ಹಾಸನ: ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಉರುಳುಗೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಉದ್ಘಾಟನೆ ನೆರವೇರಿಸಿದ ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಮಾತನಾಡಿ, ಈಗೀಗ ಗ್ರಾಮೀಣ ಭಾಗದ ಜನರಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಒಗ್ಗಟ್ಟು ಕಡಿಮೆಯಾಗುತ್ತಿದೆ ಎಂದರು. 1 ಗುಂಪು ಉತ್ತರ ಮತ್ತೊಂದು ಗುಂಪು ದಕ್ಷಿಣ ಇನ್ನೊಂದು ಗುಂಪು ಪಶ್ಚಿಮ ಮಗದೊಂದು ಗುಂಪು ಪೂರ್ವ ಹೀಗೆ ವಾಯುವ್ಯ ಈಶಾನ್ಯ ಆಗ್ನೇಯ ಈ ರೀತಿ ಈ ರೀತಿ ಒಂದೊಂದು ಗುಂಪುಗಳಾಗಿ ಅಭಿವದ್ಧಿ ಕಾರ್ಯಗಳಿಗೆ ಅಡ್ಡಿ ಆಗುತ್ತಿರುವುದು ಸರಿಯಲ್ಲ ಎಲ್ಲರೂ ಒಂದಾಗಿ ಬಾಳಿ ಹಳ್ಳಿಗಳಲ್ಲಿ ಸಮೃದ್ಧಿಯಾಗಿ ಬದುಕಿ ಎಂದುಕಿವಿಮಾತು ಹೇಳಿದರು.
ನನ್ನ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗಳಿಗೂ ಕೋಟ್ಯಾಂತರ₹ ಅನುದಾನ ನೀಡಿದ್ದೇನೆ ರಸ್ತೆ ನೀರಾವರಿ ಮೂಲ ಸೌಕರ್ಯ ಕಲ್ಪಿಸಿದ್ದೇನೆ. ನನ್ನ ಕೊನೆಯುಸಿರು ಇರುವವರೆಗೂ ಕ್ಷೇತ್ರದ ಜನರಿಗೆ ಹಗಲಿರುಳು ದುಡಿಯುತ್ತಿದ್ದೇನೆ ನನ್ನನ್ನು ಪ್ರೋತ್ಸಾಹಿಸುತ್ತಿರುವ ಶಕ್ತಿ ತುಂಬುತ್ತಿರುವ ನಿಮ್ಮ ಋಣವನ್ನು ತೀರಿಸುತ್ತಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ನಮ್ಮ ಕ್ಷೇತ್ರದ ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಿಲ್ಲ ಕೋಟ್ಯಂತರ ರೂ ಹಣ ಖರ್ಚಾಗಿದೆ ಇನ್ಮುಂದೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ ಎಂದು ಸರ್ಕಾರ ಹೇಳಿದಾಗ ವಿಧಾನಸಭೆಯಲ್ಲಿ ನಾನು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಕರೆಂಟ್ ಕಟ್ ಮಾಡದಂತೆ ಮನವಿ ಮಾಡಿದ್ದೇನೆ ನಮ್ಮ ರೈತರಿಗೆ ಯಾವುದೇ ಕಾರಣಕ್ಕೂ ಕಿಂಚಿತ್ ತೊಂದರೆಯಾಗಬಾರದು ಎಂದು ವಿಧಾನಸಭೆಯಲ್ಲಿ ನಾನು ಮನವಿ ಮಾಡಿದ್ದೇನೆ. ನನ್ನ ಮನವಿಗೆ ಸ್ಪಂದಿಸಿ ಸರ್ಕಾರ ವಿದ್ಯುತ್ ನೀಡಲು ಸಮ್ಮತಿ ನೀಡಿತು ಎಂದರು
ಶ್ರವಣಬೆಳಗೊಳದಿಂದ ಬೂಕನಬೆಟ್ಟ ಮಾರ್ಗವಾಗಿ ಹಿರೀಸಾವೆಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿತ್ತು ಬಾಣಂತಿಯರು ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಹೋಗಲು ತುಂಬಾ ತೊಂದರೆಯಾಗುತ್ತಿತ್ತು ಇದನ್ನು ಮನಗಂಡ ನಾನು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಸುಂದರವಾದ ರಸ್ತೆಯನ್ನು ಮತ್ತು ಮಟ್ಟನವಿಲೆಯಿಂದ ಜುಟ್ಟನ್ನ ನಲ್ಲಿ ಬಾರ್ ಗೆ ಹೋಗುವ ರಸ್ತೆ ಅಲ್ಲದೆ ಉಳಿಗೆರೆ ಕೆಂಪಿನಕೋಟೆ ಬಸವನಳ್ಳಿ ಸ್ವಾರಳ್ಳಿ ಪರಮ ದಡಿಘಟ್ಟ ಸುಂಡಳ್ಳಿ ಚನ್ನಹಳ್ಳಿ ಪೂಮಡಿಹಳ್ಳಿ ಹೀಗೆ ಹಲವಾರು ಹಳ್ಳಿಗಳಿಗೆ ನೀರು ಕಲ್ಪಿಸಿದ್ದೇನೆ ಎಂದರು.
