ಹಿರೇನಾಗವಲ್ಲಿ ಕಲ್ಲು ಗಣಿಯ ಜಿಲೆಟಿನ್ ಸ್ಪೋಟ ಪ್ರಕರಣ.. ಖಾಕಿ ಭರ್ಜರಿ ಬೇಟೆ.. ನಾಲ್ವರನ್ನು ಖೆಡ್ಡಕ್ಕೆ ಕೆಡವಿರುವ ಪೊಲೀಸರಿಂದ ಇದೀಗ ಬಿಜೆಪಿ ನಾಯಕನಿಗೆ ಬೇಟೆ..
ಚಿಕ್ಕಬಳ್ಳಾಪುರ: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಹಿರೇನಾಗವಲ್ಲಿ ಕಲ್ಲು ಗಣಿಯ ಜಿಲೆಟಿನ್ ಸ್ಪೋಟ ಪ್ರಕರಣದ ಬೆನ್ಬತ್ತಿರುವ ಪೊಲೀಸರು ರಹಸ್ಯ ಬೇಧಿಸಲೂ ಹರಸಾಹಸಪಡುತ್ತಿದ್ದಾರೆ. ಅದಾಗಲೇ ಸ್ಫೋಟದ ಹಿಂದಿನವರೂವಾರಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತನಿಖೆಯ ಅಖಾಡಕ್ಕೆ ಧುಮುಕಿರುವ ಪೊಲೀಸರು, 6 ಜನರ ಸಾವಿಗೆ ಕಾರಣವಾದ ಈ ಸ್ಫೋಟ ಪ್ರಕರಣದ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಗೋರಂಟ್ಲ ದಲ್ಲಿ ತಲೆ ಮೆರೆಸಿ ಕೊಂಡಿದ್ದರೆನ್ಬಲಾದ
ಪ್ರಕರಣದ ಆರೋಪಿ, ಗಣಿ ಮಾಲಿಕ ರಾಘವೇಂದ್ರ ರೆಡ್ಡಿ, ವೆಂಕಟಶಿವಾರೆಡ್ಡಿಯನ್ನು ವಶಕ್ಕೆ ಇರುವ ಪೊಲೀಸರು, ಇತರ ಆರೋಪಿಗಳಾದ ಪ್ರವೀಣ್, ಡ್ರೈವರ್ ರಿಯಾಜ್ ಮತ್ತು ಮಧುಸೂದನ್ ರೆಡ್ಡಿ ಎಂಬವರನ್ನೂ ಖೆಡ್ಡಕ್ಕೆ ಕೆಡವುದರಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಕಾರ್ಯಕರ್ತನಿಗಾಗಿ ಬೇಟೆ
ಈ ನಡುವೆ, ಗಣಿ ಸ್ಫೋಟದ ಹಿಂದೆ ಕಾಣದ ಕೈಗಳ ಕೈವಾಡವಿರಬಹುದೇ ಎಂಬ ಬಗ್ಗೆ ತನಿಖೆ ಸಾಗಿದ್ದು, ತಲರಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗೆ ಬಿಜೆಪಿ ಮುಖಂಡರೊಂದಿಗೆ ನಂಟಿರುವ ಸಂಗತಿಯನ್ನೂ ಪೊಲೀಸರು ಕಲೆಹಾಕಿದ್ದಾರೆ. ಈ ಮಾಹಿತಿ ಆಧರಿಸಿ ರೈಲ್ವೆ ಸಮಿತಿ ಸದಸ್ಯರೂ ಆಗಿರುವ ಬಿಜೆಪಿ ಮುಖಂಡ ಗುಡಿಬಂಡೆ ನಾಗರಾಜ್’ಗಾಗಿ ತಂಡ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.