತು. ಸಿಎಂ ಮನೆ ಮುಂದೆ ಕಾರ್ಯಕ್ರಮ ನಿರೂಪಕಿ ಗಿರೀಜಾ ಎಂಬವರು ಏಕಾಂಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಮುಜುಗರಕ್ಕೀಡು ಮಾಡಿದರು.
ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಮಹಿಳಾ ನಿರೂಪಕಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಕರು ಹಾಗೂ ಗಾಯಕರ ಬದಲಾವಣೆಗೆ ಒತ್ತಾಯಿಸಿದರು. ಹೊಸಬರಿಗೆ ಅವಕಾಶ ನೀಡಬೇಕೆಂಬುದು ಅವರ ಒತ್ತಾಯ.
ಹಳೆ ನಿರೂಪಕರು ಹಾಗೂ ಗಾಯಕರಿಗೆ ಮಣೆ ಹಾಕಲಾಗುತ್ತಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಕೇವಲ ಇಬ್ಬರೇ ನಿರೂಪಿಸುತ್ತಿದ್ದಾರೆ ಎಂಬುದು ಈ ಮಹಿಳೆಯ ಆರೋಪ.
ನೇರವಾಗಿ ಶಂಕರ್ ಪ್ರಕಾಶ್, ಹಾಗೂ ಅಪರ್ಣಾ ವಿರುದ್ದ ಅಸಮಾಧಾನ ಹೊರ ಹಾಕಿದ ಈ ಮಹಿಳೆ , ಸುಮಾರು ಹತ್ತು ವರ್ಷಗಳಿಂದ ಇವರೇ ನಿರೂಪಕರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸರ್ಕಾರ ಬದಲಾಗುತ್ತೆ, ಸಚಿವರು ಬದಲಾಗ್ತಾರೆ ಆದ್ರೆ ಸರ್ಕಾರಿ ಕಾರ್ಯಕ್ರಮದ ನಿರೂಪಕರು ಬದಲಾಗಲ್ಲ ಎಂದು ಈ ನಿರೂಪಕಿ ಅಸಮಾಧಾನ ಹೊರಹಾಕಿದರು.
ಪ್ರತಿಭಟನೆ ನಡೆಸಿದ ಮಹಿಳೆಯನ್ನು ಮನವೊಲಿಸಿ ಸಿಎಂ ಮನೆ ಬಿಯಿಂದ ಕರೆದೊಯ್ಯಲು ಪೊಲೀಸರು ಹರಸಾಹಸಪಟ್ಟರು.