ಈ ಭಾಗದಲ್ಲಿ ಬೆಂಗಾಡಾಗಿತ್ತು. ಈಗ ಎಲ್ಲ ತೆಂಗಿನ ಮರಗಳು ಹಸಿರಿನಿಂದ ನಳನಳಿಸುತ್ತಿವೆ ಫಲಭರಿತ ಕಾಯಿಗಳನ್ನು ನೀಡುತ್ತಿವೆ ಇದರಿಂದ ರೈತನ ಜೇಬು ತುಂಬುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು
ನಾನು ಮೊದಲ ಬಾರಿ ಶಾಸಕನಾದಾಗ ಆಗಿನಿಂದಲೂ ಪ್ರತಿ ಹಳ್ಳಿ ಹಳ್ಳಿಗಳಿಗೂ ಭೇಟಿ ನೀಡಿ ಕುಂದು ಕೊರತೆ ಸಮಸ್ಯೆಗಳನ್ನು ಅರಿತು ಕೋಟ್ಯಂತರ₹ಅನುದಾನ ನೀಡಿ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಿ ಜನರ ಸಮಸ್ಯೆಗೆ ಸ್ಪಂದಿಸಿ ದುಡಿಯುತ್ತಿದ್ದೇನೆ ಯಾರೋ ಒಂದಿಬ್ಬರು ಯಾವಾಗಲೋ ಸಾವಿರಾರು ರೂಪಾಯಿ ನೀಡಿದರೆ ಹಂತ ಅವರಿಗಿಂತ ಹೆಚ್ಚು ಕೋಟಿ ಕೋಟಿ ಅನುದಾನ ನೀಡುವ ನನಗೆ ಶಕ್ತಿ ತುಂಬಿ ನದಿಯನ್ನು ಸಹಕರಿಸಿ ಪ್ರೋತ್ಸಾಹಿಸಿ ಇನ್ನಷ್ಟು ಕೆಲಸ ಮಾಡಲು ಹುರುಪು ಹುಮ್ಮಸ್ಸು ನೀಡುವಂತೆ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಪ್ರತಿದಿನ ಏತನೀರಾವರಿ ಚಾನೆಲ್ಗಳಲ್ಲಿ ಕೆರೆಗಳಿಗೆ ನೀರು ಸರಿಯಾಗಿ ಹೋಗುತ್ತಿದೆಯಾ ಎಂದು ಪರಿಶೀಲಿಸಲು ಇಬ್ಬರನ್ನು ನೇಮಿಸಿದ್ದೇನೆ ಪ್ರತಿ ದಿನ ಮಧ್ಯ ರಾತ್ರಿಯೂ ಕೂಡ ಅವರಿಗೆ ಕರೆ ಮಾಡಿ ನೀರು ಹರಿಯುವಂತೆ ಸರಿಯಾಗಿ ನೋಡಿಕೊಳ್ಳಿ ಎಂದು ಹೇಳಿದ್ದೇನೆ ಎಂದರು
ನನ್ನ ಕ್ಷೇತ್ರದ ಎಲ್ಲಾ ಹಳ್ಳಿಯ ಜನರು ನಿಮಗೆ ಯಾವ ಸಹಾಯ ಬೇಕು ಏನು ಸೌಕರ್ಯ ಬೇಕು ಎಂದು ನಮ್ಮಲ್ಲಿ ಹೇಳಿದರೆ ಸ್ಪಂದಿಸಿ ಕೂಡಲೇ ಆ ಕೆಲಸವನ್ನು ನಾನು ಖಂಡಿತ ನೆರವೇರಿಸಿ ಕೊಡುತ್ತೇನೆಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಪರಮದೇವರಾಜೇಗೌಡ ಪಿ ಕೆ ಮಂಜೇಗೌಡ ಕೃಷ್ಣೇಗೌಡ ಜುಟ್ಟನಹಳ್ಳಿ ಗ್ರಾಮ ಪಂ ಅಧ್ಯಕ್ಷರಾದ ನಿಕಿಲ್ ಬೋರೇಗೌಡ ಗ್ರಾಪಂ ಸದಸ್ಯರಾದ ವಿಮಲಾ ನವೀನ್ ಮತ್ತಿತರರು ಉಪಸ್ಥಿತರಿದ್ದರು