ಸಿಡಿ ವಿವಾದದಲ್ಲಿ ಜಾರಕಿಹೊಳಿ ಸೇಫ್.. ಕೇಸ್ ಹಿಂಪಡೆದ ದೂರುದಾರ.. ರಮೇಶ್ ಜಾರಕಿಹೊಳಿಗೆ ಮತ್ತೆ ಸಚಿವ ಸ್ಥಾನ ಸಾಧ್ಯತೆ..
ಬೆಂಗಳೂರು: ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಹಲವು ಪ್ರಸಂಗಗಳು ಉದಾಹರಣೆಗಳಿವೆ. ಇದೀಗ ಅದೇ ರೀತಿ ಖ್ಯಾತಿಯ ರಮೇಶ್ ಜಾರಕಿಹೊಳಿ ವಿವಾದವೂ ಕ್ಲೈಮ್ಯಾಕ್ಸ್ ಘಟ್ಟಕ್ಕೆ ತಲುಪಿದೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ವಿವಾದಿತ ಸಿಡಿ ಪ್ರಕರಣ ಇದೀಗ ಅಚ್ಚರಿಯ ತಿರುವನ್ನು ಪಡೆದಿದ್ದು, ದೂರುದಾರ ದಿನೇಶ್ ಕಲ್ಲಳ್ಳಿ ಅವರು ಕುತೂಹಲಕಾರಿ ನಿರ್ಧಾರ ಕೈಗೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಕುರಿತು ಪೊಲೀಸರಿಗೆ ನೀಡಿದ್ದ ದೂರನ್ನು ಅವರು ಹಿಂಪಡೆಯುವ ತೀರ್ಮಾನಕ್ಕೆ ಬಂದಿದ್ದಾರೆನ್ನಲಾಗಿದ್ದು, ಈ ಮೂಲಕ ರಮೇಶ್ ಜಾರಕಿಹೊಳಿ ಸೇಫ್ ಝೋನ್ ತಲುಪಿದ್ದಾರೆ ಎಂಬ ಸಂತಸ ‘ಮುಂಬೈ ಫ್ರೆಂಡ್ಸ್’ ಗುಂಪಿನದ್ದು.
ಈ ನಡುವೆ, ವಿವಾದಿತ ಸಿಡಿ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ವಿರುದ್ದ ಇರುವುದು ಕಬ್ಬನ್ ಪಾರ್ಕ್‌ನ ಪ್ರಕರಣ ಮಾತ್ರ. ಆ ಪ್ರಕರಣ ಸುಖಾಂತ್ಯವಾದರೆ ಅವರು ನಿರ್ದೋಷಿ. ಹಾಗಾಗಿ ಅವರನ್ನು ಮತ್ತೆ ಮಂತ್ರಿಯನ್ನಾಗಿ ಮಾಡಬಹುದು ಎಂದು ಜಾರಕಿಹೊಳಿ ಆಪ್ತ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.